ಗೊಂದಲ ಸೃಷ್ಟಿಸಿದ ಸುದೀಪ್ ನಕಲಿ ಟ್ವೀಟ್

Published : Mar 30, 2017, 02:49 AM ISTUpdated : Apr 11, 2018, 01:11 PM IST
ಗೊಂದಲ ಸೃಷ್ಟಿಸಿದ ಸುದೀಪ್ ನಕಲಿ ಟ್ವೀಟ್

ಸಾರಾಂಶ

ಕಿಚ್ಚ ಸುದೀಪ್ ಹೆಸರಿನಲ್ಲಿ ಸೃಷ್ಟಿಸಿದ ನಕಲಿ ಟ್ವೀಟ್ ಇದೀಗ ವಿವಾದಕ್ಕೆ ಕಾರಣವಾಗಿದೆ. ಇನ್ನು ಈ ನಕಲಿ ಟ್ವೀಟ್ ಕುರಿತಾಗಿ ಮಾತನಾಡಿರುವ ಸುದೀಪ್ ಹೀಗೆ ನಕಲಿ ಟ್ವೀಟ್ ಮಾಡುವುದು ಅಪರಾಧ, ಇಂದು ಒಳ್ಳೆಯ ವಿಚಾರವನ್ನೇ ನಕಲಿ ಟ್ವೀಟ್'ನಲ್ಲಿ ಬರೆದುಕೊಂಡಿದ್ದಾರೆ. ಆದರೆ ನಾಳೆ ಏನಾದರೂ ಕೆಟ್ಟದಾಗಿ ಬರೆದರೆ ಕಲಾವಿದರ ಬಗ್ಗೆ ತಪ್ಪು ಸಂದೇಶ ರವಾನೆಯಾಗುತ್ತದೆ ಹೀಗಾಗಿ ದೂರನ್ನು ನೀಡುತ್ತೇನೆ ಎಂದಿದ್ದಾರೆ.

ಬೆಂಗಳೂರು(ಮಾ.30): ಕಿಚ್ಚ ಸುದೀಪ್ ಹೆಸರಿನಲ್ಲಿ ಸೃಷ್ಟಿಸಿದ ನಕಲಿ ಟ್ವೀಟ್ ಇದೀಗ ವಿವಾದಕ್ಕೆ ಕಾರಣವಾಗಿದೆ. ಇನ್ನು ಈ ನಕಲಿ ಟ್ವೀಟ್ ಕುರಿತಾಗಿ ಮಾತನಾಡಿರುವ ಸುದೀಪ್ ಹೀಗೆ ನಕಲಿ ಟ್ವೀಟ್ ಮಾಡುವುದು ಅಪರಾಧ, ಇಂದು ಒಳ್ಳೆಯ ವಿಚಾರವನ್ನೇ ನಕಲಿ ಟ್ವೀಟ್'ನಲ್ಲಿ ಬರೆದುಕೊಂಡಿದ್ದಾರೆ. ಆದರೆ ನಾಳೆ ಏನಾದರೂ ಕೆಟ್ಟದಾಗಿ ಬರೆದರೆ ಕಲಾವಿದರ ಬಗ್ಗೆ ತಪ್ಪು ಸಂದೇಶ ರವಾನೆಯಾಗುತ್ತದೆ ಹೀಗಾಗಿ ದೂರನ್ನು ನೀಡುತ್ತೇನೆ ಎಂದಿದ್ದಾರೆ.

ಆಗಿದ್ದೇನು?

ವಾಸ್ತವವಾಗಿ ನಿನ್ನೆಯಿಂದ ಸುದೀಪ್ ಹೆಸರಿನಲ್ಲಿ ನಕಲಿ ಟ್ವೀಟ್ ಒಂದನ್ನು ಅಭಿಮಾನಿಗಳು ಸೃಷ್ಟಿಸಿ ಅಭಿಮಾನಿಗಳ ನಕಲಿ ಟ್ವೀಟ್ ಒಂದು ಫೇಸ್'ಬುಕ್'ನಲ್ಲಿ ಹರಿದಾಡುತ್ತಿತ್ತು. ಫೋಟೋಶಾಪ್ ಮೂಲಕ ಸೃಷ್ಟಿಸಿದ್ದ ಈ ಟ್ವೀಟ್'ನಲ್ಲಿ 'ಕಂಗ್ರಾಟ್ಸ್ ರಾಜಕುಮಾರ್ ಟೀಂ ಆ್ಯಂಡ್ ಮೈ ಫ್ರೆಂಡ್ ಪುನೀತ್ ರಾಜ್'ಕುಮಾರ್' ಎಂದು ಬರೆದಿದ್ದರು.

ಇದು ಸುದೀಪ್ ಗಮನಕ್ಕೆ ಬರುತ್ತಿದ್ದಂತೆಯೇ, ತಮ್ಮ ಅಕೌಂಟ್ನಲ್ಲಿ 'ರಾಜಕುಮಾರ ಯಶಸ್ಸು ಖುಷಿ ಕೊಟ್ಟಿದೆ, ಆದರೆ ಆ ಟ್ವೀಟ್ ನನ್ನದಲ್ಲ. ನಾನು ಟ್ವೀಟ್ ಮಾಡದಿದ್ದರೂ ನನ್ನ ಹೆಸರು ಬಳಕೆ ಸರಿಯಲ್ಲ' ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ಈ ಟ್ವೀಟ್ ತನ್ನದಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಇನ್ನು ಈ ಕುರಿತಾಗಿ ಮಾತನಾಡಿರುವ ಸುದೀಪ್ 'ನನಗೆ ಈ ನಕಲಿ ಟ್ವೀಟ್ ಕಂಡು ಕೋಪ ಬಂದಿಲ್ಲ. ಆದರೆ ಇದನ್ನು ಗಂಭೀರವಾಗಿ ಪರಿಗಣಿಸಬೇಕಾಗುತ್ತದೆ ಯಾಕೆಂದರೆ  ಇಂದು ಅಭಿಮಾನಿಗಳೇನೋ ಒಳ್ಳೆಯ ವಿಚಾರವಾಗೇ ನಕಲಿ ಟ್ವೀಟ್ ಸೃಷ್ಟಿಸಿದ್ದಾರೆ. ಆದರೆ ಒಂದು ವೇಳೆ ನಾಳೆ ಯಾರಾದರೂ ಕೆಟ್ಟ ಸಂದೇಶವುಳ್ಳ ನಕಲಿ ಟ್ವೀಟ್ ಮಾಡಿದರೆ ಅದನ್ನು ನಾನೇ ಮಾಡಿದ್ದು ಅಂತ ಅಂದುಕೊಳ್ಳುತ್ತಾರೆ. ಹೀಗಾ ಈ ರೀತಿ ನಕಲಿ ಟ್ವೀಟ್ ಸೃಷ್ಟಿಸುವುದು ಅಪರಾಧವಾಗುತ್ತದೆ ಈ ದೃಷ್ಟಿಯಿಂದ ದೂರು ನೀಡುತ್ತೇನೆ. ನಾಳೆ ಇದರಿಂದ ಬೇರೆ ಕಲಾವಿದರಿಗೂ ತೊಂದರೆ ಆಗುವ ಸಾಧ್ಯತೆಗಳಿವೆ.  ಪ್ರತಿಯೊಬ್ಬರಿಗೂ ಜವಾಬ್ದಾರಿ ಇರಬೇಕು.  ಕಲಾವಿದರ ನಡುವೆ ಇಲ್ಲದ ಜಗಳ ಇತ್ತೀಚೆಗೆ ಅಭಿಮಾನಿಗಳ ನಡುವೆ ನಡೆಯುತ್ತಿದೆ ಇದು ಸರಿಯಲ್ಲ' ಎಂದಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಗೇಮಿಂಗ್ ಕ್ರಿಯೇಟರ್ ಫೆರಾರಿ ಕಾರು ಅಪಘಾತದಲ್ಲಿ ಸಾವು, ಮೊಬೈಲ್‌ನಲ್ಲಿ ಭೀಕರ ದೃಶ್ಯ ಸೆರೆ
Bengaluru: ಯಲಹಂಕದಲ್ಲಿ ನಿರ್ಮಾಣವಾಗಲಿದೆ ಭಾರತದ ಮೊಟ್ಟಮೊದಲ, ಚೀನಾ ಸ್ಟೈಲ್‌ನ ಎತ್ತರಿಸಿದ ರೈಲ್ವೆ ಟರ್ಮಿನಲ್‌!