
ಪುಣೆ(ಡಿ.17): ‘ನನ್ನ ಗಂಡ ನಕಲಿ ಛಾಪಾ ಕಾಗದ ಹಗರಣದಲ್ಲಿ ಸಂಪಾದಿಸಿ ಖರೀದಿಸಿದ ಆಸ್ತಿಯನ್ನೆಲ್ಲ ಜಪ್ತಿ ಮಾಡಿಕೊಂಡು ದೇಶದ ಅಭಿವೃದ್ಧಿ ಕಾರ್ಯಗಳಿಗೆ ಬಳಸಬೇಕು’ ಎಂದು ನಕಲಿ ಛಾಪಾ ಕಾಗದ ಹಗರಣದ ರೂವಾರಿ ದಿ. ಅಬ್ದುಲ್ ಕರೀಂ ತೆಲಗಿಯ ಪತ್ನಿ ಶಹೀದಾ ತೆಲಗಿ, ಪುಣೆಯ ಮೋಕಾ ನ್ಯಾಯಾಲಯಕ್ಕೆ ಮನವಿ ಮಾಡಿದ್ದಾಳೆ.
ತೆಲಗಿ ಬೆಂಗಳೂರು ಜೈಲಲ್ಲಿ ಅ.26ರಂದು ಮೃತಪಟ್ಟಿದ್ದ. ಬಳಿಕ ಆತನ ಸಂಬಂಧಿಕರು ಬೆಳಗಾವಿ ಜಿಲ್ಲೆ ಖಾನಾಪುರದಲ್ಲಿರುವ ಆತನ ಆಸ್ತಿಗಾಗಿ ಬಡಿದಾಡಿಕೊಂಡಿದ್ದರು. ಇದರ ಬೆನ್ನಲ್ಲೇ ಶಹೀದಾ ಈ ಅರ್ಜಿ ಸಲ್ಲಿಸಿದ್ದಾಳೆ. 2018ರ ಫೆಬ್ರವರಿ 3ರಂದು ಅರ್ಜಿ ವಿಚಾರಣೆ ನಡೆಯಲಿದೆ. ‘ಬೆಳಗಾವಿ ಜಿಲ್ಲೆಯಲ್ಲಿ 7 ಹಾಗೂ ವಿಜಯಪುರ ಜಿಲ್ಲೆಯಲ್ಲಿ ತೆಲಗಿಯ 2 ಸ್ಥಿರಾಸ್ತಿಗಳಿವೆ. ತೆಲಗಿ ಈ ಆಸ್ತಿಗಳನ್ನು ಅಕ್ರಮ ಹಣದಿಂದ ಬಂಧುಗಳ ಹೆಸರಿನಲ್ಲಿ ಖರೀದಿಸಿದ್ದಾನೆ. ಇವುಗಳನ್ನು ಸರ್ಕಾರ ವಶಪಡಿಸಿಕೊಂಡಿಲ್ಲ. ಇವುಗಳನ್ನು ಜಪ್ತಿ ಮಾಡಿಕೊಂಡು ದೇಶದ ಅಭಿವೃದ್ಧಿಗೆ ಬಳಸಿ’ ಎಂದು ಕೋರಿದ್ದಾಳೆ.
‘ನಾನು ದೇವರಿಗೆ ಹೆದರುವವಳು. ನನಗೆ ಯಾವುದೇ ಪಾಪ ಮಾಡುವ ಮನಸ್ಸಿಲ್ಲ. ದೇವರಲ್ಲಿ ಹಾಗೂ ನ್ಯಾಯಾಂಗದಲ್ಲಿ ನಂಬಿಕೆ ಇರಿಸಿದ್ದರಿಂದ ನಾನು ಆಸ್ತಿ ವಿಚಾರದಲ್ಲಿ ನ್ಯಾಯಾಲಯದ ಮೊರೆ ಹೋಗಿದ್ದೇನೆ’ ಎಂದು ಆಕೆ ಹೇಳಿದ್ದಾಳೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.