
ಬೆಂಗಳೂರು(ಅ.7): ನಾಳೆ ಭಾರತೀಯ ವಾಯುಸೇನೆಯ 86ನೇ ವರ್ಷಾಚರಣೆ. ಕಳೆದ 8 ದಶಕಗಳಿಗೂ ಹೆಚ್ಚು ಕಾಲ ದೇಶದ ವಾಯುಗಡಿಗಳನ್ನು ರಕ್ಷಿಸುವ ಜವಾಬ್ದಾರಿ ಹೊತ್ತಿರುವ ವಾಯುಸೇನೆ, ಈ ನಿಟ್ಟಿನಲ್ಲಿ ದೇಶಕ್ಕೆ ಸಲ್ಲಿಸಿದ ಸೇವೆ ಅತ್ಯಂತ ಅಮೂಲ್ಯ.
ಅದರಂತೆ ನಾಳಿನ ವಾಯುಸೇನೆ ವರ್ಷಾಚರಣೆ ವೇಳೆ, 1948ರಲ್ಲಿ ಪಾಕಿಸ್ತಾನದ ಜೊತೆಗಿನ ಯುದ್ಧದಲ್ಲಿ ಕಾಶ್ಮೀರವನ್ನು ಪಾಕ್ ದಾಳಿಯಿಂದ ರಕ್ಷಿಸಿದ್ದ ಐತಿಹಾಸಿಕ ಡಕೋಟಾ DC3 Dakota #VP905 ಪರುಶರಾಮ ಯುದ್ಧ ವಿಮಾನ ಭಾಗವಹಿಸಲಿದೆ.
ಸಂಸದ ರಾಜೀವ್ ಚಂದ್ರಶೇಖರ್ ತಮ್ಮ ತಂದೆ ನಿವೃತ್ತ ಏರ್ ಕಮಾಂಡರ್ ಎಂ.ಕೆ. ಚಂದ್ರಶೇಖರ್ ಸೇನೆಯಲ್ಲಿ ಸಲ್ಲಿಸಿದ ಅಭೂತಪೂರ್ವ ಸೇವೆಯ ಗೌರವಾರ್ಥ, ಡಕೋಟಾ DC3 Dakota #VP905 ಪರುಶರಾಮ ಯುದ್ಧ ವಿಮಾನವನ್ನು ಸಂಪೂರ್ಣ ನವೀಕರಿಸಿದ್ದಾರೆ. ನಾಳಿನ ವಾಯುಸೇನೆ ವರ್ಷಾಚರಣೆ ಪರೇಡ್ ನಲ್ಲಿ ಈ ಯುದ್ಧ ವಿಮಾನದ ಕೀಯನ್ನು ರಾಜೀವ್ ಚಂದ್ರಶೇಖರ್ ಅವರು ವಾಯುಸೇನೆಯ ಏರ್ ಚೀಫ್ ಮಾರ್ಷಲ್ ಬಿಎಸ್ ಧನೋವಾ ಅವರಿಗೆ ಹಸ್ತಾಂತರಿಸಲಿದ್ದಾರೆ.
1948 ರ ಭಾರತ-ಪಾಕ್ ಯುದ್ಧದ ನೆನಪುಗಳನ್ನು ಮೆಲುಕು ಹಾಕಿರುವ ನಿವೃತ್ತ ಏರ್ ಕಮಾಂಡರ್ ಎಂ.ಕೆ. ಚಂದ್ರಶೇಖರ್, ಡಕೋಟಾ DC3 Dakota #VP905 ಪರುಶರಾಮ ಭಾರತೀಯ ಸೇನೆಯ ಸೈನಿಕರನ್ನು ಹೊತ್ತು ಯುದ್ಧ ಭೂಮಿಯಲ್ಲಿ ಇಳಿಸಿದ ಮೊದಲ ವಾಯುಸೇನಾ ವಿಮಾನ ಎಂದು ಹೇಳಿದರು.
ಯುದ್ಧದ ಸಂದರ್ಭದಲ್ಲಿ ಅದಾಗಲೇ ಶ್ರೀನಗರಕ್ಕೆ ಕಾಲಿಟ್ಟಿದ್ದ ಪಾಕಿಸ್ತಾನಿ ಭಯೋತ್ಪಾದಕರಿಂದ ಸ್ಥಳಿಯರನ್ನು ರಕ್ಷಿಸುವಲ್ಲಿ ಡಕೋಟಾ DC3 Dakota #VP905 ಪರುಶರಾಮ ಯುದ್ಧ ವಿಮಾನ ಮಹತ್ವದ ಪಾತ್ರ ನಿರ್ವಹಿಸಿತ್ತು ಎಂದು ಎಂ.ಕೆ. ಚಂದ್ರಶೇಖರ್ ಆ ದಿನಗಳ ಮೆಲುಕು ಹಾಕಿದರು.
ಒಂದು ವೇಳೆ ಡಕೋಟಾ DC3 Dakota #VP905 ಪರುಶರಾಮ ಯುದ್ಧ ವಿಮಾನ ಇರದಿದ್ದರೆ 1948 ರ ಯುದ್ಧದಲ್ಲಿ ಪಾಕಿಸ್ತಾನದಿಂದ ಕಾಶ್ಮೀರವನ್ನು ರಕ್ಷಿಸುವುದು ಕಷ್ಟಕರವಾಗಿತ್ತು ಎಂದು ಎಂ.ಕೆ. ಚಂದ್ರಶೇಖರ್ ಹೇಳಿದರು.
ಇನ್ನು ಡಕೋಟಾ DC3 Dakota #VP905 ಪರುಶರಾಮ ಯುದ್ಧ ವಿಮಾನ ಕುರಿತು ಮಾಹಿತಿ ನೀಡಿದ ಸಂಸದ ರಾಜೀವ್ ಚಂದ್ರಶೇಖರ್, ಸತತ 6 ವರ್ಷಗಳ ಪರಿಶ್ರಮದಿಂದ ಈ ಯುದ್ಧ ವಿಮಾನವನ್ನು ನವೀಕರಿಸಲಾಗಿದ್ದು, ನಾಳಿನ ವಾಯುಸೇನೆ ವರ್ಷಾಚರಣೆ ವೇಳೆ ಗಾಜಿಯಾಬಾದ್‌ನ ಹಿಂದನ್ ವಾಯುನೆಲೆಯಲ್ಲಿ ಹಾರಾಟ ನಡೆಸಲಾಗುವುದು ಎಂದು ತಿಳಿಸಿದ್ದಾರೆ.
"
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.