
ಹಾಸನ : ಇವಿಎಂ ಯಂತ್ರ ಬೇಡ ಎನ್ನುವ ವಿಚಾರ ಸಂಬಂಧವಾಗಿದೆ ಚುನಾವಣಾ ಆಯೋಗ ಈ ರೀತಿಯ ಭಯವನ್ನು ಯಾಕೆ ಹುಟ್ಟಿಸುತ್ತಿದೆಯೋ ಗೊತ್ತಿಲ್ಲ ಎಂದು ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಹೇಳಿದ್ದಾರೆ.
ವಿಶ್ವದ ಹೆಚ್ಚು ಕಡೆ ಚುನಾವಣೆಗೆ ಬ್ಯಾಲೆಟ್ ಪೇಪರ್ ಬಳಸಲಾಗುತ್ತದೆ. ಅನೇಕ ರಾಷ್ಟ್ರಗಳಲ್ಲಿ ಇವಿಎಂ ಯಂತ್ರ ಬಳಕೆಯಾಗುತ್ತಿಲ್ಲ. ಮತ ಯಂತ್ರದಲ್ಲಿ ಅನೇಕ ಲೋಪ ದೋಷ ಇದೆ ಎನ್ನುವ ಕೂಗಿದೆ. ಆದರೂ ಆಯೋಗ ಹಠಕ್ಕೆ ಬಿದ್ದಿರುವುದು ಸರಿಯಲ್ಲ. ಅನುಮಾನಗಳ ಬಗ್ಗೆ ಹೇಳಿಕೊಳ್ಳುವ ಸ್ವಾತಂತ್ರ್ಯವೂ ಇಲ್ಲ ಎಂದು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇಲ್ಲಿನ ಅರಕಲಗೋಡು ತಾಲೂಕಿನ ಯೋಧ ಚಂದ್ರ ನಕ್ಸಲ್ ದಾಳಿಗೆ ತುತ್ತಾಗಿದ್ದು ಅವರ ಕುಟುಂಬಕ್ಕೆ 9 ಲಕ್ಷ ಪರಿಹಾರ ಪರಿಹಾರ ಬರಲಿದೆ. ಪರಿಹಾರದಲ್ಲಿ ಏರುಪೇರಾದರೆ ಸಂಸತ್ನಲ್ಲಿ ಚರ್ಚೆ ನಡೆಸಲಾಗುವುದು ಎಂದು ಹೇಳಿದರು. ನಮ್ಮ ಪಕ್ಷದಿಂದಲೂ ಸೂಕ್ತ ಸಹಾಯ ಒದಗಿಸಲಾಗುವುದುಎ ಎಂದು ಈ ವೇಳೆ ಹೇಳಿದರು. ಚುನಾವಣೆ ಮುಗಿದ ನಂತರ ಕೆಲ ದಿನ ಹಾಸನದಲ್ಲಿ ಇರುವುದಾಗಿಯೂ ಕೂಡ ಅವರು ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.