ರಾಜ್ಯ ಹೈಕೋರ್ಟ್‌ಗೆ ಐವರು ಜಡ್ಜ್‌ಗಳ ನೇಮಕ

Published : Nov 02, 2018, 07:16 AM IST
ರಾಜ್ಯ ಹೈಕೋರ್ಟ್‌ಗೆ ಐವರು ಜಡ್ಜ್‌ಗಳ ನೇಮಕ

ಸಾರಾಂಶ

ರಾಜ್ಯ ಹೈ ಕೋರ್ಟ್ ಗೆ ಐವರು ನ್ಯಾಯಾಧೀಶರ ನೇಮಕಕ್ಕೆ ನಿವೃತ್ತ ಮುಖ್ಯನ್ಯಾಯಮೂರ್ತಿ ದೀಪಕ್‌ ಮಿಶ್ರಾ ಅವರ ನೇತೃತ್ವದ ಕೊಲಿಜಿಯಂ 2018ರ ಆ.1ರಂದು ಶಿಫಾರಸು ಮಾಡಿತ್ತು. ಇದೀಗ ಐವರು ನ್ಯಾಯಾಧೀಶರ ನೇಮಿಸಲು ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. 

ನವದೆಹಲಿ: ಕರ್ನಾಟಕ ಹೈಕೋರ್ಟ್‌ಗೆ ಐವರು ನ್ಯಾಯಾಧೀಶರ ನೇಮಿಸಲು ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. 

ಜಿಲ್ಲಾ ನ್ಯಾಯಾಧೀಶರಾದ ಅಶೋಕ ಗೋಳಪ್ಪ ನಿಜಗಣ್ಣವರ, ಹೇತೂರ್‌ ಸಂದೇಶ್‌ ಪುಟ್ಟಸ್ವಾಮಿ ಗೌಡ , ಕೃಷ್ಣನ್‌ ನಟರಾಜನ್‌, ಪ್ರಹ್ಲಾದ ರಾವ್‌ ಗೋವಿಂದರಾವ್‌ ಮುತಾಲಿಕ ಪಾಟೀಲ್‌ ಹಾಗೂ ಅಪ್ಪಾ ಸಾಹೇಬ ಶಾಂತಪ್ಪ ಬೆಳ್ಳುಂಕೆ ಅವರನ್ನು ಹೈಕೋರ್ಟ್‌ನ ನ್ಯಾಯಾಧೀಶರನ್ನಾಗಿ ನೇಮಿಸಲಾಗಿದೆ. 

ಈ ಐವರು ನ್ಯಾಯಾಧೀಶರ ನೇಮಕಕ್ಕೆ ನಿವೃತ್ತ ಮುಖ್ಯನ್ಯಾಯಮೂರ್ತಿ ದೀಪಕ್‌ ಮಿಶ್ರಾ ಅವರ ನೇತೃತ್ವದ ಕೊಲಿಜಿಯಂ 2018ರ ಆ.1ರಂದು ಶಿಫಾರಸು ಮಾಡಿತ್ತು.

ಇದೇ ವೇಳೆ, ಏಳು ಮಂದಿ ಹೆಚ್ಚುವರಿ ನ್ಯಾಯಾಧೀಶರಿಗೆ ಕರ್ನಾಟಕ ಹೈಕೋರ್ಟ್‌ನ ಕಾಯಂ ನ್ಯಾಯಾಧೀಶರನ್ನಾಗಿ ಬಡ್ತಿ ನೀಡುವ ಪ್ರಸ್ತಾವನೆಗೂ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. 

ಕೆಂಪಯ್ಯ ಸೋಮಶೇಖರ್‌, ಕೆ.ಎಸ್‌. ಮುದ್ಗಲ್‌, ಶ್ರೀನಿವಾಸ್‌ ಎಚ್‌.ಕುಮಾರ್‌, ಜಾನ್‌ ಮೈಕೆಲ್‌ ಕುನ್ಹಾ, ಬಸವರಾಜ್‌ ಎ. ಪಾಟೀಲ್‌, ಎನ್‌.ಕೆ. ಸುಧೀಂದ್ರರಾವ್‌ ಮತ್ತು ಡಾ ಎಚ್‌.ಬಿ ಪ್ರಭಾಕರ್‌ ಶಾಸ್ತ್ರಿ ಅವರು ಕರ್ನಾಟಕ ಹೈಕೋರ್ಟ್‌ನ ಕಾಯಂ ನ್ಯಾಯಾಧೀಶರಾಗಿ ನೇಮಕಗೊಂಡಿದ್ದಾರೆ. ಕಳೆದ ತಿಂಗಳು ಸುಪ್ರೀಂಕೋರ್ಟ್‌ ಕೊಲಿಜಿಯಂ ಇವರ ಹೆಸರುಗಳನ್ನು ಶಿಫಾರಸು ಮಾಡಲಾಗಿತ್ತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಈ ಗ್ರಾಮ ನೆನೆದರೆ ಸಾಕು ಮಕ್ಕಳು ಹುಟ್ಟಾತ್ತಾರೆ, 1500 ಜನಸಂಖ್ಯೆಯ ಇಲ್ಲಿ 3 ತಿಂಗಳ ಜನನ 27,000
ತುಂಗಭದ್ರಾ ಜಲಾಶಯದ ಕ್ರಸ್ಟ್‌ಡ್ ಗೇಟ್‌ ಅಳವಡಿಕೆ ಹಿನ್ನೆಲೆ, 6 ತಿಂಗಳು ಕಾಲುವೆಗಳಿಗೆ ನೀರು ಸ್ಥಗಿತ!