ರಾಜ್'ಕುಮಾರ್ ಮತ್ತು ಕುವೆಂಪು ಜೊತೆ ಜಯಾಲಲಿತಾಗೂ ಇರುವ ನಂಟೇನು ಗೊತ್ತೆ ?

By Suvarna Web DeskFirst Published Dec 7, 2016, 7:33 AM IST
Highlights

ಆದರೆ ಜಯಲಲಿತಾ ಅವರೊಂದಿಗೆ ಕನ್ನಡದ ಖ್ಯಾತ ವರನಟ ಡಾ. ರಾಜ್ ಕುಮಾರ್ ಹಾಗೂ ರಾಷ್ಟ್ರಕವಿ ಕುವೆಂಪು ಅವರಿಗೆ ಒಂದು ರೀತಿಯಲ್ಲಿ ನಂಟಿರುವುದು ಬಹಳ ಮಂದಿಗೆ ಗೊತ್ತಿಲ್ಲ.

ತಮಿಳುನಾಡಿನ ಕೋಟ್ಯಂತರ ಮಂದಿಯ ಹೃದಯ ಕದ್ದು 2 ದಿನಗಳ ಹಿಂದಷ್ಟೆ ಅಗಲಿದ ತಮಿಳುನಾಡಿನ ಮುಖ್ಯಮಂತ್ರಿ ಜೆ.ಜಯಲಲಿತಾ ಅವರ ಹುಟ್ಟೂರು ಮೈಸೂರು ಎನ್ನುವುದು ಎಲ್ಲರಿಗೂ ಗೊತ್ತು. ಕರ್ನಾಟಕದಿಂದ ವಲಸೆ ಹೋಗಿ ತಮಿಳುನಾಡಿನಲ್ಲಿ ಸಿನಿಮಾ ರಂಗ ಹಾಗೂ ರಾಜಕೀಯದಲ್ಲಿ ದಶಕಗಳ ಕಾಲ ರಾಣಿಯಾಗಿ ಮೆರೆದರು.

ಆದರೆ ಜಯಲಲಿತಾ ಅವರೊಂದಿಗೆ ಕನ್ನಡದ ಖ್ಯಾತ ವರನಟ ಡಾ. ರಾಜ್ ಕುಮಾರ್ ಹಾಗೂ ರಾಷ್ಟ್ರಕವಿ ಕುವೆಂಪು ಅವರಿಗೆ ಒಂದು ರೀತಿಯಲ್ಲಿ ನಂಟಿರುವುದು ಬಹಳ ಮಂದಿಗೆ ಗೊತ್ತಿಲ್ಲ. ಜಯಲಲಿತಾ ಅವರು ಸಿನಿಮಾ ರಂಗ ಪ್ರವೇಶಿಸಿದ್ದೇ ರಾಜ್ ಕುಮಾರ್ ಅವರ ಶ್ರೀಶೈಲಾ ಮಹತ್ಮೆ ಸಿನಿಮಾದ ಮೂಲಕ. 1961 ನವೆಂಬರ್ 28 ರಂದು ಬಿಡುಗಡೆಗೊಂಡ ಈ ಚಿತ್ರದಲ್ಲಿ ಡಾ. ರಾಜ್ ಕುಮಾರ್ ಅವರೊಂದಿಗೆ ಜಯಾಲಲಿತಾ ನಟಿಸಿದ್ದರು. ಈ ಚಿತ್ರವನ್ನು ಆರೂರು ಪಟ್ಟಾಭಿ ನಿರ್ದೆಶಿಸಿದ್ದು, ನೀರ್ನಳ್ಳಿ ತಳಿಕೇರಪ್ಪ ನಿರ್ಮಿಸಿದ್ದರು. ದೈವ ಪ್ರದಾನವಾದ ಶ್ರೀಶೈಲಾ ಮಹತ್ಮೆ ಆ ಕಾಲದಲ್ಲಿಯೇ ಸೌಂಡ್ ಮಾಡಿತ್ತು. ಸಿನಿಮಾದಲ್ಲಿ ನಟನೆ ಮಾಡಿದಾಗ ಜಯಲಲಿತಾ ಅವರಿಗೆ ಕೇವಲ 13 ವರ್ಷ ವಯಸ್ಸಾಗಿತ್ತು.

ಇನ್ನು ಕುವೆಂಪು ಅವರೊಂದಿಗೆ ಇರುವ ನಂಟೇನಂದರೆ ಕನ್ನಡದ ಹಿರಿಯ ನಟ ಕಲ್ಯಾಣ್ ಕುಮಾರ್ ಅವರೊಂದಿಗೆ 1965 ರಲ್ಲಿ ನಾಯಕಿಯಾಗಿ  ಜಯಲಲಿತಾ 'ಮಾವನ ಮಗಳು' ಚಿತ್ರದಲ್ಲಿ ಅಭಿನಯಿಸಿದ್ದರು. ಈ ಚಿತ್ರದಲ್ಲಿರುವ 'ನಾನೇ ವೀಣೆ, ನೀನೆ ತಂತಿ, ಅವನೇ ವೈಣಿಕ' ಎಂಬ ಇಂಪಾದ ಗೀತೆಯನ್ನು ಆಗಾಗ ಕೇಳಿರಿತ್ತೀರಿ. ಈ ಹಾಡನ್ನು ಬರೆದಿದ್ದು ರಾಷ್ಟ್ರಕವಿ ಕುವೆಂಪು.

ಕೆಳಗಿನ ಕೊಂಡಿಯನ್ನಿ ಕ್ಲಿಕ್ ಮಾಡುವ ಮೂಲಕ  ರಾಷ್ಟ್ರಕವಿ ಕುವೆಂಪು 'ನಾನೇ ವೀಣೆ, ನೀನೆ ತಂತಿ, ಅವನೇ ವೈಣಿಕ' ಬರೆದ ಹಾಡನ್ನು ಕೇಳಿ.

 

click me!