
ಬೆಂಗಳೂರು (ಫೆ.02): ಕಳೆದ 10 ವರ್ಷಗಳಿಂದ ಈ ವ್ಯಕ್ತಿ ವಿಚಿತ್ರ ರೋಗಗಳಿಂದ ಬಳಲುತ್ತಿದ್ದಾನೆ. ದೇಹದ ಕೈ ಹಾಗೂ ಕಾಲುಗಳ ಚರ್ಮ ಮರದ ಕೊರಡಿನಂತೆ ಬೆಳೆಯುವ ವಿಚಿತ್ರ ರೋಗವಿದು. ವೈದ್ಯಕೀಯ ಭಾಷೆಯಲ್ಲಿ 'ಎಪಿಡರ್ಮೋಡಿಸ್'ಪ್ಲಾಸಿಯಾ ವರಸಿಫಾರ್ಮಿಸ್' ಎಂದು ಇದರ ಹೆಸರು. ವೈದ್ಯಲೋಕಕ್ಕೆ ಇದೊಂದು ಸವಾಲಾಗಿದೆ.
ಈ ವ್ಯಕ್ತಿಯ ಹೆಸರು ಅಬುಲ್ ಬಜಾಂದರ್. ಟ್ರೀ ಮ್ಯಾನ್ ಎಂದೇ ಇವರು ಪರಿಚಿತ. ಅಬುಲ್ ಬಜಾಂದರ್‌ಗೆ ಢಾಕಾದ ವೈದ್ಯಕೀಯ ಕಾಲೇಜಿನ ಆಸ್ಪತ್ರೆಯಲ್ಲಿ ಒಂದು ವರ್ಷಕ್ಕೂ ಅಧಿಕ ಕಾಲ ಸರಕಾರದ ವೆಚ್ಚದಲ್ಲಿಯೇ ಚಿಕಿತ್ಸೆ ದೊರೆತಿದೆ. ಸುಮಾರು 24 ಶಸ್ತ್ರ ಚಿಕಿತ್ಸೆ ಮಾಡಿದರೂ ವೈದ್ಯಲೋಕಕ್ಕೆ ಸವಾಲಾಗಿದೆ ಈ ರೋಗ. ಮೊದ ಮೊದಲು ಗುಣಮುಖರಾದಂತೆ ಕಾಣುತ್ತಿದ್ದ ವ್ಯಕ್ತಿಗೆ ಇದೀಗ ರೋಗ ಮತ್ತೆ ಮರುಕಳಿಸಿದ್ದು ಜೀವನದಲ್ಲಿ ಭರವಸೆಯನ್ನೇ ಕಳೆದುಕೊಂಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.