
ಟೋಕಿಯೋ[ಜ.05]: ಜಪಾನ್ ನಲ್ಲಿ 'ಸುಶಿ' ಉದ್ಯಮಿಯೊಬ್ಬರು ಹರಾಜಿನಲ್ಲಿ ದೈತ್ಯ ಮೀನೊಂದನ್ನು ಬರೋಬ್ಬರಿ 31 ಲಕ್ಷ ಡಾಲರ್[21 ಕೋಟಿ 50 ಸಾವಿರ ರೂಪಾಯಿ] ನೀಡಿ ಖರೀದಿಸಿದ್ದಾರೆ. ಬಿಸಿಸಿ ಪ್ರಸಾರ ಮಾಡಿರುವ ವರದಿಯನ್ವಯ ಮತ್ಸ್ಯಗಳ ರಾಜ ಎಂದೇ ಕರೆಯಲ್ಪಡುವ ಕಿಂಗ್ ಕಿಯಾಶಿ ಕಿಮುರಾ ಎಂಬವರು 278 ಕೆ. ಜಿ ತೂಕದ ಈ ದೈತ್ಯ ಮೀನನ್ನು ಖರೀದಿಸಿದ್ದಾರೆನ್ನಲಾಗಿದೆ. ಇದೊಂದು ಅಳಿವಿನಂಚಿನಲ್ಲಿರುವ ಮೀನಾಗಿದೆ ಹೀಗಾಗಿ ಇದನ್ನು ಖರೀದಿಸಲು ಭಾರೀ ಪೈಪೋಟಿ ನಡೆದಿತ್ತು.
ಸಗಟು ಹಾಗೂ ಸುಶಿ[ಜಪಾನಿನ ಒಂದು ಬಗೆಯ ತಿನಿಸು] ಕಂಪೆನಿಯ ಮಾಲೀಕರು ಸಾಮಾನ್ಯವಾಗಿ ಅತ್ಯುತ್ತಮ ಮೀನುಗಳಿಗೆ ಉತ್ತಮ ಬೆಲೆ ನೀಡಿ ಖರೀದಿಸುತ್ತಾರೆ. ಅಳಿವಿನಂಚಿನಲ್ಲಿರುವ ಈ ದೈತ್ಯ ಮೀನನ್ನು Tsukiji ಎಂಬ ವಿಶ್ವದ ಅತಿ ದೊಡ್ಡ ಮೀನು ಮಾರುಕಟ್ಟೆಯಿಂದ ಖರೀದಿಸಲಾಗಿದೆ. ಈ ಮಾರುಕಟ್ಟೆ ರೆಸ್ಟೋರೆಂಟ್ ಹಾಗೂ ಇತರ ಅಂಗಡಿಗಳಿಗೂ ವಿಶ್ವದಾದ್ಯಂತ ಫೇಮಸ್ ಆಗಿದೆ.
Tsukiji ಮಾರುಕಟ್ಟೆ 1935ರಲ್ಲಿ ಆರಂಭವಾಗಿತ್ತು. ಈ ಮಾರುಕಟ್ಟೆ ದೈತ್ಯ ಮೀನುಗಳ ಹರಾಜಿಗೆ ಫೇಮಸ್ ಆಗಿದೆ. ಇಲ್ಲಿಂದ ಖರೀದಿಸಿದ ಮೀನುಗಳು ಅತಿ ಚಿಕ್ಕ ಮೀನಿನ ಶಾಪ್ ನಿಂದ ಅತಿ ದೊಡ್ಡ ಅಂಗಡಿಗಳಲ್ಲೂ ಮಾರಾಟ ಮಾಡಲಾಗುತ್ತದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ