ಎಂಸಿಡಿ ಚುನಾವಣೆ: ಆಮ್ ಆದ್ಮಿ ಪಕ್ಷ ಶಾಸಕ ಬಿಜೆಪಿಗೆ

By Suvarna Web DeskFirst Published Mar 27, 2017, 7:35 AM IST
Highlights

ಬಾವನ ಕ್ಷೇತ್ರದ ಶಾಸಕ ಹಾಗೂ ಆಪ್ ಪಕ್ಷದ ಮುಖಂಡ ವೇದ್ ಪ್ರಕಾಶ್ ಇದೀಗ ಬಿಜೆಪಿ ಸೇರ್ಪಡೆಯಾಗಿದ್ದಾರೆ. ಅರವಿದ್ ಕೇಜ್ರಿವಾಲ್ ಪಕ್ಷದ ಕೆಲ ನಾಯಕರ ಪ್ರಭಾವಕ್ಕೊಳಗಾಗಿ ಕೆಲಸ ಮಾಡುತ್ತಾರೆಂದು ಈ ಹಿಂದೆ ವೇದ ಪ್ರಕಾಶ್ ಆರೋಪಿಸಿದ್ದರು.

ನವದೆಹಲಿ (ಮಾ.27): ಮುನ್ಸಿಪಲ್ ಕಾರ್ಪೊರೇಶನ್ ಆಫ್ ಡೆಲ್ಲಿ (ಎಂಸಿಡಿ)ಗಳ  ಚುನಾವಣಾ ಕಣ ರಂಗೇರುತ್ತಿದ್ದಂತೆ ದೆಹಲಿಯ ಆಡಳಿತರೂಢ ಆಮ್ ಆದ್ಮಿ ಪಕ್ಷಕ್ಕೆ ಆಘಾತ ಬಂದೆರಗಿದೆ.

ಬಾವನ ಕ್ಷೇತ್ರದ ಶಾಸಕ ಹಾಗೂ ಆಪ್ ಪಕ್ಷದ ಮುಖಂಡ ವೇದ್ ಪ್ರಕಾಶ್ ಇದೀಗ ಬಿಜೆಪಿ ಸೇರ್ಪಡೆಯಾಗಿದ್ದಾರೆ. ಅರವಿದ್ ಕೇಜ್ರಿವಾಲ್ ಪಕ್ಷದ ಕೆಲ ನಾಯಕರ ಪ್ರಭಾವಕ್ಕೊಳಗಾಗಿ ಕೆಲಸ ಮಾಡುತ್ತಾರೆಂದು ಈ ಹಿಂದೆ ವೇದ ಪ್ರಕಾಶ್ ಆರೋಪಿಸಿದ್ದರು.

ಏ.23ರಂದು ಎಂಸಿಡಿಗೆ ಚುನಾವಣೆಗಳು ನಡೆಯಲಿದ್ದು, 272 ವಾರ್ಡ್’ಗಳಲ್ಲಿ ಬಿಜೆಪಿ, ಕಾಂಗ್ರೆಸ್ ಹಾಗೂ ಆಮ್ ಆದ್ಮಿ ಪಕ್ಷದ ನಡುವೆ ನೆಣಸಾಟ ನಡೆಯಲಿದೆ. ಆಪ್ ಪಕ್ಷವು ಮೊದಲ ಬಾರಿಗೆ ಎಂಸಿಡಿ ಚುನಾವಣೆಯನ್ನೆದುರಿಸುತ್ತಿದೆ. ಏ.26ಕ್ಕೆ ಚುನಾವಣಾ ಫಲಿತಾಂಶ ಹೊರಬೀಳಲಿವೆ.

ದೆಹಲಿಯಲ್ಲಿ ಉತ್ತರ, ದಕ್ಷಿಣ ಹಾಗೂ ಪೂರ್ವ ಮುನ್ಸಿಪಲ್ ಕಾರ್ಪೊರೇಶನ್’ಗಳಿದ್ದು ಎಲ್ಲಾ ಮೂರು ಕಾರ್ಪೊರೇಶನ್’ಗಳು ಬಿಜೆಪಿ ಕೈಯಲ್ಲಿವೆ.

click me!