ಪಾಕ್ ಸಚಿವರ ಮೇಲೆ 10 ಕೋಟಿ ಮಾನನಷ್ಟ ಕೇಸ್ ಹಾಕಿದ ಉಗ್ರ..!

By Suvarna Web DeskFirst Published Oct 1, 2017, 2:01 PM IST
Highlights

ಪಾಕಿಸ್ತಾನದ ನೆಲದಿಂದ ಭಯೋತ್ಪಾದನೆಯನ್ನು ನಿರ್ಮೂಲನ ಮಾಡಬೇಕೆಂದು ಒತ್ತಾಯಿಸುವ ಅಮೆರಿಕಕ್ಕೆ, 20-30 ವರ್ಷಗಳ ಹಿಂದೆ ಇದೇ ಭಯೋತ್ಪಾದಕರು ಪ್ರಿಯರಾಗಿದ್ದರು ಎಂಬರ್ಥದಲ್ಲಿ ಆಸಿಫ್ ಮಾತನಾಡಿದ್ದರು.

ಲಾಹೋರ್(ಅ.01): ‘ಅಮೆರಿಕದ ಪ್ರಿಯ ವ್ಯಕ್ತಿ’ ಎಂದು ಕರೆದ ಪಾಕಿಸ್ತಾನಿ ವಿದೇಶಾಂಗ ಸಚಿವ ಖವಾಜ ಆಸಿಫ್ ವಿರುದ್ಧ ಮುಂಬೈ ಭಯೋತ್ಪಾದಕ ದಾಳಿ ರೂವಾರಿ ಹಫೀಜ್ ಸಯೀದ್ 10 ಕೋಟಿ ರುಪಾಯಿ ಮಾನನಷ್ಟ ಮೊಕದ್ದಮೆ ದಾಖಲಿಸಲು ನಿರ್ಧರಿಸಿದ್ದಾನೆ.

ಪಾಕಿಸ್ತಾನದ ನೆಲದಿಂದ ಭಯೋತ್ಪಾದನೆಯನ್ನು ನಿರ್ಮೂಲನ ಮಾಡಬೇಕೆಂದು ಒತ್ತಾಯಿಸುವ ಅಮೆರಿಕಕ್ಕೆ, 20-30 ವರ್ಷಗಳ ಹಿಂದೆ ಇದೇ ಭಯೋತ್ಪಾದಕರು ಪ್ರಿಯರಾಗಿದ್ದರು ಎಂಬರ್ಥದಲ್ಲಿ ಆಸಿಫ್ ಮಾತನಾಡಿದ್ದರು.

ಈ ಸಂಬಂಧ ಸಯೀದ್ ಪರ ವಕೀಲ ಎ.ಕೆ. ಡೋಗರ್ ವಿದೇಶಾಂಗ ಸಚಿವ ವಿರುದ್ಧ ನೋಟಿಸ್ ಜಾರಿಗೊಳಿಸಿದ್ದಾರೆ.

click me!