ಆ್ಯಸಿಡ್ ದಾಳಿ ಸಂತ್ರಸ್ಥರಿಗೆ ಕೇಂದ್ರ ಸರ್ಕಾರಿ ನೌಕರಿಯಲ್ಲಿ ಮೀಸಲು

By Suvarna Web DeskFirst Published Jan 29, 2018, 8:10 AM IST
Highlights

ಆಟಿಸಂ, ಮಾನಸಿಕ ಅಸ್ವಾಸ್ಥ್ಯ, ಬೌದ್ಧಿಕ ವಿಕಲತೆಯಿಂದ ಬಳಲುತ್ತಿರುವ ಹಾಗೂ ಆ್ಯಸಿಡ್ ದಾಳಿಗೆ ಒಳಗಾಗಿರುವ ವ್ಯಕ್ತಿಗಳಿಗೆ ಕೇಂದ್ರ ಸರ್ಕಾರಿ ನೌಕರಿಯಲ್ಲಿ ಇನ್ನು ಮೀಸಲು ಲಭಿಸಲಿದೆ.

ನವದೆಹಲಿ: ಆಟಿಸಂ, ಮಾನಸಿಕ ಅಸ್ವಾಸ್ಥ್ಯ, ಬೌದ್ಧಿಕ ವಿಕಲತೆಯಿಂದ ಬಳಲುತ್ತಿರುವ ಹಾಗೂ ಆ್ಯಸಿಡ್ ದಾಳಿಗೆ ಒಳಗಾಗಿರುವ ವ್ಯಕ್ತಿಗಳಿಗೆ ಕೇಂದ್ರ ಸರ್ಕಾರಿ ನೌಕರಿಯಲ್ಲಿ ಇನ್ನು ಮೀಸಲು ಲಭಿಸಲಿದೆ.

ಎ, ಬಿ ಹಾಗೂ ಸಿ ಗ್ರೂಪ್ ನೇರ ನೇಮಕಾತಿ ಪ್ರಕ್ರಿಯೆ ಇದ್ದರೆ ಒಟ್ಟು ಖಾಲಿ ಇರುವ ಹುದ್ದೆಗಳ ಪೈಕಿ ಶೇ.4ರಷ್ಟು ಮೀಸಲು ಲಭಿಸಲಿದೆ.

ಈವರೆಗೆ ಇದರ ಪ್ರಮಾಣ ಶೇ.3ರಷ್ಟು ಇತ್ತು. ಈ ಪೈಕಿ ಅಂಧರು, ಮಂದ ದೃಷ್ಟಿಯವರು, ಕಿವುಡರು, ಕುಬ್ಜರು, ಪೊಲಿಯೋ ಪೀಡಿತರು ಹಾಗೂ ಆ್ಯಸಿಡ್ ದಾಳಿಗೆ ಒಳಗಾದವರಿಗೆ ಶೇ.1ರಷ್ಟು ಲಭ್ಯವಾಗಲಿದೆ.

ಇನ್ನು ಆಟಿಸಂ, ಬೌದ್ಧಿಕ ವಿಕಲತೆ, ಕಲಿಕಾ ಅಸಾಮರ್ಥ್ಯ, ಮಾನಸಿಕ ರೋಗಿ ಗಳಿಗೆ ಶೇ.1ರಷ್ಟು ಮೀಸಲು ದೊರಕಲಿದೆ. ಈ ಸಂಬಂಧ ಸಿಬ್ಬಂದಿ ಇಲಾಖೆ ಎಲ್ಲ ಕೇಂದ್ರ ಸರ್ಕಾರಿ ಇಲಾಖೆಗಳಿಗೆ ಪತ್ರ ಬರೆದು ಆದೇಶ ಪಾಲಿಸುವಂತೆ ತಿಳಿಸಿದೆ.

click me!