ಬಿಜೆಪಿ ಮತ ಹಾಕುವುದಿಲ್ಲ ಎಂದು ಮಧ್ಯ ಪ್ರದೇಶ ಕಾಲೇಜು ವಿದ್ಯಾರ್ಥಿಗಳ ಶಪಥ

By Suvarna Web DeskFirst Published Jan 29, 2018, 7:58 AM IST
Highlights

ರಾಜ್ಯ ಸರ್ಕಾರ ವೃತ್ತಿ ತರಬೇತಿ ಶಿಕ್ಷಣದ ಪರೀಕ್ಷೆಗಳನ್ನು ಆನ್‌ಲೈನ್‌ನಲ್ಲೇ ನಡೆಸುವುದಕ್ಕೆ ವಿರೋಧ ವ್ಯಕ್ತಪಡಿಸಿರುವ ವಿದ್ಯಾರ್ಥಿಗಳ ಗುಂಪೊಂದು, ನಾವು ಮುಂಬರುವ ಚುನಾವಣೆಗಳಲ್ಲಿ ಬಿಜೆಪಿಗೆ ಮತ ಹಾಕುವುದಿಲ್ಲ ಎಂದು ಕಾಲೇಜಿನಲ್ಲೇ ಶಪಥ ಸ್ವೀಕರಿಸಿದ ಅಚ್ಚರಿಯ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

ಭೋಪಾಲ್: ರಾಜ್ಯ ಸರ್ಕಾರ ವೃತ್ತಿ ತರಬೇತಿ ಶಿಕ್ಷಣದ ಪರೀಕ್ಷೆಗಳನ್ನು ಆನ್‌ಲೈನ್‌ನಲ್ಲೇ ನಡೆಸುವುದಕ್ಕೆ ವಿರೋಧ ವ್ಯಕ್ತಪಡಿಸಿರುವ ವಿದ್ಯಾರ್ಥಿಗಳ ಗುಂಪೊಂದು, ನಾವು ಮುಂಬರುವ ಚುನಾವಣೆಗಳಲ್ಲಿ ಬಿಜೆಪಿಗೆ ಮತ ಹಾಕುವುದಿಲ್ಲ ಎಂದು ಕಾಲೇಜಿನಲ್ಲೇ ಶಪಥ ಸ್ವೀಕರಿಸಿದ ಅಚ್ಚರಿಯ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

ಆನ್‌ಲೈನ್‌ನಲ್ಲಿ ಪರೀಕ್ಷೆ ನಡೆಸುವುದಕ್ಕೆ ವಿದ್ಯಾರ್ಥಿಗಳ ಆಕ್ಷೇಪವಿದೆ. ಹೀಗಾಗಿ ಭೋಪಾಲ್‌ನ ವಿಜಯಲಕ್ಷ್ಮೀ ಇಂಡಸ್ಟ್ರಿಯಲ್ ಟ್ರೇನಿಂಗ್ ಇನ್ಸಿಟಿಟ್ಯೂಟ್‌ನ ವಿದ್ಯಾರ್ಥಿಗಳು, ಕಾಲೇಜಿನ ಆವರಣದಲ್ಲೇ ಶಪಥ ಸ್ವೀಕರಿಸಿದ್ದಾರೆ. ರಾಜ್ಯದ ಬಿಜೆಪಿ ಸರ್ಕಾರ ಆನ್ ಲೈನ್ ಪರೀಕ್ಷೆ ಪದ್ಧತಿ ಸ್ಥಗಿತಗೊಳಿಸುವವರೆಗೂ ನಾವು ಬಿಜೆಪಿಗೆ ಮತ ಹಾಕುವುದಿಲ್ಲ ಎಂದು ವಿದ್ಯಾರ್ಥಿಗಳು ಈ ವೇಳೆ ಘೋಷಿಸಿದರು.

ಅಲ್ಲದೆ ಪ್ರತಿ ವಿದ್ಯಾರ್ಥಿ ಗಳು, ಮುಂದಿನ 24 ಗಂಟೆಯ ಅವಧಿಯಲ್ಲಿ ಬೇರೆ ಬೇರೆ ಮೂವರಿಂದ ಇದೇ ರೀತಿಯ ಶಪಥ ಮಾಡಿಸುವ ಶಪಥವನ್ನೂ ಮಾಡಿದ್ದಾರೆ.

click me!