
ಬೆಂಗಳೂರು(ಫೆ.02): ಇತ್ತೀಚಿಗಷ್ಟೆ ಕೆಲವು ತಿಂಗಳ ಹಿಂದೆ ಕಾಂಗ್ರೆಸ್ ನಾಯಕರ ಸಿಡಿ ಬಿಡುಗಡೆಯಾಗಿ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿತ್ತು. ತದ ನಂತರ ಕೆಲವು ತಿಂಗಳ ನಂತರ ಸಮರ್ಪಕ ದಾಖಲೆ ಇಲ್ಲದ ಕಾರಣ ಪೊಲೀಸರು ಮಾಜಿ ಸಚಿವರ ಪ್ರಕರಣಕ್ಕೆ ಕ್ಲೀನ್ ಚಿಟ್ ನೀಡಿದ್ದರು. ಸ್ವಾಮೀಜಿಯೊಬ್ಬರ ಸಿಡಿ ಬಿಡುಗಡೆಯಾಗಿ ಮಠದಿಂದ ಅವರನ್ನು ಗೇಟ್ ಪಾಸ್ ನೀಡಲಾಗಿತ್ತು.
ಈಗ ಮತ್ತೊಬ್ಬ ಪ್ರಬಾವಿ ನಾಯಕರ ಕಾಮಕೇಳಿ ಸಿಡಿ ನಾಳೆ ಬಿಡುಗಡೆಯಾಗಲಿಯಂತೆ. ಆರ್'ಟಿಐ ಕಾರ್ಯಕರ್ತ ರಾಮಮೂರ್ತಿ ಗೌಡ ಎಂಬುವವರು ಫೆ.3ರಂದು ಪ್ರೆಸ್ ಕ್ಲಬ್'ನಲ್ಲಿ ಬಿಡುಗಡೆ ಮಾಡುವುದಾಗಿ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದ್ದಾರೆ. ಪ್ರಕಟಣೆಯಲ್ಲಿರುವ ಮಾಹಿತಿಯಂತೆ ಬ್ಲೂ'ಫಿಲಂನಲ್ಲಿರುವ ನಾಯಕರು ರಾಜ್ಯದ ಪ್ರಮುಖ ಹುದ್ದೆಯಲ್ಲಿರುವ ನಾಯಕರು. ಈ ಸಿಡಿ ಬಿಡುಗಡೆಯಾದರೆ ರಾಷ್ಟ್ರ ರಾಜಕಾರಣದಲ್ಲಿ ಸಂಚಲನ ಮೂಡಿಸುತ್ತದೆ' ಎಂದು ತಿಳಿಸಿದ್ದಾರೆ.
ಸಿಡಿ ಬಿಡುಗಡೆಯ ಸಂದರ್ಭದಲ್ಲಿ ಆರ್'ಟಿಐ ಕಾರ್ಯಕರ್ತರಾದ ರಾಜಶೇಖರ್ ಮುಲಾಲಿ, ಮಂಜುನಾಥ, ನರಸಿಂಹಮೂರ್ತಿ, ಭಾಸ್ಕರನ್,ರಾಘವೇಂದ್ರ, ವಕೀಲರಾದ ನಟರಾಜ ಶರ್ಮಾ, ದೊರೆರಾಜು ಮುಂತಾದವರು ಭಾಗವಹಿಸಲಿದ್ದಾರೆ ಎಂಬುದಾಗಿ ಇದೆ.
2 ಸಿಡಿಗಳಿವೆ
ಒಂದು ಸಿಡಿಯ ಮೂಲ ಕೇರಳ ರಾಜ್ಯದ ಕೊಚ್ಚಿನ್ ನಗರದಾಗಿದ್ದರೆ, ಮತ್ತೊಂದು ಸಿಡಿ ರಾಜ್ಯದ ಪ್ರಮುಖ ನಗರದಂತೆ. ಸಿಡಿ ಬಿಡುಗಡೆಯ ಸಮಾರಂಭಕ್ಕೆ ಮಾಧ್ಯಮದವರನ್ನು ಸಮಾಜ ಕಾರ್ಯಕರ್ತರು ಹಾಗೂ ಬುದ್ಧಿಜೀವಿಗಳನ್ನು ಸ್ವಾಗತಿಸಲಾಗಿದೆ. ಆದರೆ ಇನ್ನೊಂದು ಬೆಳವಣಿಗೆಯಂಬಂತೆ ದೂರವಾಣಿ ಸಂಖ್ಯೆ ನೀಡಿರುವ ರಾಮಮೂರ್ತಿ ಗೌಡ ನಿನ್ನೆಯಿಂದ ಫೋನ್ ಸಂಪರ್ಕಕ್ಕೆ ಸಿಗುತ್ತಿಲ್ಲ. ಬಿಡುಗಡೆ ಕಾರ್ಯಕ್ರಮದಲ್ಲಿ ಹಾಜರಿರಲಿದ್ದಾರೆ ಎನ್ನುವ ಮಂಜುನಾಥ್ ಮುಲಾಲಿ ಎಂಬುವರು ತಮ್ಮ ಫೇಸ್'ಬುಕ್ ಪುಟದಲ್ಲಿ ತನಗೂ ಈ ವಿಷಯಕ್ಕೂ ಸಂಬಂಧವಿಲ್ಲ ಎಂದು ಪೋಸ್ಟ್ ಹಾಕಿಕೊಂಡಿದ್ದಾರೆ. ನಾಳೆ ಸಿಡಿ ಬಿಡುಗಡೆಯಾಗಲಿದೆಯೇ ಕಾದು ನೋಡಬೇಕು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.