
ನವದೆಹಲಿ(ಜು.17): ವಾಹನ ಓಡಿಸುವ ಪರೀಕ್ಷೆಗೆ ಒಳಪಡಿಸಿಯೇ ವಾಹನ ಚಾಲಕರಿಗೆ ಚಾಲನಾ ಪರವಾನಗಿ (ಡಿಎಲ್) ನೀಡಬೇಕು ಎಂದು ನಿಯಮ ಹೇಳುತ್ತದೆ. ಆದರೆ ದೇಶದಲ್ಲಿ ಡಿಎಲ್ ಹೊಂದಿರುವವರ ಪೈಕಿ ಪ್ರತಿ 10 ಮಂದಿಯಲ್ಲಿ ಆರು ಜನರು ಇಂತಹ ಯಾವುದೇ ಪರೀಕ್ಷೆಗೂ ಹಾಜರಾಗಿಲ್ಲ ಎಂಬ ಕಳವಳಕಾರಿ ಮಾಹಿತಿಯನ್ನು ಸಮೀಕ್ಷೆಯೊಂದು ಬಯಲಿಗೆಳೆದಿದೆ.
ರಸ್ತೆ ಅಪಘಾತಗಳು ಹಾಗೂ ಅದರಿಂದ ಸಂಭವಿಸುವ ಸಾವುಗಳ ಪ್ರಮಾಣ ದೇಶದಲ್ಲಿ ದಿನೇದಿನೇ ಹೆಚ್ಚಾಗುತ್ತಿರುವ ಸಂದರ್ಭದಲ್ಲೇ ಪ್ರಕಟಗೊಂಡಿರುವ ಈ ವರದಿ, ಸಾರಿಗೆ ಇಲಾಖೆಗಳಲ್ಲಿ ಯಾವ ಪರಿಯ ಭ್ರಷ್ಟಾಚಾರ ಇದೆ ಎಂಬುದನ್ನು ಅನಾವರಣಗೊಳಿಸಿದೆ. ಅತಿ ಹೆಚ್ಚು ವಾಹನಗಳು ಇರುವ ಐದು ಮಹಾನಗರಗಳು ಸೇರಿ 10 ನಗರಗಳಲ್ಲಿ ‘ಸೇವ್ ಲೈಫ್ ಫೌಂಡೇಶನ್’ ಎಂಬ ಸಂಸ್ಥೆ ಸಮೀಕ್ಷೆ ನಡೆಸಿದೆ. ಆ ಪೈಕಿ ಉತ್ತರಪ್ರದೇಶದ ಆಗ್ರಾದಲ್ಲಿ ಶೇ.88ರಷ್ಟು ಜನರು ತಾವು ಡಿಎಲ್ ಪಡೆಯಲು ಯಾವುದೇ ಪರೀಕ್ಷೆಗೂ ಹೋಗಿಲ್ಲ ಎಂದು ಒಪ್ಪಿಕೊಂಡಿದ್ದಾರೆ.
ಜೈಪುರದಲ್ಲಿ ಶೇ.72, ಗುವಾಹಟಿಯಲ್ಲಿ ಶೇ.64 ಹಾಗೂ ದೆಹಲಿಯಲ್ಲಿ ಶೇ.54, ಮುಂಬೈನಲ್ಲಿ ಶೇ.50 ಮಂದಿ ಇಂತಹುದೇ ಉತ್ತರ ನೀಡಿದ್ದಾರೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.