ಪಲ್ವಾಮದಲ್ಲಿ ಉಗ್ರರ ಅಟ್ಟಹಾಸ | 44 ಯೋಧರು ಹುತಾತ್ಮ | ದೇಶಾದ್ಯಂತ ವ್ಯಾಪಕ ಖಂಡನೆ | ಪಾಕ್ ಭೇಟಿ ರದ್ದುಗೊಳಿಸಿದ ಜಾವೇದ್ ಅಖ್ತರ್ ದಂಪತಿ
ಮುಂಬೈ (ಫೆ. 15): ಪುಲ್ವಾಮಾ ದಾಳಿಯನ್ನು ಖಂಡಿಸಿ ಖ್ಯಾತ ಸಾಹಿತಿ ಜಾವೆದ್ ಅಖ್ತರ್ ಹಾಗೂ ಪತ್ನಿ ಶಬನಾ ಅಜ್ಮಿ ಪಾಕಿಸ್ತಾನ ಭೇಟಿಯನ್ನು ಸ್ಥಗಿತಗೊಳಿಸಿದ್ದಾರೆ.
ಪಾಕ್ ಹೈಕಮಿಷನರ್‌ಗೆ ಸಮನ್ಸ್ ಜಾರಿ: ಭಾರತದ ಹೈಕಮಿಷನರ್‌ಗೆ ಬುಲಾವ್!
ಕೈಫಿ ಅಜ್ಮಿ ಎಂಬ ಕವಿಯ ಬಗ್ಗೆ ಮಾತನಾಡಲು ಕರಾಚಿ ಆರ್ಟ್ ಕೌನ್ಸಿಲ್ ಜಾವೆದ್ ದಂಪತಿಗಳನ್ನು ಆಹ್ವಾನಿಸಿತ್ತು. ಆದರೆ ಪುಲ್ವಾಮಾ ದಾಳಿ ಹಿನ್ನಲೆಯಲ್ಲಿ ಈ ಭೇಟಿಯನ್ನು ರದ್ದುಗೊಳಿಸಿದ್ದಾರೆ.
ಪುಲ್ವಾಮ ದಾಳಿ: ಮಂಗಳೂರು ಮಸೀದಿಗಳಲ್ಲಿ ಖಂಡನಾ ಸಭೆ; ಯೋಧರ ಜತೆ ನಿಲ್ಲಲು ಕರೆ
ಭಾರತೀಯ ಯೋಧರ ಮೇಲೆ ಪುಲ್ವಾಮ ಪ್ರದೇಶದಲ್ಲಿ ಉಗ್ರರು ಆತ್ಮಾಹುತಿ ದಾಳಿ ನಡೆಸಿದ್ದಾರೆ. ಉಗ್ರರ ಪೈಶಾಚಿಕ ದಾಳಿಗೆ 44 ಯೋಧರು ಬಲಿಯಾಗಿದ್ದಾರೆ. ಉಗ್ರರ ಈ ದಾಳಿಯನ್ನು ಎಲ್ಲಾ ದೇಶಗಳು ಖಂಡಿಸಿವೆ. ದೇಶಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.