
ನೀಲಕ್ಕಲ್(ಅ.17): ಹಿಂಸಾತ್ಮಕ ಪ್ರತಿಭಟನೆಯ ನಡುವೆಯೇ ಶಬರಿಮಲೆ ಅಯ್ಯಪ್ಪ ಸ್ವಾಮಿ ದರ್ಶನ ಆರಂಭವಾಗಿದೆ. ಆದರೆ ಮೊದಲ ದಿನ ಮಹಿಳೆಯರನ್ನು ತಡೆಯುವಲ್ಲಿ ಪ್ರತಿಭಟನಾಕಾರರು ಯಶಸ್ವಿಯಾಗಿದ್ದಾರೆ.
ಪ್ರತಿಭಟನೆಯಿಂದಾಗಿ ಶಬರಿಮಲೆಯ ಮಾರ್ಗದುದ್ದಕ್ಕೂ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದ್ದು, ನೀಲಕ್ಕಲ್ ಗ್ರಾಮ ಅಕ್ಷರಶಃ ರಣಾಂಗಣವಾಗಿ ಪರಿವರ್ತನೆಗೊಂಡಿತ್ತು.
ಈ ಮಧ್ಯೆ ಶಬರಿಮಲೆ ದೇಗುಲ ಮಾಸ ಪೂಜೆಗಾಗಿ ಇಂದು ದ್ವಾರಗಳನ್ನು ತೆರೆಯಲಾಗಿದೆ. ಹಲವು ಭಕ್ತರು ದೇಗುಲಕ್ಕೆ ಪ್ರವೇಶ ಪಡೆದು ಅಯ್ಯಪ್ಪನ ದರ್ಶನ ಪಡೆದಿದ್ದಾರೆ. ಆದರೆ 10 ವರ್ಷ ಕೆಳಗಿನ ಹಾಗೂ 50 ವರ್ಷ ಮೇಲ್ಪಟ್ಟ ಮಹಿಳಾ ಭಕ್ತರನ್ನು ಹೊರತುಪಡಿಸಿದರೆ ಯಾವ ಮಹಿಳೆಯೂ ದೇಗುಲ ಪ್ರವೇಶ ಪಡೆಯಲಿಲ್ಲ.
ಐದು ದಿನಗಳ ತುಲಾ ಪೂಜೆ ಮುಕ್ತಾಯದ ನಂತರ ದೇವಸ್ಥಾನ ಬಂದ್ ಆಗುವವರೆಗೂ ನೀಲಕ್ಕಲ್ ನಲ್ಲಿ ಪ್ರತಿಭಟನೆ ಮುಂದುವರೆಸುವುದಾಗಿ ಹಿಂದೂ ಐಕ್ಯ ವೇದಿಕೆ ತಿಳಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.