ಜೈಷ್ ಟಾರ್ಗೆಟ್ ಮೋದಿ-ಶಾ, ಧೋವಲ್: ವಾಯುನೆಲೆಗೆ ಆರೆಂಜ್ ಅಲರ್ಟ್!

Published : Sep 25, 2019, 11:34 PM ISTUpdated : Sep 25, 2019, 11:37 PM IST
ಜೈಷ್ ಟಾರ್ಗೆಟ್ ಮೋದಿ-ಶಾ, ಧೋವಲ್: ವಾಯುನೆಲೆಗೆ ಆರೆಂಜ್ ಅಲರ್ಟ್!

ಸಾರಾಂಶ

ಜೈಷ್ ಟಾರ್ಗೆಟ್ ಮೋದಿ-ಶಾ, ಧೋವಲ್: ವಾಯುನೆಲೆಗೆ ಆರೆಂಜ್ ಅಲರ್ಟ್! /ಆರ್ಟಿಕಲ್ 370 ರದ್ದಾಗಿನಿಂದ ಪಾಕ್ ಒಂದೊಂದೆ ಕಿತಾಪತಿ/ ಉಗ್ರರ ಟಾರ್ಗೆಟ್ ಲಿಸ್ಟ್ ನಲ್ಲಿ ಮೋದಿ, ಅಮಿತ್ ಶಾ ಮತ್ತು ಧೋವೆಲ್/ ಪಂಜಾಬ್ ನಲ್ಲಿ ಡ್ರೋಣ್ ಬಳಸಿ ಕಿತಾಪತಿ ಮಾಡುತ್ತಿರುವ ಪಾಕಿಸ್ತಾನ

ನವದೆಹಲಿ(ಸೆ.25): ಪಾಕಿಸ್ತಾನ ಮೂಲದ ಜೈಷ್-ಎ-ಮೊಹ್ಮದ್ ಸಂಘಟನೆ ಪ್ರಧಾನಿ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹಾಗೂ ರಾಷ್ಟ್ರೀಯ  ಭದ್ರತಾ ಸಲಹೆಗಾರ ಅಜಿತ್ ಧೋವಲ್ ಅವರನ್ನು ಕೊಲ್ಲುವ ಸಂಚು ರೂಪಿಸಿದೆ ಎನ್ನಲಾಗಿದೆ.

ಗುಪ್ತಚರ ಇಲಾಖೆ ಈ ಕುರಿತು ಮಾಹಿತಿ ನೀಡಿದ್ದು, ಪ್ರಧಾನಿ ಮೋದಿ, ಅಮಿತ್ ಶಾ ಹಾಗೂ ಅಜಿತ್ ಧೋವಲ್ ಅವರನ್ನು ಜೈಷ್-ಎ-ಮೊಹ್ಮದ್ ಟಾರ್ಗೆಟ್ ಮಾಡಿದೆ ಎಂದು ತಿಳಿಸಿದೆ. ಅಲ್ಲದೇ ದೇಶದ 30 ಪ್ರಮುಖ ನಗರಗಳು, ಪ್ರಮುಖ ವಾಯುನೆಲೆಗಳ ಮೇಲೂ ಜೈಷ್ ದಾಳಿಯ ಯೋಜನೆ ರೂಪಿಸಿದೆ ಎಂದು ಗುಪ್ತಚರ ವರದಿ ಸ್ಪಷ್ಟಪಡಿಸಿದೆ.

9/11 ಆದ್ಮೇಲೆ ಯುಎಸ್ ಜೊತೆ ಹೋರಾಡಿದ್ದು ಐತಿಹಾಸಿಕ ತಪ್ಪು: ಇಮ್ರಾನ್!

ಜಮ್ಮು, ಪಠಾಣ್ ಕೋಟ್, ಜೈಪುರ, ಗಾಂದಿನಗರ,  ಕಾನ್ಪುರ, ಲಕ್ನೌ ಸೇರಿದಂತೆ ಅನೇಕ ನಗರಗಳಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ವಾಯನೆಲೆಗಳ ಮೇಲೂ ಹದ್ದಿನ ಕಣ್ಣು ಇಡಲಾಗಿದೆ. ಪಂಜಾಬ್ ನ  ಟಾರನ್ ಜಿಲ್ಲೆಯ ರಾಜೋಕೆ ಗ್ರಾಮದಲ್ಲಿ ಡ್ರೋಣ್ ಹ್ಯಾಂಡ್ ಗ್ರೆನೇಡ್ಸ್  ಬಿಳಿಸುತ್ತಿರುವ ಪಾಕಿಸ್ತಾನದ ವಿರುದ್ಧ ಕ್ರಮಕ್ಕೆ ಪಂಜಾಬ್ ಸಿಎಂ ಕೇಂದ್ರಕ್ಕೆ ಮನವಿ ಮಾಡಿಕೊಂಡಿದ್ದರು.

ನಮ್ಮ ಸೇನೆಗೆ ಸಂಪೂರ್ಣ ಸ್ವಾತಂತ್ರ್ಯವಿದೆ ಎನ್ನುವ ಮುಖಾಂತರ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭಾರತ ಎಲ್ಲದಕ್ಕೂ ಸಿದ್ಧವಿದೆ ಎಂಬ ಉತ್ತರವನ್ನು ನೀಡಿದೆ. ಗುಪ್ತಷರ ಇಲಾಖೆ ನೀಡಿರುವ ಆತಂಕಕಾರಿ ಮಾಹಿತಿಯ ನಂತರ ದೇಶದ ಉತ್ತರ ಭಾಗದಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

UIDAI Rules: ಯಾವುದೇ ಹೋಟೆಲ್‌ನಲ್ಲಿ ಆಧಾರ್ ಕಾರ್ಡ್ ಫೋಟೋಕಾಪಿ ನೀಡೋ ಅಗತ್ಯವಿಲ್ಲ: ಈ ಹೊಸ ನಿಯಮ ತಿಳ್ಕೊಳ್ಳಿ
ತಾಯಿಯ ಜಾತಿ ಆಧಾರದಲ್ಲೇ ಮಗಳಿಗೆ ಜಾತಿ ಪ್ರಮಾಣಪತ್ರ: ಸುಪ್ರೀಂ ಮಹತ್ವದ ತೀರ್ಪು