ರಾಜಕೀಯಕ್ಕೆ ಬಾರದೇ ಇದ್ದಿದ್ದರೆ ಸಿದ್ದರಾಮಯ್ಯ ಈ ಕೆಲ್ಸ ಮಾಡ್ತಿದ್ರು!

First Published Jun 13, 2018, 5:04 PM IST
Highlights
  • ಮೈಸೂರಿನಲ್ಲಿ ಹಳೆಯ ನೆನಪುಗಳನ್ನುಮೆಲುಕು ಹಾಕಿಕೊಂಡ ಮಾಜಿ ಸಿಎಂ
  • ರಾಜಕೀಯಕ್ಕೆ ಬಾರದೆ ಇದ್ದಿದ್ರೆ ಏನು ಮಾಡುತ್ತಿದ್ದೆ ಎಂದು ಬಿಚ್ಚಿಟ್ಟ ಸಿದ್ದರಾಮಯ್ಯ

ಮೈಸೂರು: ತಾನು ಹೀಗೆ ಮಾಡಿದ್ದರೆ ಹೀಗಾಗುತಿತ್ತು, ಹಾಗಾಗುತಿತ್ತು,  ಹೀಗೆ ಮಾಡಬೇಕಿತ್ತು, ಹಾಗೆ ಮಾಡಬೇಕಿತ್ತು ಎಂದು ಎಲ್ಲರೂ ಯೋಚನೆ ಮಾಡುವುದಿದೆ. ಹಾಗೇನೇ ಮಾಜಿ ಸಿಎಂ ಸಿದ್ದರಾಮಯ್ಯ ಕೂಡಾ ತಾನು ರಾಜಕೀಯಕ್ಕೆ ಬಾರದೇ ಇದ್ದಿದ್ದರೆ ಏನಾಗಿರುತ್ತಿದ್ದೆ ಎಂದು ಹೇಳಿಕೊಂಡಿದ್ದಾರೆ.

ಕಳೆದ ಚುನಾವಣೆಯಲ್ಲಿ ಮೈಸೂರಿನ ವಿಜೇತ, ಪರಾಜಿತ ಅಭ್ಯರ್ಥಿಗಳೊಂದಿಗೆ ಸಭೆ ನಡೆಸುವ ಮುನ್ನಾ ಸಿದ್ದರಾಮಯ್ಯ ಲೋಕಾಭಿರಾಮ ಮಾತುಕತೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಹಳೆಯ ನೆನಪುಗಳನ್ನು ಮಾಜಿ ಸಿಎಂ ಮೆಲುಕು ಹಾಕಿಕೊಂಡಿದ್ದಾರೆ.

ಈ ವೇಳೆ, ತಾನು ರಾಜಕೀಯಕ್ಕೆ ಬಾರದೇ ಇದ್ದಿದ್ದರೆ ಏನಾಗಿರುತ್ತಿದ್ದೆ ಎಂದು ಕೂಡಾ ಸಿದ್ದರಾಮಯ್ಯ ಬಿಚ್ಚಿಟ್ಟಿದ್ದಾರೆ. 

Once upon a time I was a popular lecturer, ನಾನು ಒಳ್ಳೆ ಮೇಸ್ಟ್ರು ಆಗಿದ್ದೆ. ಈಗಲೂ ವೃತ್ತಿ ಮೇಲೆ ಪ್ರೀತಿ, ಅಭಿಮಾನ ಇದೆ‌. ರಾಜಕೀಯಕ್ಕಿಂತ ಖುಷಿ ನೀಡಿದ್ದು ಶಿಕ್ಷಕ ವೃತ್ತಿ. ಒಂದು ವೇಳೆ ನಾನು ರಾಜಕೀಯಕ್ಕೆ ಬಂದಿಲ್ಲ ಅಂದಿದ್ರೆ ಪ್ರಖ್ಯಾತ ಪ್ರಾಧ್ಯಾಪಕ ಆಗುತ್ತಿದ್ದೆ, ಎಂದು ಸಿದ್ದರಾಮಯ್ಯ ತಮ್ಮ ಬಗ್ಗೆ ಹೇಳಿಕೊಂಡಿದ್ದಾರೆ. 

ವಿದ್ಯಾರ್ಥಿಗಳ ಜತೆ ನನ್ನ ಒಡನಾಟ ಚೆನ್ನಾಗಿತ್ತು. ಒಂದು ಗಂಟೆಗಳ ಕಾಲ ಪಾಠ ಮಾಡುವುದು ನನಗೆ ಅತ್ಯಂತ ಖುಷಿ ನೀಡುತ್ತಿತ್ತು. ಆದರೆ ಈಗ ನನಗೆ ವಯಸ್ಸಾಗಿದೆ ಹಾಗಾಗಿ ಪಾಠ ಮಾಡೊಕೆ ಆಗಲ್ಲ.  ಎಂದು ತಮ್ಮ ಶಿಕ್ಷಕ ವೃತ್ತಿಯ ನೆನಪುಗಳನ್ನು ಸಿದ್ದರಾಮಯ್ಯ ಮೆಲುಕು ಹಾಕಿಕೊಂಡಿದ್ದಾರೆ.

click me!