2017ರಲ್ಲಿ 822 ಕೋಮು ಗಲಭೆಗಳು, 111 ಸಾವು; ಉತ್ತರ ಪ್ರದೇಶ ಟಾಪ್

By Suvarna Web DeskFirst Published Feb 6, 2018, 4:17 PM IST
Highlights
  • ಉತ್ತರ ಪ್ರದೇಶದಲ್ಲಿ ಅತೀ ಹೆಚ್ಚು ಕೋಮುಗಲಭೆಗಳು
  • ಕರ್ನಾಟಕದಲ್ಲಿ 100 ಕೋಮುಗಲಭೆಗಳು   

ನವದೆಹಲಿ: ಕಳೆದ ಮೂರು ವರ್ಷಗಳಲ್ಲಿ ದೇಶಾದ್ಯಂತ ಕೋಮು ಗಲಭೆಗಳು ಹೆಚ್ಚಾಗಿದ್ದು, 2017ರಲಲ್ಲಿ 822 ಕೋಮುಗಲಭೆಗಳು ನಡೆದಿವೆ. ಅವುಗಳಲ್ಲಿ 111 ಮಂದಿ ಸಾವನಪ್ಪಿದ್ದಾರೆ ಹಾಗೂ 2384 ಮಂದಿ ಗಾಯಗೊಂಡಿದ್ದಾರೆ.

ಉತ್ತರ ಪ್ರದೇಶದಲ್ಲಿ ಅತೀ ಹೆಚ್ಚು ಕೋಮುಗಲಭೆಗಳು ನಡೆದಿವೆ. ಅಲ್ಲಿ ನಡೆದ 195 ಕೋಮುಗಲಭೆಗಳಲ್ಲಿ 44 ಮಂದಿ ಮೃತಪಟ್ಟಿದ್ದಾರೆ ಹಾಗೂ 542 ಮಂದಿ ಗಾಯಗೊಂಡಿದ್ದಾರೆಂದು, ಕೇಂದ್ರ ಗೃಹ ಇಲಾಖೆ ರಾಜ್ಯ ಸಚಿವ ಹಂಸರಾಜ್ ಆಹಿರ್ ಲೋಕಸಭೆಗೆ ಮಾಹಿತಿ ನೀಡಿದ್ದಾರೆ.  

ಕರ್ನಾಟಕದಲ್ಲಿ ನಡೆದಿರುವ 100 ಕೋಮು ಸಂಘರ್ಷಗಳಲ್ಲಿ  9 ಮಂದಿ ಮೃತಪಟ್ಟಿದ್ದು 229 ಮಂದಿ ಗಾಯಗೊಂಡಿದ್ದಾರೆ. ರಾಜಸ್ಥಾನದಲ್ಲಿ 91, ಬಿಹಾರದಲ್ಲಿ 85, ಮಧ್ಯ ಪ್ರದೇಶದಲ್ಲಿ 60, ಪಶ್ಚಿಮ ಬಂಗಾಳದಲ್ಲಿ 58 ಹಾಗೂ ಗುಜರಾತಿನಲ್ಲಿ 50 ಗಲಭೆಗಳು ನಡೆದಿವೆ ಎಂದು ಆಹಿರ್ ತಿಳಿಸಿದ್ದಾರೆ.

2016ರಲ್ಲಿ 703 ಕೋಮುಗಲಭೆಗಳು ನಡೆದಿದ್ದು, 86 ಮಂದಿ ಸಾವನಪ್ಪಿದ್ದರೆ, 2321 ಮಂದಿ ಗಾಯಗೊಂಡಿದ್ದರು. 2015ರಲ್ಲಿ, 751 ಕೋಮು ಗಲಭೆಗಳಲ್ಲಿ 97 ಮಂದಿ ಮೃತಪಟ್ಟಿದ್ದು, 2264 ಮಂದಿ ಗಾಯಗೊಂಡಿದ್ದರು.

2017ರಲ್ಲಿ ನಡೆದ ಕೋಮುಗಲಭೆಗಳು:

 

ಪ್ರಕರಣಗಳು

ಸಾವು

ಗಾಯಗೊಂಡವರು

ಉತ್ತರ ಪ್ರದೇಶ

195

44

542

ಕರ್ನಾಟಕ

100

9

229

ರಾಜಸ್ಥಾನ

91

12

175

ಬಿಹಾರ

85

3

321

ಮಧ್ಯ ಪ್ರದೇಶ

60

9

191

ಪ. ಬಂಗಾಳ

58

9

230

ಗುಜರಾತ್

50

8

125

 

ವರ್ಷವಾರು ವಿವರ:

 

ಪ್ರಕರಣಗಳು

ಸಾವು

ಗಾಯಗೊಂಡವರು

2017

822

111

2384

2016

703

86

2321

2015

751

97

2264

 

 

click me!