
ಬೆಂಗಳೂರು (ಫೆ.09): ಅಕ್ರಮ ಶಸ್ತ್ರಾಸ್ತ್ರ ಆರೋಪಿಯಾಗಿರೋ ಶ್ರೀಧರ್ ಚಿಕಿತ್ಸೆ ಇನ್ನೂ ಮುಂದುವರೆದಿದೆ . ನಿಜಕ್ಕೂ ಶ್ರೀಧರ್ ಗೆ ಏನಾಗಿದೆ ಅನ್ನುವುದರ ಬಗ್ಗೆ ಇನ್ನೂ ಸ್ಪಷ್ಟನೆ ಇಲ್ಲ. ಬಂಧನದಿಂದ ತಪ್ಪಿಸಿಕೊಳ್ಳಲು ಶ್ರೀಧರ್ ಪ್ಲಾನ್ ಮಾಡ್ತಿದಾರಾ ಅನ್ನೊ ಅನುಮಾನ ಈಗ ಸಾರ್ವ ಜನಿಕರಲ್ಲಿ ಮೂಡಿದೆ .
ಅಗ್ನಿ ಶ್ರೀಧರ್ ಹಠಾತ್ ಲಘು ಹೃದಾಯಾಘಾತದಿಂದ ಆಸ್ಪತ್ರೆಗೆ ಸೇರಿ ಇಂದಿಗೆ ಎರಡು ದಿನ. ಪ್ರತಿಷ್ಟಿತ ಆಸ್ಪತ್ರೆಯಲ್ಲಿ ಹಗಲು ರಾತ್ರಿ ಚಿಕಿತ್ಸೆ ನೀಡಿದ್ರೂ ಇನ್ನೂ ಚೇತರಿಕೆ ಹಂತದಲ್ಲಿರುವ ಅಗ್ನಿ ಶ್ರೀಧರ್ ಬಂಧನ ಭೀತಿಯಿಂದ ತತ್ತರಿಸಿದ್ದಾರಾ ಅನ್ನುವ ಅನುಮಾನ ವ್ಯಕ್ತವಾಗುತ್ತಿದೆ .
ಎಲ್ಲಾ ಸರಿ ಹೋಗಿದ್ದರೆ ಶೂಟೌಟ್ ಪ್ರಕರಣದಲ್ಲಿ ಅಗ್ನಿಶ್ರೀಧರ್ ಅವರ ಕೈವಾಡ ಶಂಕೆ ಹಿನ್ನಲೆ ಅವರನ್ನು ವಿಚಾರಣೆ ನಡೆಸಬೇಕಿತ್ತು ಆದರೆ ಅವರ ಅನಾರೋಗ್ಯದ ನೆಪ ಪೊಲೀಸರ ತನಿಖೆಗೆ ಅಡ್ಡಿಯಾಗಿದೆ. ಇನ್ನು ಅವರ ಆರೋಗ್ಯದ ಬಗ್ಗೆ ವೈದ್ಯರನ್ನ ವಿಚಾರಿಸಿದರೆ ಈ ಬಗ್ಗೆ ಅಧಿಕೃತವಾಗಿ ಏನನ್ನೂ ಹೇಳಿಲ್ಲ.
ಆಸ್ಪತ್ರೆ ದಾಖಾಲಾದ ಬಳಿಕ ಶ್ರೀಧರ್ ವಕೀಲರ ಮೂಲಕ ಜಾಮೀನಿಗೂ ಅರ್ಜಿ ಹಾಕಿದ್ದಾರೆ . ಇನ್ನು ಸಾಗರ್ ಆಸ್ಪತ್ರೆಯಲ್ಲಿ ಅಗ್ನಿ ಇರುವ ಕಾರಣ ಪೊಲೀಸ್ ಬಂದೋಬಸ್ತ್ ಮುಂದುವರೆದಿದೆ . ಇಂದು ಕೂಡ ಅವರ ಅನಾರೋಗ್ಯ ವಿಚಾರಿಸಲು ಪತ್ರಕರ್ತ ಇಂದ್ರಜೀತ್ ಲಂಕೇಶ್ ಕೂಡ ಬಂದಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.