
ಕಣ್ಣೂರು: ಗೋಹತ್ಯೆ ಕುರಿತ ಕೇಂದ್ರ ಸರ್ಕಾರದ ಅಧಿಸೂಚನೆ ಖಂಡಿಸಿ ಇತ್ತೀಚೆಗೆ ಕೇರಳದ ಕಣ್ಣೂರಿನಲ್ಲಿ ಸಾರ್ವಜನಿಕವಾಗಿ ಎಮ್ಮೆ ಕರು ಕಡಿದು ಪ್ರತಿಭಟನೆ ನಡೆಸಿದ್ದ 8 ಕಾಂಗ್ರೆಸ್ ಕಾರ್ಯಕರ್ತರನ್ನು ಪೊಲೀಸರು ಗುರುವಾರ ಬಂಧಿಸಿದ್ದಾರೆ. ಬಂಧಿತರಲ್ಲಿ ಕಣ್ಣೂರು ಲೋಕ ಸಭಾ ಕ್ಷೇತ್ರ ಮಂಡಲದ ಯುವ ಕಾಂಗ್ರೆಸ್ ಅಧ್ಯಕ್ಷ ರಿಜಿಲ್ ಮಕ್ಕುಟ್ಟಿಕೂಡ ಸೇರಿದ್ದಾನೆ.
ಕೇರಳ ಪೊಲೀಸ್ ಕಾಯ್ದೆಯ 120-ಬಿ ಪರಿ ಚ್ಛೇದದ ಅಡಿ ಇತ್ತೀಚೆಗೆ ಪೊಲೀಸರು ಈ 8 ಜನರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದರು. 120-ಬಿ ಪ್ರಕಾರ, ಸಾರ್ವಜನಿಕರಿಗೆ ತೊಂದರೆ ಯಾಗುವ ಮತ್ತು ನೋವುಂಟು ಮಾಡುವ ರೀತಿಯಲ್ಲಿ ಯಾವುದೇ ಪ್ರಾಣಿಯನ್ನು ವಧಿಸು ವುದು ಕಾನೂನು ಬಾಹಿರವಾಗಿದ್ದು, ಇದಕ್ಕೆ 1 ವರ್ಷ ಜೈಲು ಶಿಕ್ಷೆ ಹಾಗೂ 5 ಸಾವಿರ ರು. ದಂಡ ವಿಧಿಸಲು ಅವಕಾಶವಿದೆ.
ಇದರ ಜೊತೆಗೆ ಬಂಧಿತರ ವಿರುದ್ಧ ಪ್ರಾಣಿ ಹಿಂಸೆ ತಡೆ ಕಾಯ್ದೆ-1960ಯ 2 ಪರಿಚ್ಛೇದಗಳು, ಐಪಿಸಿ ಸೆಕ್ಷನ್ 143 (ಅಕ್ರಮವಾಗಿ ಗುಂಪುಗೂಡುವುದು), 147 (ದಂಗೆ), 149 ಅಡಿ ಪ್ರಕರಣ ಹಾಕಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.