
ಪ್ಯಾಲೆಸ್ತೀನ್(ಫೆ.09): ಸಾಮಾನ್ಯವಾಗಿ 90 ವರ್ಷಕ್ಕೆ ಕಾಲಿಡುತ್ತಿದ್ದಂತೆ ಮುಪ್ಪು ಆವರಿಸುತ್ತದೆ. ಆದರೆ, ಪ್ಯಾಲೆಸ್ತೀನ್‌ನ ವ್ಯಕ್ತಿಯೊಬ್ಬರು ಈ ಮಾತನ್ನು ಸುಳ್ಳಾಗಿಸಿದ್ದಾನೆ.
ಮಹಮೌದ್ ಅಲ್-ಆದಂ ಎಂಬಾತ ತನ್ನ 92ನೇ ವಯಸ್ಸಿನಲ್ಲಿ ಮಗುವಿಗೆ ತಂದೆ ಎನಿಸಿಕೊಂಡಿದ್ದಾನೆ. ಮೊದಲ ಪತ್ನಿ ನಿಧನದ ಬಳಿಕ ಅಲ್ ಆದಂ 42 ವರ್ಷದ ಅಬೀರ್ ಎಂಬಾಕೆಯನ್ನು ಎರಡನೇ ಮದುವೆಯಾಗಿದ್ದ. ಕಿವುಡಿಯಾಗಿರುವ ಅಬೀರ್'ಗೆ ತನ್ನ ವಯೋವೃದ್ಧ ಪತಿಯಿಂದ ಮಗುವಾಗವುದೆಂದು ನಿರೀಕ್ಷೆಯಿರಲಿಲ್ಲವಂತೆ. ಹೀಗಾಗಿ ಇಳಿವಯಸ್ಸಿನಲ್ಲೂ ಮಗುವಿನ ತಂದೆಯಾಗಿರುವುದು ಆಕೆಗೂ ಅಚ್ಚರಿ ಮೂಡಿಸಿದೆಯಂತೆ. ತಮಗೆ ಮಗುವಾಗಿರುವುದಕ್ಕೆ ಅಬೀರ್ ಕೂಡ ತುಂಬಾ ಸಂತುಷ್ಟಳಾಗಿದ್ದಾಳೆ ಎಂದು ಆದಂ ತಿಳಿಸಿದ್ದಾರೆಂದು ಅಲ್ ಅರೇಬಿಯಾ ಇಂಗ್ಲೀಷ್ ವರದಿ ಮಾಡಿದೆ.
ಈಗಾಗಲೇ ಮೊದಲ ಪತ್ನಿಯಿಂದ ಅಲ್-ಆದಂ ಎಂಟು ಹೆಣ್ಣು ಮಕ್ಕಳು ಮತ್ತು ಐವರು ಗಂಡು ಮಕ್ಕಳ ತಂದೆ ಎನಿಸಿದ್ದಾನೆ. ಈಗಿನ ಮಗುವಿಗೆ ತಮಾರಾ ಎಂದು ನಾಮಕರಣ ಮಾಡಲಾಗಿದೆ.
1998ರಲ್ಲಿ 92 ವರ್ಷ 10 ತಿಂಗಳಿನ ವಯೋಮಾನದಲ್ಲಿ ತಂದೆ ಎನಿಸಿಕೊಂಡ ಲೆಸ್ ಕೋಲೈ ಜಗತ್ತಿನ ಅತ್ಯಂತ ಹಿರಿಯ ವಯಸ್ಸಿನ ತಂದೆ ಎಂದು ಗಿನ್ನೀಸ್ ಬುಕ್ ದಾಖಲೆಗೆ ಪಾತ್ರರಾಗಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.