ಕೇಂದ್ರದಿಂದ ಗೋವುಗಳಿಗೂ ಆಧಾರ್ ?

By Suvarna Web DeskFirst Published Apr 24, 2017, 3:17 AM IST
Highlights

ಗೋವುಗಳಿಗೆ ನೀಡಲಾಗುವ ಆಧಾರ್'ಗೆ ಗೃಹ ಇಲಾಖೆಯಿಂದ ಸಮಿತಿ ರಚಿಸಲಾಗಿದೆ. ಇದಕ್ಕಾಗಿ ಸುಪ್ರೀಂ ಕೋರ್ಟ್'ಗೆ ಮನವಿ ಸಲ್ಲಿಸಲಿದ್ದು,ನಾಳೆ ವಿಚಾರಣೆಗೊಳಪಡಲಿದೆ.

ನವದೆಹಲಿ(ಏ.24): ಕೇದ್ರ ಸರ್ಕಾರವು ಗೋವುಗಳಿಗೂ ಆಧಾರ್ ರೀತಿಯ ಕಾರ್ಡುಗಳನ್ನು ನೀಡಲು ಚಿಂತಿಸಿದೆ. ಗೋವುಗಳ ಕಳ್ಳ ಸಗಾಣಿಕೆ ತಡೆ, ಅವುಗಳ ರಕ್ಷಣೆ ಮಾಡುವ ಸಲುವಾಗಿ ಈ ರೀತಿಯ ಯೋಜನೆಯನ್ನು ಅನುಷ್ಠಾನಗೊಳಿಸಲು ನಿರ್ಧರಿಸಿದೆ.

ಗೋವುಗಳಿಗೆ ನೀಡಲಾಗುವ ಆಧಾರ್'ಗೆ ಗೃಹ ಇಲಾಖೆಯಿಂದ ಸಮಿತಿ ರಚಿಸಲಾಗಿದೆ. ಇದಕ್ಕಾಗಿ ಸುಪ್ರೀಂ ಕೋರ್ಟ್'ಗೆ ಮನವಿ ಸಲ್ಲಿಸಲಿದ್ದು,ನಾಳೆ ವಿಚಾರಣೆಗೊಳಪಡಲಿದೆ. ಗೋವುಗಳ ರಕ್ಷಣೆ, ಕಳ್ಳಸಾಗಾಣಿಕೆ ತಡೆಯುವುದರ ಜೊತೆ ಜಾನುವಾರುಗಳ ಬಣ್ಣ, ವಯಸ್ಸು, ಲಿಂಗ, ತಳಿ, ಸ್ಥಳ, ಎತ್ತರ, ಬಣ್ಣ ಸೇರಿದಂತೆ ಮುಂತಾದ ಮಾಹಿತಿಗಳು ಈ ಆಧಾರ್'ನಲ್ಲಿರುತ್ತವೆ'.

ಅಲ್ಲದೆ ಇದಕ್ಕಾಗಿಯೆ ಒಂದು ಗುರುತನ್ನು ಸಹ ನೀಡಲಾಗುತ್ತದೆ. ಒಮ್ಮೆ ಆಧಾರ್'ನೊಂದಿಗೆ ನೋಂದಣಿಯಾದ ಜಾನುವಾರುಗಳು ಅನಂತರದಲ್ಲಿ ಎಲ್ಲಿವೆ ಎಂಬುದನ್ನು ಪತ್ತೆ ಹಚ್ಚಬಹುದು'.  ಎಂದು ಸಮಿತಿ ತಿಳಿಸಿದೆ. ದೇಶದ ಹಲವು ರಾಜ್ಯಗಳಲ್ಲಿ ಗೋವು ಕಳ್ಳ ಸಾಗಾಣಿಕೆಯಾಗುತ್ತಿರುವ ಬಗ್ಗೆ ವರದಿಯಾಗುತ್ತಿದ್ದು, ಹಲ್ಲೆ ಹಾಗೂ ಪ್ರತಿಭಟನೆಗಳು ಸಹ ನಡೆದಿದ್ದುವು. ಇವೆಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರ ಗೋವುಗಳಿಗೆ ಆಧಾರ್ ನೀಡಲು ತೀರ್ಮಾನಿಸಲಾಗಿದೆ.

click me!