ಕಣ್ಣು ಮುಚ್ಚಲಿರುವ ಪುಟ್ಟ ತಂಗಿಗೆ ಅಣ್ಣ ಸಂತೈಸಿದ್ದು ಹೀಗೆ..!

Published : Jun 13, 2018, 04:45 PM IST
ಕಣ್ಣು ಮುಚ್ಚಲಿರುವ ಪುಟ್ಟ ತಂಗಿಗೆ ಅಣ್ಣ ಸಂತೈಸಿದ್ದು ಹೀಗೆ..!

ಸಾರಾಂಶ

ಅಣ್ಣ ತಂಗಿಯ ಅನುಬಂಧಕ್ಕೆ ಇದಕ್ಕಿಂತ ಸಾಕ್ಷಿ ಬೇಕೆ? ಕ್ಯಾನ್ಸರ್ ಪೀಡಿತ ತಂಗಿಯನ್ನು ಅಣ್ಣ ಸಂತೈಸಿದ ಪರಿ ಎಂತದ್ದು? ಕೊನೆ ಕ್ಷಣದವರೆಗೂ ತಂಗಿಯ ಜೊತೆಗಿದ್ದು ಧೈರ್ಯ ತುಂಬಿದ ಅಣ್ಣ ಅಣ್ಣ-ತಂಗಿಯ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ 

ಮಿಸಿಸಿಪ್ಪಿ(ಜೂ13): ಜಗತ್ತಿನಲ್ಲಿ ಅಣ್ಣ ತಂಗಿಯ ಸಂಬಂಧ ಅತ್ಯಂತ ವಿಶಿಷ್ಟವಾದುದು ಎನ್ನುತ್ತಾರೆ. ಪ್ರೀತಿ, ರಕ್ಷಣೆ, ಕೀಟಲೆ ಇವೆಲ್ಲವೂ ಅಣ್ಣ ತಂಗಿಯಂದಿರ ಸಂಬಂಧದಲ್ಲಿ ಕಾಣುವ ವಿಶಿಷ್ಟ ಅನುಬಂಧ. ಅದರಲ್ಲೂ ಪುಟ್ಟ ತಂಗಿಯ ಪಾಲಿಗಂತೂ ಆಕೆಯ ಅಣ್ಣನೇ ಹಿರೋ ಆದರೆ, ಅಣ್ಣನಿಗೆ ಆತನ ತಂಗಿಯೇ ಫೆವರಿಟ್.

ಈ ಅಣ್ಣ ತಂಗಿಯ ಗಾಢ ಸಂಬಂಧಕ್ಕೆ ಮಿಸಿಸಿಪ್ಪಿಯಲ್ಲಿ ನಡೆದ ಈ ಘಟನೆ ಮತ್ತಷ್ಟು ಪುಷ್ಠಿ ನೀಡಿದೆ. ಮಾರಕ ರೋಗ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ತನ್ನ ತಂಗಿಗೆ ಕೊನೆ ಕ್ಷಣದವರೆಗೂ ಧೈರ್ಯ ತುಂಬಿದ ಅಣ್ಣನ ಕತೆ ಇದು. ಜಾಕ್ಸನ್ ಎಂಬ ಅಣ್ಣ, ಕ್ಯಾನ್ಸರ್ ರೋಗಕ್ಕೆ ತುತ್ತಾಗಿರುವ ತನ್ನ ನಾಲ್ಕು ವರ್ಷದ ತಂಗಿ ಆ್ಯಡಿಯ ಆರೈಕೆಯಲ್ಲಿ ನಿರತವಾಗಿರುವ ಫೋಟೋವನ್ನು ತಂದೆ ಮ್ಯಾಟ್ ಸೂಟರ್ ಎಂಬುವವರು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.

ಜಾಕ್ಸನ್ ತನ್ನ ತಂಗಿ ಆ್ಯಡಿಯ ಕೊನೆ ಕ್ಷಣದಲ್ಲಿ ಆಕೆಯ ಜೊತೆಗಿದ್ದು, ಆಕೆ ಸಾಯುವುದನ್ನು ಕಣ್ಣಾರೆ ಕಂಡಿದ್ದಾನೆ. ಅಲ್ಲದೇ ಕೊನೆ ಕ್ಷಣದವರೆಗೂ ಆಕೆಗೆ ಧೈರ್ಯ ತುಂಬುತ್ತಿರುವ ಜಾಕ್ಸನ್ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.

ಜಾಖ್ಸನ್ ತನ್ನ ತಂಗಿ ಆ್ಯಂಡಿಯನ್ನು ತುಂಬ ಪ್ರೀತಿಸುತ್ತಿದ್ದ. ಇದೇ ಕಾರಣಕ್ಕೆ ಆಕೆಯ ಕೊನೆ ಕ್ಷಣದ ವೇಳೆ ಆಕೆಯ ಜೊತೆಗಿದ್ದು, ಆಕೆಯನ್ನು ಕಳುಹಿಸಿಕೊಟ್ಟ ಎಂದು ತಂದೆ ಮ್ಯಾಟ್ ಸೂಟರ್ ಅತ್ಯಂತ ನೋವಿನಿಂದ ಈ ಫೋಟೋ ಶೇರ್ ಮಾಡಿದ್ದಾರೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಚಾಮರಾಜನಗರ: ಚಿನ್ನದ ಆಸೆಗೆ ಗುಡ್ಡವನ್ನೇ ಅಗೆದ ಕಿಡಿಗೇಡಿಗಳು!
India Latest News Live: ಪಂಜಾಬ್‌ನ 3 ಸ್ಥಳಗಳಿನ್ನು ಪವಿತ್ರ ನಗರಿ: ಮದ್ಯ, ಮಾಂಸ ಸೇಲ್‌ ನಿಷೇಧ