ಬಿಜೆಪಿಯಲ್ಲಿ ಮತ್ತೆ ಬುಗಿಲೆದ್ದ ಒಳಜಗಳ: ಬಿಎಸ್‌ವೈ ವಿರುದ್ದ ಹೌಹಾರಿದ ಈಶ್ವರಪ್ಪ ಬಣ

Published : Mar 07, 2017, 02:41 AM ISTUpdated : Apr 11, 2018, 12:47 PM IST
ಬಿಜೆಪಿಯಲ್ಲಿ ಮತ್ತೆ ಬುಗಿಲೆದ್ದ ಒಳಜಗಳ: ಬಿಎಸ್‌ವೈ ವಿರುದ್ದ ಹೌಹಾರಿದ ಈಶ್ವರಪ್ಪ ಬಣ

ಸಾರಾಂಶ

ರಾಜ್ಯ ಬಿಜೆಪಿಯ ಪದಾಧಿಕಾರಿಗಳ ನೇಮಕ ನ್ಯಾಯಸಮ್ಮತವಾಗಿ ಆಗಿಲ್ಲ ಎಂಬ ಅಸಮಾಧಾನ ಮುಂದಿಟ್ಟುಕೊಂಡು ಬಿಜೆಪಿಯ ಎರಡನೇ ಸಾಲಿನ ನಾಯಕರು ಎರಡನೇ ಸುತ್ತಿನ ಭಿನ್ನಮತ ಪ್ರಕಟಿಸಿದ್ದಾರೆ. ಬೆಂಗಳೂರಿನಲ್ಲಿ ಅತೃಪ್ತ ನಾಯಕರು ಪಕ್ಷದ ಪದ್ದತಿಯ ಪ್ರಕಾರ ಕಾರ್ಯ ನಿರ್ವಹಿಸದಿದ್ದರೆ ನಾವು ಭಿನ್ನಮತೀಯರು ಅಂತ ತೊಡೆತಟ್ಟಿದ್ದಾರೆ.

ಬೆಂಗಳೂರು(ಮಾ.07): ರಾಜ್ಯ ಬಿಜೆಪಿಯ ಪದಾಧಿಕಾರಿಗಳ ನೇಮಕ ನ್ಯಾಯಸಮ್ಮತವಾಗಿ ಆಗಿಲ್ಲ ಎಂಬ ಅಸಮಾಧಾನ ಮುಂದಿಟ್ಟುಕೊಂಡು ಬಿಜೆಪಿಯ ಎರಡನೇ ಸಾಲಿನ ನಾಯಕರು ಎರಡನೇ ಸುತ್ತಿನ ಭಿನ್ನಮತ ಪ್ರಕಟಿಸಿದ್ದಾರೆ. ಬೆಂಗಳೂರಿನಲ್ಲಿ ಅತೃಪ್ತ ನಾಯಕರು ಪಕ್ಷದ ಪದ್ದತಿಯ ಪ್ರಕಾರ ಕಾರ್ಯ ನಿರ್ವಹಿಸದಿದ್ದರೆ ನಾವು ಭಿನ್ನಮತೀಯರು ಅಂತ ತೊಡೆತಟ್ಟಿದ್ದಾರೆ.

ಇದು ಬಿಜೆಪಿಯ ಭಿನ್ನಮತೀಯ ನಾಯಕರು ಪಕ್ಷದ ರಾಜ್ಯ ನಾಯಕತ್ವದ ವಿರುದ್ಧ ತೊಡೆ ತಟ್ಟಿದ ಪರಿ. ಬಿಜೆಪಿಯಲ್ಲಿ ಎಲ್ಲವೂ ಸರಿಯಾಗಿದೆ, ಯಾವುದೇ ಒಡಕಿಲ್ಲ ಅಂತ ಸಂದೇಶ ರವಾನಿಸುವ ಯತ್ನದಲ್ಲಿ ಯಡಿಯೂರಪ್ಪ ಇರುವಾಗಲೇ, ಬಿಜೆಪಿಯ ಅತೃಪ್ತರ ಬಣ ಬಂಡಾಯದ ಮುನ್ಸೂಚನೆ ನೀಡಿದೆ. ಬೆಂಗಳೂರಿನ ಶಾಸಕರ ಭವನದ ನಡೆದ ಸುದ್ದಿಗೋಷ್ಠಿ ನಡೆಸಿ, ​ಅಮಿತ್​ ಶಾ ಸೂಚನೆಯ ನಂತರವೂ ಪಕ್ಷದ ಪದಾಧಿಕಾರಿಗಳ ನೇಮಕದಲ್ಲಾದ ತಪ್ಪುಗಳ ಸರಿಪಡಿಸಿಲ್ಲ ಅಂತ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬಿಎಸ್​'ವೈಗೆ ಸೆಡ್ಡು!

ಈ ಹಿಂದೆ ಸೊಗಡು ಶಿವಣ್ಣ ಸೇರಿದಂತೆ ಪಕ್ಷದ ಕೆಲ ನಾಯಕರ ಮೇಲೆ ಕೈಗೊಳ್ಳಲಾಗಿದ್ದ ಶಿಸ್ತುಕ್ರಮದ ಹಿಂತೆಗೆಯದ ಬಗ್ಗೆ ಈ ಭಿನ್ನಮತೀಯ ನಾಯಕರಿಗೆ ತೀವ್ರ ಅಸಮಾಧಾನವಿದೆ. ಜೊತೆಗೆ ಕೇವಲ ಅಸಮಾಧಾನಗೊಂಡವರ ಕರೆದು ಸಭೆ ನಡೆಸದೇ, ಎಲ್ಲ ನಾಯಕರ ಒಟ್ಟಿಗೇ ಸಭೆ ಕರೆದಿರುವುದೇ ಇದಕ್ಕೆಲ್ಲ ಕಾರಣ. ಅಷ್ಟೇ ಅಲ್ಲ, ಸ್ವತಃ ತಾವೇ ರಾಜ್ಯ ಪ್ರವಾಸ ಮಾಡಿ ಇದೇ 15ರಂದು ವರದಿ ಜನರ ಮುಂದಿಡಲು ಸಿದ್ಧರಾಗಿದ್ದಾರೆ.

ಇತ್ತ ಯಡಿಯೂರಪ್ಪ ಜಿಲ್ಲಾವಾರು ಪಕ್ಷದ ಎಲ್ಲ ನಾಯಕರ ಕರೆದು ಸಭೆ ನಡೆಸುತ್ತಿದ್ದಾರೆ. ಈ ಹಂತದಲ್ಲೇ ಮತ್ತೊಮ್ಮೆ ಸ್ಪೋಟಗೊಂಡ ಅಸಮಾಧಾನ ಆಗಿರುವ ತಪ್ಪು ಸರಿಪಡಿಸಿಕೊಳ್ಳದಿದ್ದಲ್ಲಿ ಮುಂದೊಮ್ಮೆ ಭಾರೀ ಬಂಡಾಯದ ಮುನ್ಸೂಚನೆ ನೀಡಿದೆ.

ವೀರೇಂದ್ರ ಉಪ್ಪುಂದ, ಸುವರ್ಣನ್ಯೂಸ್​.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಗಾಂಧೀಜಿ ಹೆಸರು ರದ್ದತಿ ಅವರ 2ನೇ ಹತ್ಯೆಗೆ ಸಮ : ಚಿದಂಬರಂ ಕಿಡಿ
ಸಂಸತ್ತಲ್ಲಿ ಇ-ಸಿಗರೇಟು ಸೇದಿದ್ದು ಕೀರ್ತಿ ಆಜಾದ್ : ಬಿಜೆಪಿ