
ಒಡಿಶಾ(ಅ.16): ಪ್ರಾಣಿಗಳಲ್ಲೂ ಮಮತೆ, ಮಮಕಾರ ಇರುತ್ತೆ ಅನ್ನೋದಕ್ಕೆ ಮತ್ತೊಂದು ಘಟನೆ ಸಾಕ್ಷಿಯಾಗಿದೆ. ತಾಯಿ ಆನೆಯೊಂದು ತನ್ನ ಮೃತ ಮರಿ ಆನೆಗೆ ಕಾವಲು ಕಾಯ್ದಿದೆ. ಈ ಮೂಲಕ ಪ್ರಾಣಿಗಳಲ್ಲೂ ತಾಯಿ ಪ್ರೀತಿ ಇದೆ ಎಂಬುದನ್ನು ಸಾಬೀತುಪಡಿಸಿದೆ.
ಒಡಿಶಾದ ಮಯೂರಭಂಜ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಇಲ್ಲಿನ ಸಿಮಿಲಿಪಾಲ್ ತಪ್ಪಲಿನ ದುಕುರಾ ವ್ಯಾಪ್ತಿಯ ಅರಣ್ಯದಲ್ಲಿ ಮರಿ ಆನೆಯೊಂದು ಮೃತಪಟ್ಟಿದೆ. ಇದನ್ನು ಕಂಡ ತಾಯಿ ಆನೆ ಮರಿಯ ಶವದ ಮುಂದೆ ಬಂದು ನಿಂತು, ಅದಕ್ಕೆ ಕಾವಲು ನೀಡಿದೆ. ಅಷ್ಟೇ ಅಲ್ಲ ವಿಷಯ ತಿಳಿದು ಸ್ಥಳಕ್ಕೆ ಹೋದ ಅರಣ್ಯ ಸಿಬ್ಬಂದಿಯನ್ನೂ ಮರಿ ಬಳಿಗೆ ಹೋಗಲು ತಾಯಿ ಆನೆ ಬಿಟ್ಟಿಲ್ಲ. ನಂತರ ಅರಣ್ಯ ಸಿಬ್ಬಂದಿ ಹರಸಾಹಸ ಪಟ್ಟು ತಾಯಿ ಆನೆಯನ್ನು ದೂರು ಓಡಿಸಿ, ಮರಿ ಆನೆಯ ಅಂತ್ಯಸಂಸ್ಕಾರ ಮಾಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.