41,331 ಪಾಕ್ ನಾಗರಿಕರು ಭಾರತದಲ್ಲಿದ್ದಾರೆ, ಕೇಂದ್ರವೇ ಕೊಟ್ಟ ಮಾಹಿತಿ

By Web DeskFirst Published Jul 16, 2019, 5:27 PM IST
Highlights

ಭಾರತದಲ್ಲಿ ಪಾಕಿಸ್ತಾನ ಮತ್ತು ಅಪಘಾನಿಸ್ತಾನದ ಎಷ್ಟು ಜನ ವಾಸಮಾಡುತ್ತಿದ್ದಾರೆ? ಅರೆ ಇದೆಂಥ ಪ್ರಶ್ನೆ ಎಂದುಕೊಂಡರಾ! ಇದಕ್ಕೂ ಕೇಂದ್ರ ಸರಕಾರ ಅಂಕಿ ಅಂಶಗಳಲ್ಲಿ ಉತ್ತರ ನೀಡಿದೆ.

ನವದೆಹಲಿ[ಜು. 16] ಭಾರತದಲ್ಲಿರುವ ಪಾಕಿಸ್ತಾನಿಗಳ ಸಂಖ್ಯೆ ಎಷ್ಟು? 41,331 ಪಾಕಿಸ್ತಾನಿಗಳು ಮತ್ತು 4193 ಅಪಘಾನಿಸ್ತಾನಿಗಳು ಭಾರತದಲ್ಲಿ  ದೀರ್ಘಕಾಲದಿಂದ ವಾಸಮಾಡುತ್ತಿದ್ದಾರೆ. ಪಾಕಿಸ್ತಾನ ಮತ್ತು ಅಪಘಾನಿಸ್ತಾನದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರು ಎಂದು ಪರಿಗಣನೆಗೆ ಒಳಗಾದವರು ಭಾರತದಲ್ಲಿ ಇದ್ದಾರೆ.

ಕೇಂದ್ರ ಗೃಹ ಇಲಾಖೆ ರಾಜ್ಯ ಖಾತೆ ಸಚಿವ ನಿತ್ಯಾನಂದ ರೈ ಲೋಕಸಭೆಯಲ್ಲಿ ಈ ವಿಚಾರ ಪ್ರಕಟ ಮಾಡಿದ್ದಾರೆ. ವೀಸಾ  ಸೇರಿದಂತೆ ಕೆಲವು ಸಮಸ್ಯೆ ಎದುರಿಸುತ್ತಿರುವುದು ನಮ್ಮ ಗಮನಕ್ಕೆ ಬಂದಿದ್ದು 2014ರಲ್ಲಿಯೇ ಆನ್ ಲೈನ್ ಮುಖೇನ ವೀಸಾಕ್ಕೆ ಅರ್ಜಿ ಸಲ್ಲಿಸುವ ಅವಕಾಶ ಮಾಡಿಕೊಡಲಾಗಿತ್ತು ಎಂಬ ವಿವರಣೆಯನ್ನು  ನೀಡಿದ್ದಾರೆ.

ಕರ್ತಾರ್‌ಪುರ್ ಗುರುದ್ವಾರಕ್ಕೆ ವೀಸಾ ರಹಿತ ಪ್ರವೇಶಕ್ಕೆ ಪಾಕ್ ಅಸ್ತು!

ಡಿಸೆಂಬರ್ 31, 2018ಕ್ಕೆ ಕೊನೆಗೊಂಡ ಅಂಕಿ ಅಂಶಗಳು ನಮಗೆ ಈ ಮಾಹಿತಿ ನೀಡುತ್ತಿದೆ.  ಪಾಕಿಸ್ತಾನ ಮತ್ತು ಅಪಘಾನಿಸ್ತಾನದಲ್ಲಿ ಅಲ್ಪಸಂಖ್ಯಾತರು ಎಂದು ಪರಿಗಣನೆಗೆ ಒಳಗಾದವರು ಅನುಭವಿಸುತ್ತಿರುವ ಸಂಕಷ್ಟಗಳ ಆಧಾರದಲ್ಲಿ ನಾವು ಈ ಮಾಹಿತಿ ಹೆಕ್ಕಿ ತೆಗೆದಿದ್ದೇವೆ ಎಂದು ನಿತ್ಯಾನಂದ ರೈ ತಿಳಿಸಿದ್ದಾರೆ. 

click me!