84ನೇ ಸಾಹಿತ್ಯ ಸಮ್ಮೇಳನ ಮುಂದೂಡುವ ಸಾಧ್ಯತೆ

By Web DeskFirst Published Oct 17, 2018, 7:09 PM IST
Highlights

ಸಮ್ಮೇಳನ ಅವಸರದಲ್ಲಿ ಆಗುವುದು ಬೇಡ. ಜನವರಿ ತಿಂಗಳಲ್ಲಿ ಮಾಡುವುದು ಸೂಕ್ತ ಎಂಬ ಅಭಿಪ್ರಾಯಗಳು ಕಾರ್ಯಕಾರಿ ಸಭೆಯಲ್ಲಿ ಕೇಳಿ ಬಂದಿರುವ ಕಾರಣ ಸಮ್ಮೇಳನ ಮುಂದಕ್ಕೆ ಹೋಗುವ ಸಾಧ್ಯತೆಯಿದೆ. 

ಧಾರವಾಡ[ಅ.17]: ಧಾರವಾಡದಲ್ಲಿ ಡಿಸೆಂಬರ್ ತಿಂಗಳಲ್ಲಿ ನಡೆಯಲಿರುವ 84ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ದಿನಾಂಕ ಮುಂದೂಡುವ ಸಾಧ್ಯತೆಯಿದೆ. 

ಸಮ್ಮೇಳನ ಅವಸರದಲ್ಲಿ ಆಗುವುದು ಬೇಡ. ಜನವರಿ ತಿಂಗಳಲ್ಲಿ ಮಾಡುವುದು ಸೂಕ್ತ ಎಂಬ ಅಭಿಪ್ರಾಯಗಳು ಕಾರ್ಯಕಾರಿ ಸಭೆಯಲ್ಲಿ ಕೇಳಿ ಬಂದಿರುವ ಕಾರಣ ಸಮ್ಮೇಳನ ಮುಂದಕ್ಕೆ ಹೋಗುವ ಸಾಧ್ಯತೆಯಿದೆ. ಈಗಾಗಲೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಹಿರಿಯ ಸಾಹಿತಿ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ.ಚಂದ್ರಶೇಖರ್​ ಕಂಬಾರ್​ ಅವರನ್ನು ಆಯ್ಕೆ ಮಾಡಲಾಗಿದೆ.

ಈ ಮೊದಲು ಸಾಹಿತ್ಯ ಸಮ್ಮೇಳನವನ್ನು ಡಿಸೆಂಬರ್ 7 ಮತ್ತು ಡಿಸೆಂಬರ್ 8ರಂದು ನಡೆಸಲು ನಿರ್ಧರಿಸಲಾಗಿತ್ತು. ಆದರೆ ಎಲ್ಲ ರೀತಿಯ ರೂಪುರೇಷೆ, ತಯಾರಿ ಮಾಡಿಕೊಳ್ಳದೆ ಆತುರವಾಗಿ ಹಮ್ಮಿಕೊಳ್ಳುವುದು ಬೇಡ ಎಂಬ ಸಲಹೆಗಳು ಕೇಳಿ ಬಂದ ಹಿನ್ನಲೆಯಲ್ಲಿ ಸಮ್ಮೇಳನ ಮುಂದಕ್ಕೆ ಹೋಗುವ ಸಾಧ್ಯತೆಯಿದೆ ಎನ್ನಲಾಗಿದೆ.

84ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಚಂದ್ರಶೇಖರ ಕಂಬಾರ್​ ಆಯ್ಕೆ

click me!