ಐಟಿ ಅಧಿಕಾರಗಳ ಶೋಧ ಅಂತ್ಯ: ಈ ಬಗ್ಗೆ ಯಶ್ ಹೇಳಿದ್ದೇನು?

Published : Jan 05, 2019, 04:37 PM ISTUpdated : Jan 05, 2019, 04:55 PM IST
ಐಟಿ ಅಧಿಕಾರಗಳ ಶೋಧ ಅಂತ್ಯ:  ಈ ಬಗ್ಗೆ ಯಶ್ ಹೇಳಿದ್ದೇನು?

ಸಾರಾಂಶ

ಬರೋಬ್ಬರಿ 3 ದಿನಗಳ‌ ಕಾಲ ರಾಕಿಂಗ್ ಸ್ಟಾರ್ ಯಶ್ ಮನೆಯಲ್ಲಿ ಐಟಿ ಅಧಿಕಾರಿಗಳ ಶೋಧ ಕಾರ್ಯ ಅಂತ್ಯವಾಗಿದ್ದು, ಈ ಬಗ್ಗೆ ಯಶ್ ಮಾದ್ಯಮಗಳಿಗೆ ಪ್ರತಿಕ್ರಿಯಿಸಿದ್ದು ಹೀಗೆ. 

ಬೆಂಗಳೂರು, [ಜ. 05]: ನಿರ್ಮಾಪಕ ವಿಜಯ್ ಕಿರಗಂದೂರ್ ಅವರ ವಿಚಾರಕ್ಕೆ ನಮ್ಮ ಮನೆ ಮೇಲೆ ದಾಳಿ ನಡೆದಿದೆ ಅಂತೆಲ್ಲಾ ಊಹಾಪೋಹಾ ಹಬ್ಬಿಸಬಾರದು ಎಂದು ನಟ ಯಶ್​ ಹೇಳಿದ್ದಾರೆ.

 ಐಟಿ ದಾಳಿ ಕುರಿತಂತೆ ಬೆಂಗಳೂರಿನ ಹೊಸಕೆರೆಹಳ್ಳಿ ನಿವಾಸದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಯಶ್​, ದಾಳಿ ಸಂಬಂಧ ಕೇವಲ ಊಹಾಪೋಹಗಳ ಮಾತೇ ಕೇಳಿ ಬರುತ್ತಿವೆ ಎಂದು ಅಸಮಾಧಾನ ಹೊರಕಿದರು.

ಯಶ್ ಮನೆಯಲ್ಲಿ ಐಟಿ ಶೋಧ ಕಾರ್ಯ ಅಂತ್ಯ: ಸಿಕ್ಕಿದ್ದೇನು?

ಅಷ್ಟು ಸಿಕ್ತು ಇಷ್ಟು ಸಿಕ್ತು ಎಂದು ಊಹಾಪೋಹಗಳನ್ನ ಹಬ್ಬಿಸಲಾಗಿದೆ.  ಬುಲ್ ಷಿಟ್​ಗಳನ್ನ ತೋರಿಸ್ಬಾರ್ದು. ಎರಡು ದಿನ ನನ್ನ ಹೆಂಡತಿ ಹಾಗೂ ಮಗಳನ್ನ ಬಿಟ್ಟಿದ್ದದ್ದು ಕಷ್ಟವಾಗಿತ್ತು. 

ಯಶ್ ಮನೆಯಲ್ಲಿಯೇ ಐಟಿ ಅಧಿಕಾರಿಗಳು : ಮುಂದೇನು..?

ಅಭಿಮಾನಿಗಳು ಹೊರಗೆ ಜಮಾಯಿಸಿದ್ದರು ಎಂದು ಕೇಳಿಪಟ್ಟೇ/ ಆದರೆ, ಅವರನ್ನು ಭೇಟಿ ಮಾಡಲು ಆಗಲಿಲ್ಲ. ಆ ಎಲ್ಲಾ ಅಭಿಮಾನಿಗಳಿಗೆ ನನ್ನ ಧನ್ಯವಾದಗಳು. 

ಐಟಿ ಅಧಿಕಾರಿಗಳ‌ ಎಲ್ಲಾ ಪ್ರಶ್ನೆಗೆ ನಾನು ಉತ್ತರಿಸಿದ್ದೇನೆ. ಮುಂದೆ ಈ ವಿಚಾರಕ್ಕೆ ಕರೆದ್ರೆ ಖಂಡಿತ ಹೋಗುತ್ತೇನೆ ಎಂದರು.

ಇದೇ ವೇಳೆ, ಹೆಂಡತಿ ಮಗು ಜೊತೆ ಸ್ವಲ್ಪ ಸಮಯ ಕಳೆದು ಹುಬ್ಬಳ್ಳಿಯಲ್ಲಿ ನಡೆಯಲಿರುವ ನಟಸಾರ್ವಭೌಮ ಚಿತ್ರದ ಆಡಿಯೋ ಲಾಂಚ್ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದೇನೆ ಎಂದರು ಹೇಳಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ದುಬೈನಲ್ಲಿ ಕುಳಿತು ಕರಾವಳಿಯಲ್ಲಿ ಕೋಮು ಭಾವನೆ ಕೆರಳಿಸುವ ಪೋಸ್ಟ್ ಹಾಕುತ್ತಿದ್ದವನ ಬಂಧಿಸಿದ ಮಂಗಳೂರು ಪೊಲೀಸರು
ರಾಜ್ಯದಲ್ಲಿ ಕಳೆದ 10 ವರ್ಷಗಳಲ್ಲೇ ದಾಖಲೆಯ ಚಳಿ, ಹಲವು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್, ಬೆಂಗಳೂರಿನಲ್ಲಿ ಮುಂದಿನ 1 ವಾರ ಹೇಗಿರಲಿದೆ?