ಅಮೆರಿಕಾಗೆ ಹೊಸ ಮಾರ್ಗದಲ್ಲಿ ಸಂಚರಿಸಿ ಏರ್‌ ಇಂಡಿಯಾ ದಾಖಲೆ!

By Web DeskFirst Published Aug 17, 2019, 1:16 PM IST
Highlights

ಉತ್ತರ ಧ್ರುವ ಏರಿದ ಏರಿಂಡಿಯಾ| ಸ್ಯಾನ್‌ಫ್ರಾನ್ಸಿಸ್ಕೋಗೆ ಹೊಸ ಮಾರ್ಗದಲ್ಲಿ ಸಂಚಾರ| ಈ ಸಾಧನೆ ಮಾಡಿದ ಮೊದಲ ಭಾರತೀಯ ವಿಮಾನ

ಮುಂಬೈ[ಆ.17]: ಒಂದೆಡೆ ಆಗಸ್ಟ್‌ 15ರಂದು ರಾಷ್ಟ್ರಾದ್ಯಂತ 73ನೇ ಸ್ವಾತಂತ್ರ್ಯದ ಸಂಭ್ರಮಾಚರಣೆ ಮನೆ ಮಾಡಿದ್ದರೆ, ಇತ್ತ ಸರ್ಕಾರಿ ಸ್ವಾಮ್ಯದ ಏರ್‌ ಇಂಡಿಯಾ ವಿಮಾನವೊಂದು ಅಪರೂಪದ ಸಾಧನೆ ಮಾಡಿದೆ. ಶೂನ್ಯ ಡಿಗ್ರಿ ತಾಪಮಾನವಿರುವ ಉತ್ತರ ಧ್ರುವದ ಮೇಲೆ ವಿಮಾನ ಹಾರಾಟ ಮಾಡಿದ ದೇಶದ ಮೊದಲ ವಿಮಾನಯಾನ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ದೆಹಲಿಯಿಂದ ಅಮೆರಿಕದ ಸ್ಯಾನ್‌ಫ್ರಾನ್ಸಿಸ್ಕೋಗೆ ಸಂಚರಿಸುವ ನೇರ ವಿಮಾನ ಸಾಮಾನ್ಯವಾಗಿ ಅಟ್ಲಾಂಟಿಕ್‌ ಅಥವಾ ಪೆಸಿಫಿಕ್‌ ಸಮುದ್ರದ ಮೇಲೆ ಹಾದು ಹೋಗುತ್ತವೆ. ಪಾಕಿಸ್ತಾನ ತನ್ನ ವಾಯುಸೀಮೆ ಬಂದ್‌ ಮಾಡಿರುವ ಹಿನ್ನೆಲೆಯಲ್ಲಿ ಏರ್‌ ಇಂಡಿಯಾ ತನ್ನ ವಿಮಾನವನ್ನು ಉತ್ತರ ಧ್ರುವದ ಮೂಲಕ ಹಾರಿಸಿದೆ. ವಾಣಿಜ್ಯ ವಿಮಾನವೊಂದು ಈ ರೀತಿ ಉತ್ತರ ಧ್ರುವದಲ್ಲಿ ಹಾರಿದ್ದು ಇದೇ ಮೊದಲು.

ಲಾಭವೇನು?

- ಅಟ್ಲಾಂಟಿಕ್‌ ಅಥವಾ ಪೆಸಿಫಿಕ್‌ ಸಾಗರ ಮಾರ್ಗದಲ್ಲಿ ದೆಹಲಿಯಿಂದ ಸ್ಯಾನ್‌ಫ್ರಾನ್ಸಿಸ್ಕೋ ತಲುಪಲು 16 ಗಂಟೆ 45 ನಿಮಿಷ ಬೇಕು.

- ಉತ್ತರ ಧ್ರುವದ ಮೂಲಕ ಹೋದರೆ 14.59 ಗಂಟೆಗಳಲ್ಲಿ ಸ್ಯಾನ್‌ಫ್ರಾನ್ಸಿಸ್ಕೋ ಮುಟ್ಟಬಹುದು. ಇದರಿಂದ 1.44 ಗಂಟೆ ಉಳಿತಾಯ.

- ಒಂದು ಬಾರಿ ಸಂಚಾರದಿಂದ 2ರಿಂದ 7 ಟನ್‌ವರೆಗೆ ಇಂಧನ ಉಳಿತಾಯ. ತನ್ಮೂಲಕ ಇಂಗಾಲ ಹೊರಸೂಸುವಿಕೆ ಪ್ರಮಾಣ ಕೂಡ ಇಳಿಕೆ

click me!