
ಭೋಪಾಲ್[ಸೆ. 26] ಹನಿಟ್ರ್ಯಾಪ್ ತಂಡವೊಂದು ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದು ಸಿಕ್ಕಿರುವ ಡೇಟಾ ಕಂಡು ಎಲ್ಲರೂ ಹೌಹಾರಿದ್ದಾರೆ. ಇದು ದೇಶದ ಅತಿದೊಡ್ಡ ಸೆಕ್ಸ್ ಸ್ಕ್ಯಾಂಡಲ್ ಆಗಬಹುದು ಎಂದು ತನಿಖೆಯಲ್ಲಿ ಭಾಗವಹಿಸಿರುವ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪೋರೆನ್ಸಿಕ್ ಲ್ಯಾಬ್ ನಲ್ಲಿ ಎಲ್ಲ ಡೇಡಾಗಳ ತನಿಖೆ ನಡೆಯುತ್ತಿದೆ. ಡಿಜಿಟಲ್ ಫೈಲ್ ಗಳ ಸಂಖ್ಯೆ 5000 ತಲುಪಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಪ್ರೇಮಸಲ್ಲಾಪದ ವಿಡಿಯೋ ಲೀಕ್: 9 ಮಕ್ಕಳ ತಂದೆಯನ್ನೇ ಖೆಡ್ಡಾಕ್ಕೆ ಕೆಡವಿದ ಯುವತಿ..!
18 ವರ್ಷದ ಯುವತಿಯೊಬ್ಬಳು ಭೋಪಾಲ್ ನ ಪ್ರತಿಷ್ಠಿತ ಕ್ಲಬ್ ನಲ್ಲಿ ರೂಂ ಬುಕ್ ಮಾಡಿ ಹಿರಿಯ ಅಧಿಕಾರಿಗಳನ್ನು ಟ್ರಾಪ್ ಮಾಡುತ್ತಿದ್ದರು. ಕ್ಲಬ್ ನ ಸಿಸಿಟಿವಿಯ ದಶ್ಯ ಡಿಲೀಟ್ ಮಾಡುವ ಯತ್ನ ನಡೆಸಲಾಗಿತ್ತು ಎಂದು ಹೇಳಿದ್ದಾರೆ.
ಎಲ್ಲಾ ಗ್ರೇಡ್ ನ ಅಧಿಕಾರಿಗಳು, ಬಿಜೆಪಿ, ಕಾಂಗ್ರೆಸ್ ಸೇರಿದಂತೆ ವಿವಿಧ ರಾಜಕೀಯ ಪಕ್ಷದ ಮುಖಂಡರು, ಸೀನಿಯರ್ ಐಪಿಎಸ್ ಆಫಿಸರ್ ಸಹ ಈ ಗ್ಯಾಂಗ್ ಬಲೆಯೊಳಕ್ಕೆ ಸಿಕ್ಕಿಬಿದ್ದಿದ್ದಾರೆ ಎನ್ನಲಾಗಿದೆ. ಈ ವಿಡಿಯೋಗಳು ಬೇರೆಯವರ ಕೈ ಸೇರದಂತೆ ನೋಡಿಕೊಲ್ಳುವುದೇ ಅಧಿಕಾರಿಗಳ ಮುಂದಿರುವ ದೊಡ್ಡ ಸವಾಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.