ಈ ಜಿಲ್ಲೆಯ 400 ಮಕ್ಕಳಲ್ಲಿ ಎಚ್ಐವಿ ಸೋಂಕು... ಕಾರಣ!

By Web DeskFirst Published May 17, 2019, 5:06 PM IST
Highlights

ಪಾಕಿಸ್ತಾನದ ಒಂದೇ ಜಿಲ್ಲೆಯಲ್ಲಿ 500ಕ್ಕೂ ಅಧಿಕ ಎಚ್ಐವಿ ಸೋಂಕಿತರಿದ್ದಾರೆ. ಅದರಲ್ಲೂ 400 ಮಕ್ಕಳು! ಇದಕ್ಕೆ ಅಸಲಿ ಕಾರಣ ಏನು? 

ಲಾಹೋರ್[ಮೇ. 17]  ರೇಹಮಾನಾ ಬೀಬಿ ಜೀವನದಲ್ಲಿ ಅಂದು ಎಲ್ಲವೂ ಅಂದುಕೊಂಡಂತೆ ಇರಲಿಲ್ಲ. ಆಕೆಯ ಹತ್ತು ವರ್ಷದ ಮಗ ಅಲಿ ರಾಜಾ ಜ್ವರದಿಂದ ಬಳಲುತ್ತ ಕುತಿದ್ದ. ಲರ್ಕಾನಾ ಜಿಲ್ಲಾಸ್ಪತ್ರೆ ಇಂಥದನ್ನೆಲ್ಲ ಗಮನಕ್ಕೆ ತೆಗೆದುಕೊಳ್ಳುವ ಸ್ಥಿತಿಯಲ್ಲಿಯೂ ಇರಲೇ ಇಲ್ಲ,

ರೇಹಮಾನಾ ಬೀಬಿ ತಮ್ಮ ಮಗನನ್ನು ಹತ್ತಿರದ ವೈದ್ಯರ ಬಳಿ ಕರೆದುಕೊಂಡು ಹೋಗುತ್ತಾರೆ.  ಪ್ಯಾರಾಸಿಟಮೊಲ್ ಮಾತ್ರೆ ಬರೆದುಕೊಡುವವ ವೈದ್ಯರು ಯಾವುದೇ ತಲೆ ಬಿಸಿ ಮಾಡಿಕೊಳ್ಳದಂತೆ ತಿಳಿಸುತ್ತಾರೆ. ಆದರೆ  ತಾಯಿ ಮಾತ್ರ ತುಂಬಾ ಚಿಂತೆಗೀಡಾಗುತ್ತಾರೆ. ಜವರದಿಂದ ಬಳಲುತ್ತಿದ್ದ ಮಕ್ಕಳೆಲ್ಲ ಎಚ್ ಐ ವಿ ಪಾಸಿಟಿವ್ ಎಂದು ಹೇಳುತ್ತಿದ್ದದ್ದು ಈ ತಾಯಿಯ ಚಿಂತೆಗೆ ಕಾರಣವಾಗಿರುತ್ತದೆ.

ಒಂದೇ ಸಿರಿಂಜ್ ಚುಚ್ಚಿ 46 ಮಂದಿಗೆ ಏಡ್ಸ್ ಹರಡಿದ ವೈದ್ಯ

ಆದರೆ ನಂತರ ಕೆಲವು ಮೆಡಿಕಲ್ ಟೆಸ್ಟ್ ಮಾಡಿದ ನಂತರ ಈ ಬಾಲಕನೂ ಎಚ್ ಐ ವಿ ಪಾಸಿಟಿವ್ ಎಂಬುದು ಗೊತ್ತಾಗಿ ತಾಯಿಯ ಎದೆ ಒಡೆದು ಹೋಗುತ್ತದೆ. ಹಾಗಾದರೆ ಮಕ್ಕಳು ಮಾರಕ ಏಡ್ಸ್  ಗೆ ತುತ್ತಾಗಿದ್ದಕ್ಕೆ ಕಾರಣ? 

ಸಿಂಧ್ ಪ್ರಾಂತ್ಯದ ಏಡ್ಸ್ ಕಂಟ್ರೋಲ್ ಮಿಶಿನ್ ಹೆಡ್ ಸಿಕಂದರ್ ಮೆನನ್ ಹೇಳುವಂತೆ ಒಟ್ಟು 13800 ಜನರನ್ನು ಪರೀಕ್ಷೆಗೆ ಗುರಿಪಡಿಸಲಾಗಿದೆ. ಇದರಲ್ಲಿ 400 ಮಕ್ಕಳು ಮತ್ತು 100 ಜನ ವಯಸ್ಕರ್ ಲ್ಲಿ ಎಚ್ ಐವಿ ಪಾಸಿಟಿವ್ ಕಂಡುಬಂದಿದೆ ಎಂಬ ಆತಂಕಕಾರಿ ಸುದ್ದಿ ತಿಳಿಸಿದ್ದಾರೆ.

ಇದೆಲ್ಲವನ್ನು ಗಂಭೀರವಾಗಿ ತೆಗೆದುಕೊಂಡಿರುವ ಪಾಕಿಸ್ತಾನ ಸರ್ಕಾರ ಮೂಲವನ್ನು ಪತ್ತೆ ಹಚ್ಚಿದೆ. ಎಚ್.ಐವಿ ಸೋಂಕು ಇರುವ ಸಿರಿಂಜ್ ಬಳಕೆ ಮಾಡಿದ್ದೆ ಈ ಪರಿಪ್ರಮಾಣದಲ್ಲಿ ವಾಸಿಯಾಗದ ಕಾಯಿಲೆ ಹರಡಲು ಕಾರಣ ಎಂದು ಹೇಳಲಾಗಿದೆ. ಇಷ್ಟು ದೊಡ್ಡ ಮಟ್ಟದ ಸಮಸ್ಗಯೆಗೆ ಸಿಲುಕಿರುವ ಪಾಕಿಸ್ತಾನದ ಲರ್ಕಾನಾ ಜಿಲ್ಲೆ ಅಲ್ಲಿಯ ಮಾಜಿ ಪ್ರಧಾನಿ ಬೆನೆಜಿರ್ ಭುಟ್ಟೋ ಅವರ ತವರು ಎಂಬುದನ್ನು ಗಮನಿಸಬೇಕಿದೆ.

click me!