ಹೈದರಾಬಾದ್ ವಿವಿ ಚುನಾವಣೆ: SFIಗೆ ಬಿಗ್ ಶಾಕ್ ಕೊಟ್ಟ ಎಬಿವಿಪಿ

By Web DeskFirst Published Oct 7, 2018, 5:52 PM IST
Highlights

ಹೈದರಾಬಾದ್ ವಿಶ್ವವಿದ್ಯಾಲಯದ ವಿದ್ಯಾರ್ಥಿ ಒಕ್ಕೂಟ ಚುನಾವಣೆಯಲ್ಲಿ ಭಾರತ ವಿದ್ಯಾರ್ಥಿ ಒಕ್ಕೂಟ[ಎಸ್ಎಫ್ಐ] ಮಕಾಡೆ ಮಲಗಿದೆ.

ಹೈದರಾಬಾದ್, [ಅ.07]: ಹೈದರಾಬಾದ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಒಕ್ಕೂಟ ಚುನಾವಣೆಯಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್(ಎಬಿವಿಪಿ) ಭರ್ಜರಿ ಗೆಲುವು ಸಾಧಿಸಿದೆ.

ಭಾರತ ವಿದ್ಯಾರ್ಥಿ ಒಕ್ಕೂಟ(ಎಸ್ಎಫ್ಐ)ವನ್ನು ಸೋಲಿಸುವ ಮೂಲಕ 8 ವರ್ಷಗಳ ಬಳಿಕ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್(ಎಬಿವಿಪಿ) ಗೆಲುವು ಸಾಧಿಸಿದೆ. 2009-10ರಲ್ಲಿ ಕೊನೆಯ ಬಾರಿಗೆ ಎಬಿವಿಪಿ ಚುನಾವಣೆಯಲ್ಲಿ ಗೆಲುವು ಸಾಧಿಸಿತ್ತು. ಬಳಿಕ ಇದೀಗ ಪ್ರಮುಖ 5 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ.

 ಅಧ್ಯಕ್ಷ ಸ್ಥಾನಕ್ಕಾಗಿ ಎಸ್ಎಫ್ಐ ವತಿಯಿಂದ ಇರಾಮ್ ನವೀನ್ ಕುಮಾರ್ ವಿರುದ್ಧ ಸೈಕಾಲಜಿಯಲ್ಲಿ ಪಿಎಚ್ಡಿ ಮಾಡುತ್ತಿರುವ ಆರ್ತಿ ನಾಗಪಾಲ್ ಗೆಲುವು ಸಾಧಿಸಿದ್ದಾರೆ. ಈ ಮೂಲಕ 2013ರ ಬಳಿಕ ವಿದ್ಯಾರ್ಥಿನಿಯೊಬ್ಬಳು ಅಧ್ಯಕ್ಷೆ ಸ್ಥಾನ ಅಲಂಕರಿಸುತ್ತಿರುವುದು ಇದು 2ನೇ ಬಾರಿಯಾಗಿರುವುದು ವಿಶೇಷ.

ಎಬಿಪಿವಿ ಪ್ರಮುಖ ಉಪಾಧ್ಯಕ್ಷ, ಪ್ರಧಾನ ಕಾರ್ಯದರ್ಶಿ, ಜಂಟಿ ಕಾರ್ಯದರ್ಶಿ, ಕ್ರೀಡಾ ಕಾರ್ಯದರ್ಶಿ ಮತ್ತು ಸಾಂಸ್ಕೃತಿಕ ಕಾರ್ಯದರ್ಶಿ ಸ್ಥಾನಗಳಲ್ಲಿ ಅಮಿತ್ ಕುಮಾರ್, ದೀರಜ್ ಸಂಗೋಜಿ, ಪ್ರವೀನ್ ಚೌಹಾನ್, ಅರವಿಂದ್ ಎಸ್ ಕುಮಾರ್ ಮತ್ತು ನಿಖಿಲ್ ರಾಜ್ ವಿಜಯ ಗೆಲುವಿನ ನಗೆ ಬೀರಿದ್ದಾರೆ.

click me!