ರಾಮನಗರ ಉಪಚುನಾವಣೆ ಮೈತ್ರಿಗೆ ಬಿಗ್ ಶಾಕ್: ಎಂಎಲ್ಸಿ ಪುತ್ರ ಬಿಜೆಪಿಯತ್ತ?

By Web Desk  |  First Published Oct 7, 2018, 4:57 PM IST

ರಾಮನಗರ ಉಪಚುನಾವಣೆ ಮೈತ್ರಿಗೆ ಅಪಸ್ವರ ಕೇಳಿಬಂದಿದ್ದು, ಹಾಲಿ ಕಾಂಗ್ರೆಸ್ ವಿಧಾನ ಪರಿಷತ್ ಸದಸ್ಯರ ಪುತ್ರ ಬಿಜೆಪಿ ಸೇರಲು ಮುಂದಾಗಿದ್ದಾರೆ.


ರಾಮನಗರ, [ಅ.07]: ರಾಮನಗರ ವಿಧಾನಸಭಾ ಉಪಚುನಾವಣೆಗೆ ದಿನಗಣನೆ ಆರಂಭವಾಗುತ್ತಿದ್ದಂತೆಯೇ ಕಾಂಗ್ರೆಸ್ ನಲ್ಲಿ ಅಸಮಧಾನ ಭುಗಿಲೆದ್ದಿದೆ.
 
ರಾಮನಗರ ಉಪಚುನಾವಣೆ ಮೈತ್ರಿಗೆ ಅಪಸ್ವರ ಕೇಳಿಬಂದಿದೆ. ಹಾಲಿ ಕಾಂಗ್ರೆಸ್ ವಿಧಾನ ಪರಿಷತ್ ಸದಸ್ಯ ಸಿ.ಎಂ.ಲಿಂಗಪ್ಪ ವಿರೋಧ ವ್ಯಕ್ತಪಡಿಸಿದ್ದು, ಇದೀಗ ಲಿಂಗಪ್ಪ ಅವರ ಪುತ್ರ ಬಿಜೆಪಿಯತ್ತ ಚಿತ್ತ ನೆಟ್ಟಿದ್ದಾರೆ ಎನ್ನಲಾಗುತ್ತಿದೆ.

ರಾಮನಗರ ಕ್ಷೇತ್ರಕ್ಕೆ ಅನಿತಾ ಕುಮಾರಸ್ವಾಮಿ ಫೈನಲ್ ಅಲ್ಲ?

Tap to resize

Latest Videos

ಇದಕ್ಕೆ ಪೂರಕಬಂತೆ ಸಿ.ಎಂ.ಲಿಂಗಪ್ಪ ಪುತ್ರ ಹಾಗೂ ಕೆಲ ಮುಖಂಡರು ಬಿಜೆಪಿ ಮುಖಂಡರು ಇಂದು ಮಾಜಿ ಶಾಸಕ ಸಿ.ಪಿ.ಯೋಗೀಶ್ವರ್ ನಿವಾಸದಲ್ಲಿ ಕಾಣಿಸಿಕೊಂಡಿದ್ದು, ಹಲವು ವಿಷಯಗಳ ಬಗ್ಗೆ ಚರ್ಚೆ ನಡೆಸಿದ್ದಾರೆ. ಒಂದು ವೇಳೆ ಚಂದ್ರಶೇಖರ್ ಅವರು ಬಿಜೆಪಿ ಸೇರಿದರೆ ಕಾಂಗ್ರೆಸ್ ನ ಮತಗಳು ಜೆಡಿಎಸ್ ಬದಲಾಗಿ ಬಿಜೆಪಿ ಪಾಲಾಗುವ ಸಾಧ್ಯತೆಗಳಿವೆ. 

ರಾಮನಗರದಲ್ಲಿ ನಿಲ್ಲೋದು ನಾನೇ ಗೆಲ್ಲೋದು ನಾನೇ

ಚಂದ್ರಶೇಖರ್ ಹಾಗೂ ಯೋಗೀಶ್ವರ್ ಅವರ ಈ ಭೇಟಿ ರಾಮನಗರ ರಾಜಕಾರಣದಲ್ಲಿ ಭಾರೀ ಕುತೂಹಲ ಮೂಡಿಸಿದೆ. ರಾಮನಗರ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಕಣಕ್ಕಿಳಿಸಲೇಬೇಕು ಎಂದು ಇತ್ತೀಚೆಗೆ ಅಷ್ಟೇ ವಿಧಾನ ಪರಿಷತ್ ಸದಸ್ಯ ಸಿ.ಎಂ.ಲಿಂಗಪ್ಪ ಹೇಳಿಕೆ ನೀಡಿದ್ದರು.

click me!