ಫೇಸ್‌ಬುಕ್‌ ಮೂಲಕ ಯುವಕರಿಗೆ ಗಾಳ: ಉಗ್ರ ಮಹಿಳೆ ಬಂಧನ

By Web DeskFirst Published Nov 19, 2018, 8:37 AM IST
Highlights

ಉತ್ತರ ಕಾಶ್ಮೀರದ ಬಂಡಿಪೋರಾ ಜಿಲ್ಲೆಯ ಸುಂಬಲ್‌ ಪ್ರದೇಶ ಶಾಜಿಯಾ, ಎಂಬಾಕೆ ಫೇಸ್‌ಬುಕ್‌ ಮೂಲಕವೇ ಯುವಕರನ್ನು ಸಂಪರ್ಕಿಸುತ್ತಿದ್ದಳು. ಜೊತೆಗೆ ಯುವಕರಿಗೆ ಜಿಹಾದಿ ಕೃತ್ಯಗಳಲ್ಲಿ ಭಾಗಿಯಾಗುವಂತೆ ಮತ್ತು ಶಸ್ತ್ರಾಸ್ತ್ರ ಹೋರಾಟದಲ್ಲಿ ಭಾಗಿಯಾಗುವಂತೆ ಉತ್ತೇಜಿಸುತ್ತಿದ್ದಳು. ಆಕೆಯ ಈ ನಡೆಯ ಬಗ್ಗೆ ಹಲವು ದಿನಗಳಿಂದ ನಿಗಾ ಇಟ್ಟಿದ್ದ ಪೊಲೀಸರು, ಇದೀಗ ಆಕೆಯನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ ಆಕೆ ಹೆಚ್ಚಿನ ಮಾಹಿತಿ ಹೊರಗೆಡವಿಲ್ಲವಾದರೂ, ಅನಂತ್‌ನಾಗ್‌ ಜಿಲ್ಲೆಯ ಇಬ್ಬರು ಯುವಕರಿಗೆ ಶಸ್ತ್ರಾಸ್ತ್ರ ನೀಡಿದ್ದ ಮಾಹಿತಿಯನ್ನು ನೀಡಿದ್ದಾಳೆ. ಈ ಪೈಕಿ ಒಬ್ಬ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.

ಶ್ರೀನಗರ[ನ.19]: ಕಾಶ್ಮೀರಿ ಯುವಕರನ್ನು ಉಗ್ರವಾದದತ್ತ ಸೆಳೆಯಲು ನಾನಾ ತಂತ್ರ ಅನುಸರಿಸುವ ಭಯೋತ್ಪಾದಕ ಸಂಘಟನೆಗಳು ಇದೀಗ, ಮಹಿಳೆಯರ ಮೂಲಕ ಇಂಥ ಕೆಲಸ ಸಾಧಿಸಿಕೊಳ್ಳುತ್ತಿರುವ ಆತಂಕಕಾರಿ ವಿಷಯ ಬೆಳಕಿಗೆ ಬಂದಿದೆ. ಇಂಥದ್ದೇ ಕೃತ್ಯದಲ್ಲಿ ತೊಡಗಿದ್ದ 30 ವರ್ಷದ ಕಾಶ್ಮೀರಿ ಮಹಿಳೆಯೊಬ್ಬಳನ್ನು ಪೊಲೀಸರು ಬಂಧಿಸಿದ್ದಾರೆ.

ಉತ್ತರ ಕಾಶ್ಮೀರದ ಬಂಡಿಪೋರಾ ಜಿಲ್ಲೆಯ ಸುಂಬಲ್‌ ಪ್ರದೇಶ ಶಾಜಿಯಾ, ಎಂಬಾಕೆ ಫೇಸ್‌ಬುಕ್‌ ಮೂಲಕವೇ ಯುವಕರನ್ನು ಸಂಪರ್ಕಿಸುತ್ತಿದ್ದಳು. ಜೊತೆಗೆ ಯುವಕರಿಗೆ ಜಿಹಾದಿ ಕೃತ್ಯಗಳಲ್ಲಿ ಭಾಗಿಯಾಗುವಂತೆ ಮತ್ತು ಶಸ್ತ್ರಾಸ್ತ್ರ ಹೋರಾಟದಲ್ಲಿ ಭಾಗಿಯಾಗುವಂತೆ ಉತ್ತೇಜಿಸುತ್ತಿದ್ದಳು. ಆಕೆಯ ಈ ನಡೆಯ ಬಗ್ಗೆ ಹಲವು ದಿನಗಳಿಂದ ನಿಗಾ ಇಟ್ಟಿದ್ದ ಪೊಲೀಸರು, ಇದೀಗ ಆಕೆಯನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ ಆಕೆ ಹೆಚ್ಚಿನ ಮಾಹಿತಿ ಹೊರಗೆಡವಿಲ್ಲವಾದರೂ, ಅನಂತ್‌ನಾಗ್‌ ಜಿಲ್ಲೆಯ ಇಬ್ಬರು ಯುವಕರಿಗೆ ಶಸ್ತ್ರಾಸ್ತ್ರ ನೀಡಿದ್ದ ಮಾಹಿತಿಯನ್ನು ನೀಡಿದ್ದಾಳೆ. ಈ ಪೈಕಿ ಒಬ್ಬ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.

ಕೆಲ ದಿನಗಳ ಹಿಂದಷ್ಟೇ ಗ್ರೆನೇಡ್‌ಗಳನ್ನು ಸಾಗಿಸುತ್ತಿದ್ದ ಆಸಿಯಾ ಎಂಬ ಮಹಿಳೆಯೊಬ್ಬಳನ್ನು ಭದ್ರತಾ ಪಡೆಗಳು ವಶಕ್ಕೆ ಪಡೆದಿದ್ದವು. ಈ ಮೂಲಕ ಶಸ್ತ್ರಾಸ್ತ್ರ ಸಾಗಣೆಗೆ ಉಗ್ರರು, ಮಹಿಳೆಯರ ನೆರವು ಪಡೆಯುತ್ತಿರುವ ವಿಷಯ ಬೆಳಕಿಗೆ ಬಂದಿತ್ತು. ಅದರ ಬೆನ್ನಲ್ಲೇ ಶಾಜಿಯಾ ಪ್ರಕರಣ ಬೆಳಕಿಗೆ ಬಂದಿದೆ.

ಅಚ್ಚರಿ ವಿಷಯವೆಂದರೆ ಹೀಗೆ ಹಿಜ್ಬುಲ್‌ ಉಗ್ರರ ಪರವಾಗಿ ಕಾರ್ಯನಿರ್ವಹಿಸುತ್ತಿದ್ದ ಶಾಜಿಯಾ, ಕೆಲ ಹಿರಿಯ ಪೊಲೀಸ್‌ ಅಧಿಕಾರಿಗಳ ಜೊತೆಗೂ ನಂಟು ಹೊಂದಿದ್ದ ವಿಷಯವೂ ಬೆಳಕಿಗೆ ಬಂದಿದೆ. ಉಗ್ರರ ಬಂಧನಕ್ಕೆ ನೆರವಾಗುವ ನೆಪ ಹೇಳಿ, ಈಕೆ ಕೆಲ ಹಿರಿಯ ಪೊಲೀಸ್‌ ಅಧಿಕಾರಿಗಳಿಂದ ಗೌಪ್ಯ ಮಾಹಿತಿ ಸಂಗ್ರಹಿಸಿ ಅದನ್ನು ಉಗ್ರ ಸಂಘಟನೆಗಳಿಗೆ ನೀಡುತ್ತಿದ್ದಳು ಎನ್ನಲಾಗಿದೆ. ಹೀಗಾಗಿ ಆಕೆಯ ನಂಟು ಹೊಂದಿರುವ ಪೊಲೀಸರ ಬಗ್ಗೆಯೂ ತನಿಖೆ ಆರಂಭಿಸಲಾಗಿದೆ.

click me!
Last Updated Nov 19, 2018, 8:37 AM IST
click me!