ವಿಷಾನಿಲ ಸೋರಿಕೆ: 31 ಕೋತಿಗಳು, 14 ಪಾರಿವಾಳಗಳ ಸಾವು

Published : Dec 17, 2018, 09:00 AM IST
ವಿಷಾನಿಲ ಸೋರಿಕೆ: 31 ಕೋತಿಗಳು, 14 ಪಾರಿವಾಳಗಳ ಸಾವು

ಸಾರಾಂಶ

ಕೈಗಾರಿಕಾ ಕ್ಷೇತ್ರದಿಂದ ಸೋರಿಕೆಯಾದ ವಿಷಾನಿಲದ ಪರಿಣಾಮ ಸುಮಾರು 30 ಮಂಗಗಳು ಮತ್ತು 14 ಪಾರಿವಾಳಗಳು ಮೃತಪಟ್ಟಿರುವ ದುರಂತ ಘಟನೆ ಮಹಾರಾಷ್ಟ್ರದಲ್ಲಿ ಸಣಭವಿಸಿದೆ.

ರಾಯಗಢ(ಮಹಾರಾಷ್ಟ್ರ)[ಡಿ.17]: ಇಲ್ಲಿನ ಕೈಗಾರಿಕೆಯೊಂದರಿಂದ ಸೋರಿಕೆಯಾದ ವಿಷಾನಿಲದ ಪರಿಣಾಮ ಸುಮಾರು 30 ಮಂಗಗಳು ಮತ್ತು 14 ಪಾರಿವಾಳಗಳು ಮೃತಪಟ್ಟಿರುವ ದುರಂತ ಘಟನೆ ಮಹಾರಾಷ್ಟ್ರದ ರಾಯಗಢ ಜಿಲ್ಲೆಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

ರಸಾಯನ ಸಂಗ್ರಹಿಸಲಾಗಿದ್ದ ಟ್ಯಾಂಕ್‌ನಿಂದ ವಿಷಾನಿಲ ಸೋರಿಕೆಯಿಂದ ಈ ದುರಂತ ಸಂಭವಿಸಿರಬಹುದು ಎಂದು ಕೈಗಾರಿಕೆ ಸುರಕ್ಷತೆ ಮತ್ತು ಆರೋಗ್ಯ ನಿರ್ದೇಶನಾಲಯದ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. ಭಾರತ್‌ ಪೆಟ್ರೋಲಿಯಂ ಕಾರ್ಪೋರೇಷನ್‌ ಲಿ. ಘಟಕದಿಂದ ವಿಷಾನಿಲ ಸೋರಿಕೆಯಿಂದಾದ ಈ ಘಟನೆ ನಿಜಕ್ಕೂ ದುರದೃಷ್ಟಕರ ಎಂದು ರಾಯಗಢ ಜಿಲ್ಲಾಧಿಕಾರಿ ವಿಜಯ್‌ ಸೂರ್ಯವಂಶಿ ಹೇಳಿದ್ದಾರೆ.

ಘಟನೆ ಬೆನ್ನಲ್ಲೇ, ಅರಣ್ಯ ಇಲಾಖೆ, ಮಹಾರಾಷ್ಟ್ರ ಮಾಲಿನ್ಯ ನಿಇಯಂತ್ರಣ ಮಂಡಳಿ ಹಾಗೂ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಉದ್ಯಮಿಗೆ ಲವ್‌ ಟ್ರ್ಯಾಪ್‌, ವೈರಲ್‌ ಆದ ಡಿಎಸ್‌ಪಿ ಕಲ್ಪನಾ ವರ್ಮಾ ಚಾಟ್‌..!
ಸಿದ್ದೇಶ್ವರ್‌ ಎಕ್ಸ್‌ಪ್ರೆಸ್‌ನಲ್ಲಿ ನಿದ್ದೆಗೆ ಜಾರಿದ ಚಿನ್ನದ ವ್ಯಾಪಾರಿಗೆ ಆಘಾತ: 5.53 ಕೋಟಿ ಮೊತ್ತದ ಚಿನ್ನ ಮಾಯ