5 ವರ್ಷದ ಮಗುವಿಗೆ 26 ಲಕ್ಷದ ಮರ್ಸಿಡೀಸ್ ಕಾರು ಗಿಫ್ಟ್!

Published : Nov 21, 2018, 05:08 PM IST
5 ವರ್ಷದ ಮಗುವಿಗೆ 26 ಲಕ್ಷದ ಮರ್ಸಿಡೀಸ್ ಕಾರು ಗಿಫ್ಟ್!

ಸಾರಾಂಶ

5 ವರ್ಷದ ಹುಡುಗನೊಬ್ಬ ಮಾಡಿರುವ ಸಾಧನೆ ನೋಡಿದರೆ ನಿಜಕ್ಕೂ ನೀವು ಅಚ್ಚರಿಗೊಳಗಾಗುತ್ತೀರಿ. ಅಷ್ಟಕ್ಕೂ ಆ ಬಾಲಕ ಮಾಡಿದ್ದೇನು ಅಂತೀರಾ ಇಲ್ಲಿದೆ ವಿವರ.

ಇತ್ತೀಚೆಗೆ ಬಹುತೇಕ ಯುವಕರು ವ್ಯಾಯಾಮವನ್ನು ತೊರೆದಿದ್ದು, ಅಹಾರವನ್ನು ಮಿತವಾಗಿ ತಿನ್ನಲಾರಂಭಿಸಿದ್ದಾರೆ. ವ್ಯಾಯಾಮದಿಂದ ದೂರ ಉಳಿಯಲು ಕೆಲಸದ ನೆಪ ನೀಡುವುದು ಸಾಮಾನ್ಯವಾಗಿದೆ. ಆದರೀಗ 5 ವರ್ಷದ ಹುಡುಗನೊಬ್ಬ ಮಾಡಿರುವ ಸಾಧನೆ ನೋಡಿದರೆ ನಿಜಕ್ಕೂ ನೀವು ಅಚ್ಚರಿಗೊಳಗಾಗುತ್ತೀರಿ. ಅಷ್ಟಕ್ಕೂ ಆ ಬಾಲಕ ಮಾಡಿದ್ದೇನು ಅಂತೀರಾ ಇಲ್ಲಿದೆ ವಿವರ.

ಈ 5 ವರ್ಷದ ಪೋರ ಬರೋಬ್ಬರಿ 4,105 ಪುಶ್ ಅಪ್ಸ್ ಮಾಡಿದ್ದಾನೆ, ಅದು ಕೂಡಾ ಭರ್ತಿ 2 ಗಂಟೆ 25 ನಿಮಿಷ. ಇದರಿಂದ ಖುಷಿಯಾಗಿರುವ ರಷ್ಯಾ ಸೇನೆಯ ಲೆಫ್ಟಿನೆಂಟ್ ಬಾಲಕನಿಗೆ 26 ಲಕ್ಷ ರೂಪಾಯಿ ಮೌಲ್ಯದ ಮರ್ಸಿಡೀಸ್ ಕಾರನ್ನು ಗಿಫ್ಟ್ ಆಗಿ ನೀಡಿದ್ದಾರೆ. ರಾಖೀಮ್ ಕುರಯಂ ಹೆಸರಿನ ಈ ಪೋರ ಬಾಲ್ಯದಿಂದಲೇ ವ್ಯಾಯಾಮ ಮಾಡುತ್ತಾನಂತೆ.

ಕಾರ್ ಗಿಫ್ಟ್ ಮಾಡಿರುವ ಲೆಫ್ಟಿನೆಂಟ್ ಬಾಲಕನಿಗೆ  'ನೀನು ಈ ಕಾರನ್ನು ನಿನ್ನ ತಂದೆಗೆ ಚಲಾಯಿಸಲು ತಿಳಿಸು ಹಾಗೂ ನೀನು ಆರಾಮಾಗಿ ಕುಳಿತುಕೋ. ನೀನು ಮಾಡಿದ್ದು ಮೆಚ್ಚುಗೆಗೆ ಪಾತ್ರವಾಗಿದ್ದು, ಹೀಗಾಗಿ ಈ ಐಷಾರಾಮಿ ಕಾರು ಪಡೆಯಲು ನಿನಗೆ ಹಕ್ಕಿದೆ. ಇನ್ಮುಂದೆ ನಾವಿಬ್ಬರೂ ನನ್ನ ಫಿಟ್ನೆಸ್ ಸೆಂಟರ್‌ನಲ್ಲಿ ಸಿಗೋಣ ಹಾಗೂ ಒಟ್ಟಾಗಿ ವ್ಯಾಯಾಮ ಮಾಡೋಣ' ಎಂದಿದ್ದಾರೆ. 

ಲೆಫ್ಟಿನೆಂಟ್ ಮಾತಿಗೆ ಪ್ರತಿಕ್ರಿಯಿಸಿರುವ ಬಾಲಕ 'ಇನ್ಮುಂದೆ ಈ ಕಾರನ್ನು ನನ್ನ ತಂದೆ ಚಲಾಯಿಸುತ್ತಾರೆ. ನನ್ನನ್ನು ಫಿಟ್ನೆಸ್ ಸೆಂಟರ್‌ಗೆ ಬಿಡಲು ಅವರಿನ್ನು ಟ್ಯಾಕ್ಸಿಯಲ್ಲಿ ಬರಬೇಕೆಂದಿಲ್ಲ' ಎಂದಿದ್ದಾನೆ.

ಈ ಬಾಲಕ 4,105 ಪುಶ್ ಅಪ್ಸ್ ಮಾಡಿ ವಿಶ್ವ ದಾಖಲೆ ನಿರ್ಮಿಸಿದ್ದಾನೆ. ಆದರೆ ವಿಡಿಯೋ ಕ್ಲಾರಿಟಿ ಕಳಪೆಯಾಗಿದ್ದ ಕಾರಣ ರೆಕಾರ್ಡಿಂಗ್ ರಿಜೆಕ್ಟ್ ಆಗಿದೆ ಅಲ್ಲದೇ ರಿಜಿಸ್ಟರ್ ಆಗಿಲ್ಲ. ಆದರೀಗ ಕಾರು ಸಿಕ್ಕಿರುವುದರಿಂದ ಹುಡುಗ ಬಹಳ ಖುಷಿ ಪಟ್ಟಿದ್ದಾನೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಬಾಯಿಂದ ಕುಡಿಯೋದು ಹಳೇ ಸ್ಟೈಲ್; ಮೂಗಿನಲ್ಲೇ ಬಿಯರ್‌ ಇಳಿಸಿದ ಮಹಾಭೂಪ! Video Viral
ಬಾಂಗ್ಲಾ: ಹೊತ್ತಿ ಉರಿದ ಹಿಂದೂ ಶಿಕ್ಷಕನ ಮನೆ