ಸಾಮಾನ್ಯವಾಗಿ ಹರಕೆ ತೀರಿಸಲು ಬೆಂಕಿ ಕೆಂಡ ಹಾಯುವುದು, ಮೈಮೇಲೆ ಚುಚ್ಚಿಕೊಳ್ಳುವುದು ಮಾಡ್ತಾರೆ. ಆದ್ರೆ ಮಗುವನ್ನು ಕೆಂಡದ ಮೇಲೆ ಮಲಗಿಸಿ ಹರಕೆ ತೀರಿಸುವ ವಿಚಿತ್ರ ಪದ್ಧತಿ ಧಾರವಾಡದ ಅಲ್ಲಾಪುರ ಗ್ರಾಮದಲ್ಲಿ ನಡೆದಿದೆ.
ಹುಬ್ಬಳ್ಳಿ(ಅ.01): ಸಾಮಾನ್ಯವಾಗಿ ಹರಕೆ ತೀರಿಸಲು ಬೆಂಕಿ ಕೆಂಡ ಹಾಯುವುದು, ಮೈಮೇಲೆ ಚುಚ್ಚಿಕೊಳ್ಳುವುದು ಮಾಡ್ತಾರೆ. ಆದ್ರೆ ಮಗುವನ್ನು ಕೆಂಡದ ಮೇಲೆ ಮಲಗಿಸಿ ಹರಕೆ ತೀರಿಸುವ ವಿಚಿತ್ರ ಪದ್ಧತಿ ಧಾರವಾಡದ ಅಲ್ಲಾಪುರ ಗ್ರಾಮದಲ್ಲಿ ನಡೆದಿದೆ.
ಮೊಹರಂ ಹಬ್ಬದ ಪ್ರಯುಕ್ತ ಕೆಲವರು ಕೆಂಡ ಹಾಯುವ ಹರಕೆ ತೀರಿಸಲಾಗುತ್ತೆ. ನಂತರ ಬೆಂಕಿ ಕೆಂಡದ ಮೇಲೆ ಹೂವು ಮತ್ತು ಬಾಳೆ ಎಲೆ ಹಾಕಿ, ಅದರ ಮೇಲೆ ಹಸುಗೂಸುಗಳನ್ನ ಮಲಗಿಸಿ ಹರಕೆ ತೀರಿಸ್ತಾರೆ. ಹಲವು ವರ್ಷಗಳಿಂದ ಇಂತಹದೊಂದು ವಿಚಿತ್ರ ಆಚರಣೆ ಆಚರಿಸಲಾಗುತ್ತಿದೆ. ಈ ರೀತಿ ಮಾಡುವುದರಿಂದ ಚಿಕ್ಕಮಕ್ಕಳಿಗೆ ಯಾವುದೇ ದುಷ್ಟಶಕ್ತಿ ಕಾಟ ನೀಡುವುದಿಲ್ಲ ಎಂಬುದು ಇಲ್ಲಿನ ಜನರ ನಂಬಿಕೆಯಾಗಿದೆ.
ಆದರೆ ಹಸುಗೂಸಿಗೆ ಇಂತಹದೊಂದು ಆಚರಣೆ ಬೇಕಾ? ಏನು ಅರಿಯದ ಮಕ್ಕಳ ಮೂಲಕ ಹರಕೆ ತೀರಿಸುವುದು ಎಷ್ಟರ ಮಟ್ಟಿಗೆ ಸರಿ ಎನ್ನುವುದು ಪ್ರಜ್ಞಾವಂತರ ಪ್ರಶ್ನೆ.