
ಚಿಕ್ಕಮಗಳೂರು(ಅ.16): ಕಾಫಿನಾಡಲ್ಲಿ ಸಾಮಿಲ್'ಗಳದ್ದೇ ಕಾರುಬಾರು. ಅಕ್ರಮವಾಗಿ ನಾಯಿಕೊಡೆಗಳಂತೆ ತಲೆ ಎತ್ತಿತ್ತು. ಆದ್ರೆ ಇಂತಹ 5 ಅಕ್ರಮ ಕೈಗಾರಿಕೆಗೆ ಜಿಲ್ಲಾಡಳಿತ ಶಾಕ್ ನೀಡಿದೆ. ಅಕ್ರಮ ಚಟುವಟಿಕೆಗೆ ಭರ್ಜರಿಯಾಗಿ ಬೀಗ ಬಿದ್ದಿದೆ.
ಕಾಫಿನಾಡು ಚಿಕ್ಕಮಗಳೂರಿನಲ್ಲಿ ಇತ್ತೀಚೆಗೆ ಅದೆಷ್ಟೋ ಸಾಮಿಲ್'ಗಳು ಅಕ್ರಮವಾಗಿ ತಲೆ ಎತ್ತಿಕೊಂಡಿದ್ದವು. ಕಾಫಿ ತೋಟದ ನಡುವೆ ಬೆಳೆಸುವ ಸಿಲ್ವರ್ ಮರಗಳನ್ನು ಇಲ್ಲಿ ಕುಯ್ದು ಪ್ಲೈವುಡ್ ತಯಾರಿಕೆ ನಡೆಯುತ್ತಿತ್ತು. ಯಾವುದೇ ಅಧಿಕೃತ ಅನುಮತಿ ಪಡೆಯದೇ ಕೃಷಿ ಭೂಮಿಯಲ್ಲೇ ಪ್ಲೈವುಡ್ ಕಾರ್ಖಾನೆ ನಡೆಯುತ್ತಿತ್ತು. ಚಿಕ್ಕಮಗಳೂರಿನ ತೇಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಇರುವ ಸುಮಾರು 7 ಸಾಮಿಲ್ ಗಳಿಗೆ ನೋಟೀಸ್ ಕೊಟ್ಟಿದ್ರು. ಹೀಗಿದ್ರೂ ಕ್ಯಾರೇ ಎನ್ನದ ಸಾಮಿಲ್ಗಳ ಬಾಗಿಲಿಗೆ ಸರಪಳಿ ಎಳೆದು ಬೀಗ ಜಡಿಯಲಾಯಿತು.
ಇಲ್ಲಿ ಸಾಮಿಲ್'ಗಳನ್ನು ನಡೆಸುತ್ತಿರವರೆಲ್ಲಾ ಬಹುತೇಕ ಆಂಧ್ರಪ್ರದೇಶ ಮೂಲದವರು. ದಶಕಗಳಿಂದ ಇಲ್ಲಿಯೇ ಮರದ ವ್ಯಾಪಾರ ಮಾಡಿಕೊಂಡಿದ್ದಾರೆ. ಸುಮಾರು 5 ಎಕರೆ ಗೋಮಾಳ ಪ್ರದೇಶದಲ್ಲಿ ಅನಧಿಕೃತವಾಗಿ ಕಾರ್ಖಾನೆ ನಡೆಸುತ್ತಿದ್ದರು. ಇಲ್ಲಿನ ಐದು ಕಾರ್ಖಾನೆಗಳು ಲೈಸನ್ಸ್ ಪಡೆದಿಲ್ಲ, ಕಂದಾಯ ಕಟ್ಟಿಲ್ಲ, ಕಟ್ಟಡ ಪರವಾನಿಗೆ ಪಡೆದಿಲ್ಲ. ಪಂಚಾಯ್ತಿಗೆ ಅಭಿವೃದ್ದಿ ಶುಲ್ಕ ಕಟ್ಟಿಲ್ಲ. ಭೂ ಪರಿವರ್ತನೆ ಆಗಿಲ್ಲ. ಕೈಗಾರಿಕ ಅನುಮೋಧನೆ ನಕ್ಷೆ ಪಡೆದಿಲ್ಲ. ಹೋಗ್ಲಿ ಪಂಚಾಯ್ತಿಯಿಂದ ಖಾತೆ ಸಹ ಪಡೆದಿಲ್ಲ. ಇಷ್ಟಲ್ಲದೇ ಕೆಲವು ಕೋಟಿಗಳಷ್ಟು ತೆರಿಗೆ ಬಾಕಿ, ವಿದ್ಯುತ್ ಬಿಲ್ ಬಾಕಿ ಇಟ್ಟಿದ್ದರು.
ಒಟ್ಟಾರೆ ಯಾವುದೇ ಕಾನೂನು ಕ್ರಮ ಪಾಲಿಸದೆ, ಸರ್ಕಾರಿ ಗೋಮಾಳ ಮತ್ತು ಕೃಷಿ ಜಾಗದಲ್ಲಿ ಕೈಗಾರಿಕೆ ಸ್ಥಾಪಿಸಿ, ಸರ್ಕಾರದ ಬೊಕ್ಕಸಕ್ಕೆ ಮೋಸ ಮಾಡ್ತಿದ್ದ 5 ಪ್ಯಾಕ್ಟರಿಗಳಿಗೆ ಬೀಗ ಬಿದ್ದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.