
ಬೆಂಗಳೂರು, [ನ.01]: #MeToo ರಂಪಾಟದಲ್ಲಿ ಒದ್ದಾಡುತ್ತಿರುವ ನಟ ಅರ್ಜುನ್ ಸರ್ಜಾ ನಟಿ ಶ್ರುತಿ ಹರಿಹರನ್ ಹಿರಿಯ ನಟರೊಬ್ಬರು ಕಿವಿಮಾತು ಹೇಳಿದ್ದಾರೆ.
#MeToo ಆರೋಪ ಸಂಬಂಧ ಪ್ರತಿಕ್ರಿಯಿಸಿರುವ ಬಹುಭಾಷಾ ನಟ ಚರಣ್ ರಾಜ್, ನಾನು ಎಲ್ಲಾ ಚಿತ್ರರಂಗದಲ್ಲಿಯೂ ಅರ್ಜುನ್ ಸರ್ಜಾ ಜೊತೆ ಕೆಲಸ ಮಾಡಿದ್ದು, ಅವರು ತುಂಬಾ ಒಳ್ಳೆಯವರು ಶ್ರುತಿ ಕೂಡ ಒಳ್ಳೆಯವರೇ.
ರಿಹರ್ಸಲ್ ಮಾಡುವಾಗ ಏನೋ ಟಚ್ ಆಗಿರಬಹುದು. ಅದೇನೇ ಇದ್ದರೂ ಮುಂದುವರೆಸದೇ, ಆದಷ್ಟು ಬೇಗ ಸರಿ ಮಾಡಿಕೊಳ್ಳಿ ಅಂತಾ ಇಬ್ಬರಿಗೂ ಕಿವಿಮಾತು ಹೇಳಿದರು.
#MeToo ವಿಚಾರಣೆ ವೇಳೆ ವಿಸ್ಮಯ ನಿರ್ಮಾಪಕನಿಂದ ಹೊಸ ಬಾಂಬ್!
ಇಂತಹ ಬೆಳವಣಿಗೆ ಚಿತ್ರರಂಗಕ್ಕೆ ಒಳ್ಳೆಯದಲ್ಲ. ಇದರಿಂದಾಗಿ ಸಿನಿಮಾ ಮಾಡೋದಕ್ಕೆ ಅಸಹ್ಯ ಆಗುತ್ತಿದೆ. ಆದಷ್ಟು ಬೇಗ ಅವರವರೇ ಮಾತನಾಡಿಕೊಂಡು ಬಗೆಹರಿಸಿಕೊಂಡ್ರೆ ಒಳ್ಳೆಯದು ಎಂದು ತಿಳಿ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.