ಆಯುಷ್ಮಾನ್‌ ಭಾರತ : ಬಹುದೊಡ್ಡ ಆತಂಕ ನಿವಾರಣೆ

By Web DeskFirst Published Nov 19, 2018, 8:58 AM IST
Highlights

ದೇಶದ 50 ಕೋಟಿ ಬಡಜನರಿಗೆ ವಾರ್ಷಿಕ 5 ಲಕ್ಷ ರು.ವರೆಗೆ ಉಚಿತ ಆರೋಗ್ಯ ವಿಮೆ ಒದಗಿಸುವ ಆಯುಷ್ಮಾನ್‌ ಭಾರತ್‌ ಯೋಜನೆ ಕುರಿತು ಇದು ದೊಡ್ಡ ಆತಂಕವೊಂದು ನಿವಾರಣೆಯಾಗಿದೆ. 

ನವದೆಹಲಿ: ದೇಶದ 50 ಕೋಟಿ ಬಡಜನರಿಗೆ ವಾರ್ಷಿಕ 5 ಲಕ್ಷ ರು.ವರೆಗೆ ಉಚಿತ ಆರೋಗ್ಯ ವಿಮೆ ಒದಗಿಸುವ ಆಯುಷ್ಮಾನ್‌ ಭಾರತ್‌ ಯೋಜನೆ ಕುರಿತು ಇದು ದೊಡ್ಡ ಆತಂಕವೊಂದು ನಿವಾರಣೆಯಾಗಿದೆ. 

ಸೆ.23ರಂದು ಜಾರಿಯಾಗಿದ್ದ ಯೋಜನೆಯಡಿ ಇದುವರೆಗೆ 2.32 ಲಕ್ಷ ಜನ ಫಲಾನುಭವಿಗಳಾಗಿದ್ದು, ಈ ಪೈಕಿ ಶೇ.68ರಷ್ಟುಜನ ಖಾಸಗಿ ಆಸ್ಪತ್ರೆಗಳಲ್ಲೇ ಚಿಕಿತ್ಸೆ ಪಡೆದುಕೊಂಡಿದ್ದಾರೆ. 

ರಾಷ್ಟ್ರೀಯ ಆರೋಗ್ಯ ಸಂಸ್ಥೆ ಬಿಡುಗಡೆ ಮಾಡಿರುವ ವರದಿಯಲ್ಲಿ ಈ ಅಂಶಗಳಿವೆ. ಸರ್ಕಾರದ ವಿಮಾ ಯೋಜನೆಯಲ್ಲಿ ಚಿಕಿತ್ಸೆಗೆ ಕಡಿಮೆ ಹಣ ನೀಡುವ ಕಾರಣ, ಖಾಸಗಿ ಆಸ್ಪತ್ರೆಗಳು ಯೋಜನೆಯಲ್ಲಿ ಭಾಗಿಯಾಗಲು ಹಿಂದೇಟು ಹಾಕುತ್ತಿವೆ ಎಂಬ ವರದಿಗಳ ಬೆನ್ನಲ್ಲೇ ಈ ಮಾಹಿತಿ ಹೊರಬಿದ್ದಿದೆ.

click me!
Last Updated Nov 19, 2018, 8:57 AM IST
click me!