
ಬೆಂಗಳೂರು(ಜು.17): ಬೆಂಗಳೂರು ಮೂಲದ ಜಗದ್ವಿಖ್ಯಾತ ಮಾಹಿತಿ ತಂತ್ರಜ್ಞಾನ ಕಂಪನಿ ಇನ್ಫೋಸಿಸ್'ನ ಮೊದಲ ಉದ್ಯೋಗಿ ಈಗ ಉದ್ಯಮಿಯಾಗಿ ರೂಪಾಂತರಗೊಂಡಿದ್ದಾರೆ. ಅವರ ಹೆಸರು ಶರದ್ ಹೆಗಡೆ (59). ಆಫ್‌ಲೈನ್ ಹಾಗೂ ಆನ್‌ಲೈನ್ ಪಾವತಿ ತಂತ್ರಜ್ಞಾನ ಸಂಸ್ಥೆ ‘ಫೋನ್‌ಪೈಸಾ’ ಎಂಬ ಕಂಪನಿಯನ್ನು ಅವರು ಇನ್ಫೋಸಿಸ್‌ನ ಮಾಜಿ ಸಹೋದ್ಯೋಗಿ ಸಿ.ಎಸ್. ಪ್ರಸಾದ್ ಸುಬ್ರಮಣಿಯನ್ ಹಾಗೂ ಮಾಜಿ ಬ್ಯಾಂಕರ್ ರಿತೇಶ್ ಅಗರ್‌ವಾಲ್ ಜತೆಗೂಡಿ ಹುಟ್ಟಿಹಾಕಿದ್ದಾರೆ.
ಎನ್. ಆರ್. ನಾರಾಯಣಮೂರ್ತಿ, ನಂದನ್ ನಿಲೇಕಣಿ ಸೇರಿ ಇನ್ಫೋಸಿಸ್‌ನ ಆರು ಮಂದಿ ಸಂಸ್ಥಾಪಕರು ಪಟನಿ ಕಂಪ್ಯೂಟರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಅಲ್ಲಿ ಶರದ್ ಹೆಗಡೆ ಕೂಡ ಉದ್ಯೋಗಿಯಾಗಿದ್ದರು. 1981ರಲ್ಲಿ ಇನ್ಫೋಸಿಸ್ ಸ್ಥಾಪಿಸಲು ಮೂರ್ತಿ, ಸಂಗಡಿಗರು ಮುಂದಾದಾಗ ಶರದ್ ಅವರಿಗೂ ಆಹ್ವಾನಿಸಿದ್ದರು. ಆದರೆ ಉನ್ನತ ವ್ಯಾಸಂಗಕ್ಕಾಗಿ ಆಹ್ವಾನ ನಿರಾಕರಿಸಿದ್ದರು.
ಇನ್ಫೋಸಿಸ್ ಸ್ಥಾಪನೆ ಬಳಿಕ 1983ರಲ್ಲಿ ಅದರ ಮೊದಲ ಉದ್ಯೋಗಿಯಾಗಿ ಶರದ್ ನೇಮಕಗೊಂಡರು. ಅವರು ಕಂಪನಿಯ ಬೌದ್ಧಿಕ ತಂಡದ ಭಾಗವಾಗಿದ್ದರು ಎಂದು ನಾರಾಯಣಮೂರ್ತಿ ಅವರೇ ಹೇಳಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.