
ಶಿರಡಿ(ಅ.16): ದಸರಾ ಮಹೋತ್ಸದ ಹಿನ್ನಲೆಯಲ್ಲಿ ವಿಶ್ವಪ್ರಸಿದ್ದ ಶಿರಡಿಗೆ ಭಕ್ತಸಾಗರವೇ ಹರಿದು ಬಂದಿದೆ. 9 ದಿನಗಳ ನವರಾತ್ರಿ ಮಹೋತ್ಸವದಲ್ಲಿ ಬಾಬರವರ 98 ನೇ ಪುಣ್ಯತಿಥಿಯೂ ಬಂದಿದ್ದರಿಂದ ಅ. 10 ರಿಂದ 13 ರವರೆಗೆ ಮೂರು ಲಕ್ಷಕ್ಕೂ ಅಧಿಕ ಭಕ್ತಾದಿಗಳು ದೇಗುಲವನ್ನು ಸಂದರ್ಶಿಸಿದ್ದಾರೆ.
ಭಕ್ತಾದಿಗಳ ಸಂದರ್ಶನದಿಂದ ದೇಗುಲದ ವರಮಾನವೂ ಹೆಚ್ಚಾಗಿದ್ದು ಬರೋಬ್ಬರಿ 4 ಕೋಟಿ ರೂಪಾಯಿ ಸಂಗ್ರಹವಾಗಿದೆ. 4 ಕೋಟಿ ಪೈಕಿ ಹುಂಡಿಯಿಂದ 1.93 ಕೋಟಿ ಸಂಗ್ರಹವಾಗಿದ್ದರೆ, 93.86 ಟ್ರಸ್ಟ್ ನ ಹೆಸರಿನಲ್ಲಿ ಸಂಗ್ರಹವಾಗಿದೆ. ಜೊತೆಗೆ 26.25 ಲಕ್ಷ ಆನ್ ಲೈನ್ ಮೂಲಕ ಸಂಗ್ರಹವಾದ್ರೆ ದೇಗುಲಕ್ಕೆ ಅರ್ಪಣೆಯಾಗಿರುವ ಚಿನ್ನ ಬೆಳ್ಳಿಯ ಮೌಲ್ಯ 23.49 ಲಕ್ಷ ರೂಪಾಯಿಗಳಷ್ಟು ಅಂತ ಶ್ರೀ ಸಾಯಿಬಾಬ ಸಂಸ್ಥಾನಂ ಟ್ರಸ್ಟ್ ತಿಳಿಸಿದೆ.
ಅಸ್ಟ್ರೇಲಿಯಾದ ಅನಿವಾಸಿ ಭಾರತೀಯ ಉದ್ಯಮಿಯೊಬ್ಬರು ಬರೋಬ್ಬರಿ 748 ಗ್ರಾಮ್ ತೂಕದ ಬಂಗಾರದ ಕಿರೀಟವನ್ನು ಅರ್ಪಿಸಿದ್ದಾರೆ. ಇದರಿಂದಾಗಿ ದೇಗುಲದಲ್ಲಿ ಸದ್ಯ ಬಂಗಾರದ ಸಂಗ್ರಹ 364 ಕೆ ಜಿ ಗೆ ಏರಿಕೆಯಾಗಿದೆ. ಹೀಗಂತ ಶ್ರೀ ಸಾಯಿಬಾಬ ಸಂಸ್ಥಾನಂ ಟ್ರಸ್ಟ್ ನ ವಕ್ತಾರ ಬಾಜಿರಾವ್ ಶಿಂದೆ ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.