ಮಂಗಳೂರಿನ ತೈಲ ಸಂಗ್ರಹಾಗಾರಕ್ಕೆ 60 ಲಕ್ಷ ಬ್ಯಾರೆಲ್‌ ಕಚ್ಚಾತೈಲ

By Suvarna Web DeskFirst Published Feb 13, 2018, 7:19 AM IST
Highlights

ಮಂಗಳೂರಿನಲ್ಲಿರುವ ಕಚ್ಚಾತೈಲ ಸಂಗ್ರಹ ಘಟಕಕ್ಕೆ ಅಬುಧಾಬಿ ನ್ಯಾಷನಲ್‌ ಆಯಿಲ್‌ ಕಂಪನಿ (ಎಡಿಎನ್‌ಒಸಿ) 60 ಲಕ್ಷ ಬ್ಯಾರೆಲ್‌ ಕಚ್ಚಾತೈಲವನ್ನು ಪೂರೈಸಲಿದೆ.

ನವದೆಹಲಿ: ಮಂಗಳೂರಿನಲ್ಲಿರುವ ಕಚ್ಚಾತೈಲ ಸಂಗ್ರಹ ಘಟಕಕ್ಕೆ ಅಬುಧಾಬಿ ನ್ಯಾಷನಲ್‌ ಆಯಿಲ್‌ ಕಂಪನಿ (ಎಡಿಎನ್‌ಒಸಿ) 60 ಲಕ್ಷ ಬ್ಯಾರೆಲ್‌ ಕಚ್ಚಾತೈಲವನ್ನು ಪೂರೈಸಲಿದೆ.

ಮೋದಿ ಅವರ ಅಬುಧಾಬಿ ಭೇಟಿಯ ವೇಳೆ ಈ ಕುರಿತು ಒಪ್ಪಂದ ಮಾಡಿಕೊಳ್ಳಲಾಗಿದೆ. ಮಂಗಳೂರಿನಲ್ಲಿರುವ ಕಚ್ಚಾತೈಲ ಸಂಗ್ರಹಾಗಾರದಲ್ಲಿ ಎರಡು ವಿಭಾಗಗಳಲ್ಲಿ 15 ಲಕ್ಷ ಟನ್‌ (1.1 ಕೋಟಿ ಬ್ಯಾರೆಲ್‌) ಕಚ್ಚಾತೈಲವನ್ನು ಸಂಗ್ರಹಿಸಬಹುದಾಗಿದೆ.

ಇಲ್ಲಿ ಸಂಗ್ರಹವಾಗುವ ಕಚ್ಚಾತೈಲದ ಸ್ವಲ್ಪ ಭಾಗವನ್ನು ಎಡಿಎನ್‌ಒಸಿ ತನ್ನ ವಾಣಿಜ್ಯ ವ್ಯವಹಾರಕ್ಕೆ ಬಳಸಿಕೊಳ್ಳಲಿದೆ. ಇದಕ್ಕೆ ಅದು ಯಾವುದೇ ಬಾಡಿಗೆ ತೆರಬೇಕಿಲ್ಲ. ಉಳಿದ ತೈಲ ಭಾರತಕ್ಕೆ ಸೇರಿದ್ದು, ತುರ್ತು ವೇಳೆ ಬಳಕೆಯಾಗಲಿದೆ.

click me!