ಹೋಮಕುಂಡ ಹತ್ಯೆಗೆ ಹೊಸ ಟ್ವಿಸ್ಟ್: ಪತ್ನಿ ರಾಜೇಶ್ವರಿಯ ಸಹೋದರಿಯರ ವಿರುದ್ಧ ದಾಖಲಾಗಿದೆ ದೂರು

By Web Desk  |  First Published Oct 13, 2016, 3:01 AM IST

ಭಾಸ್ಕರ ಶೆಟ್ಟರ ಮಾಲಿಕತ್ವದ ಹೋಟೇಲ್ ದುರ್ಗಾ ಇಂಟರ್ ನ್ಯಾಶನಲ್ ವಿವಾದದ ಕೇಂದ್ರ ಬಿಂದುವಾಗಿದೆ. ಕೊಲೆ ನಡೆದಾಗ ದುರ್ಗಾ ಹೊಟೇಲಿನ ಮಾಲಿಕತ್ವ  ಪತ್ನಿ ರಾಜೇಶ್ವರಿ ಹೆಸರಿನಲ್ಲಿತ್ತು. ಕೊಲೆಯ ನಂತರ ರಾಜೇಶ್ವರಿ ಹೋಟೇಲ್'ನ ಪವರ್ ಆಫ್ ಅಟರ್ನಿಯನ್ನು ರಾಜೇಶ್ವರಿ ತಾಯಿ ಸುಮತಿ ಹೆಸರಿಗೆ ಮಾಡಿದ್ದರು. ಇದಕ್ಕೆ ಭಾಸ್ಕರ ಶೆಟ್ಟರ ತಾಯಿ ಗುಲಾಬಿ ಶೆಟ್ಟಿ ಆಕ್ಷೇಪ ವ್ಯಕ್ತಪಡಿಸಿ ಕೋರ್ಟ್ ಮೊರೆ ಹೋಗಿದ್ದರು. ಈ ವೇಳೆ ರಾಜೇಶ್ವರಿಯ ಸಹೋದರಿಯರಾದ ರೂಪಾ ಮತ್ತು ರೇಣುಕಾ ಹೊಟೇಲಿಗೆ ಬಂದು ಹಣ ಕೇಳುತ್ತಿದ್ದರು ಎನ್ನಲಾಗಿದೆ. ಹಣ ನೀಡದೇ ಹೋದಾಗ ಕೊಲೆ ಬೆದರಿಕೆ ಒಡ್ಡಿದ್ದಾರೆ ಎಂದೂ ದೂರು ದಾಖಲಿಸಲಾಗಿದೆ.


ಉಡುಪಿ(ಅ.13): ಉಡುಪಿಯಲ್ಲಿ  ನಡೆದ ಭಾಸ್ಕರ ಶೆಟ್ಟಿ ಹೋಮಕುಂಡ ಹತ್ಯೆ ಪ್ರಕರಣದ ದಿನಕ್ಕೊಂದು ತಿರುವು ಪಡೆಯುತ್ತಿದೆ. ಇದೀಗ ನಗರ ಠಾಣೆಯಲ್ಲಿ  ಭಾಸ್ಕರ ಶೆಟ್ಟರ ಪತ್ನಿ ರಾಜೇಶ್ವರಿಯ ಸಹೋದರಿಯರಾದ ರೂಪಾ ಮತ್ತು ರೇಣುಕಾ ಎಂಬವರ ವಿರುದ್ಧ ದೂರು ದಾಖಲಾಗಿದೆ.

ಭಾಸ್ಕರ ಶೆಟ್ಟರ ಮಾಲಿಕತ್ವದ ಹೋಟೇಲ್ ದುರ್ಗಾ ಇಂಟರ್ ನ್ಯಾಶನಲ್ ವಿವಾದದ ಕೇಂದ್ರ ಬಿಂದುವಾಗಿದೆ. ಕೊಲೆ ನಡೆದಾಗ ದುರ್ಗಾ ಹೊಟೇಲಿನ ಮಾಲಿಕತ್ವ  ಪತ್ನಿ ರಾಜೇಶ್ವರಿ ಹೆಸರಿನಲ್ಲಿತ್ತು. ಕೊಲೆಯ ನಂತರ ರಾಜೇಶ್ವರಿ ಹೋಟೇಲ್'ನ ಪವರ್ ಆಫ್ ಅಟರ್ನಿಯನ್ನು ರಾಜೇಶ್ವರಿ ತಾಯಿ ಸುಮತಿ ಹೆಸರಿಗೆ ಮಾಡಿದ್ದರು. ಇದಕ್ಕೆ ಭಾಸ್ಕರ ಶೆಟ್ಟರ ತಾಯಿ ಗುಲಾಬಿ ಶೆಟ್ಟಿ ಆಕ್ಷೇಪ ವ್ಯಕ್ತಪಡಿಸಿ ಕೋರ್ಟ್ ಮೊರೆ ಹೋಗಿದ್ದರು.

Latest Videos

undefined

ಈ ವೇಳೆ ರಾಜೇಶ್ವರಿಯ ಸಹೋದರಿಯರಾದ ರೂಪಾ ಮತ್ತು ರೇಣುಕಾ ಹೊಟೇಲಿಗೆ ಬಂದು ಹಣ ಕೇಳುತ್ತಿದ್ದರು ಎನ್ನಲಾಗಿದೆ. ಹಣ ನೀಡದೇ ಹೋದಾಗ ಕೊಲೆ ಬೆದರಿಕೆ ಒಡ್ಡಿದ್ದಾರೆ ಎಂದೂ ದೂರು ದಾಖಲಿಸಲಾಗಿದೆ.

 

click me!