ಐಪಿಎಸ್ ಆಯ್ತು, ಇದೀಗ ಕೆಎಎಸ್ ಅಧಿಕಾರಿಗಳು ವರ್ಗಾವಣೆ

By Web DeskFirst Published Sep 16, 2018, 7:11 AM IST
Highlights

ಐಪಿಎಸ್ ಅಧಿಕಾರಿಗಳನ್ನು ವರ್ಗಾಯಿಸಿ ಮಾಸ್ಟರ್ ಸ್ಟ್ರೋಕ್ ನೀಡಿದ್ದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಇದೀಗ ಕೆಎಎಸ್ ಅಧಿಕಾರಿಗಳನ್ನೂ ವರ್ಗಾಯಿಸಿದ್ದಾರೆ.

ಬೆಂಗಳೂರು (ಸೆ.16): ಒಬ್ಬರು ಐಎಎಸ್ ಅಧಿಕಾರಿ ಹಾಗೂ 30 ಮಂದಿ ಕೆಎಎಸ್ ಅಧಿಕಾರಿಗಳನ್ನು ವಿವಿಧ ಹುದ್ದೆಗಳಿಗೆ ವರ್ಗಾವಣೆ ಮಾಡಿ ರಾಜ್ಯ ಸರ್ಕಾರವು ಶನಿವಾರ ಆದೇಶ ಹೊರಡಿಸಿದೆ.

ಚಾಮರಾಜನಗರ ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ಅವರನ್ನು ಮೈಸೂರು ವಿಭಾಗದ ಪ್ರಾದೇಶಿಕ ಆಯುಕ್ತ ಪ್ರಭಾರ ಹುದ್ದೆಯಿಂದ ಬಿಡುಗಡೆಗೊಳಿಸಲಾಗಿದೆ. ಮೈಸೂರು ಆಡಳಿತ ಮತ್ತು ತರಬೇತಿ ಸಂಸ್ಥೆ ಮಹಾ ನಿರ್ದೇಶಕ ಕಪಿಲ್ ಮೋಹನ್ ಅವರಿಗೆ ಇದರ ಪ್ರಭಾರ ಹುದ್ದೆ ವಹಿಸಿ ಆದೇಶಿಸಲಾಗಿದೆ.

ಉಳಿದಂತೆ 30 ಮಂದಿ ಹಿರಿಯ ಹಾಗೂ ಕಿರಿಯ ಶ್ರೇಣಿ ಕೆಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿದ್ದು, ಎ.ಎಂ. ಯೋಗೀಶ್ ಅವರನ್ನು ಕೆಆರ್‌ಐಡಿಎಲ್ ಮುಖ್ಯಆಡಳಿತಾಧಿಕಾರಿಯಾಗಿ, ಸುರೇಶ್ ಬಿ ಇಟ್ನಾಳ್ ಅವರನ್ನು ಹುಬ್ಬಳ್ಳಿ-ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಹುದ್ದೆಗೆ, ಡಾ.ಕೆ.ಎನ್. ಅನುರಾಧ-ಕಾನೂನು ಮಾಪನಶಾಸ್ತ್ರ ಇಲಾಖೆ ನಿಯಂತ್ರಕ ಹುದ್ದೆ, ಎ.ಬಿ. ಬಸವರಾಜು-ಕರ್ನಾಟಕದ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತದ ವ್ಯವಸ್ಥಾಪಕ ನಿರ್ದೇಶಕ, ಆರತಿ ಆನಂದ್-ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಉಪ ಕಾರ್ಯದರ್ಶಿ, ಎಂ.ಕೆ. ಜಗದೀಶ್-ಬೆಂಗಳೂರು ನಗರ ಜಿಲ್ಲೆ ವಿಶೇಷ ಜಿಲ್ಲಾಧಿಕಾರಿ1, ಶಾಂತ ಎಲ್/ ಹುಲ್ಮನಿ-ರಾಜೀವ್ ಗ್ರಾಮೀಣ ವಸತಿ ನಿಗಮ ಪ್ರಧಾನ ವ್ಯವಸ್ಥಾಪಕ ಡಾ.ಎಸ್. ನಾಗರಾಜು-ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮುಖ್ಯ ಆಡಳಿತಾಧಿಕಾರಿ, ಚಿದಾನಂದ ಸದಾಶಿವ ವಟಾರೆ-ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಪರ ನಿರ್ದೇಶಕ, ಎನ್. ಚಂದ್ರಶೇಖರ್-ಆರೋಗ್ಯ ಇಲಾಖೆ ಉಪ ಕಾರ್ಯದರ್ಶಿ, ಕೆ. ಚನ್ನಬಸಪ್ಪ- ತುಮಕೂರು ಜಿಲ್ಲೆ ಅಪರ ಜಿಲ್ಲಾಧಿಕಾರಿ, ಶಾಂತರಾಜು ವೈ.ಬಿ.-ಬಿಡಿಎ ಕಾರ್ಯದರ್ಶಿ, ಸಿನಾಗರಾಜು-ಕರ್ನಾಟಕ ಡ್ರಗ್ಸ್ ಅಂಡ್ ಲಾಜಿಸ್ಟಿಕ್ ವೇರ್ ಹೌಸಿಂಗ್ ಸೊಸೈಟಿ ಅಪರ ನಿರ್ದೇಶಕ, ಕೆ.ಎಚ್. ಶಿವಕುಮಾರ್-ಚಿಕ್ಕಮಗಳೂರು ಉಪ ವಿಭಾಗಾಧಿಕಾರಿ, ಟಿ. ಜವರೇಗೌಡ- ಮಡಿಕೇರಿ ಉಪ ವಿಭಾಗಾಧಿಕಾರಿ, ರವೀಂದ್ರ ಕರಲಿಂಗಣ್ಣವರ್-ವಿಜಯಪುರ ಉಪ ವಿಭಾಗಾಧಿಕಾರಿ, ಜಿ.ಆರ್. ಹರಿಶಿಲ್ಪ - ಎನ್‌ಎಚ್‌ಎಐ ವಿಶೇಷ ಭೂಸ್ವಾಧೀನಾಧಿಕಾರಿ, ಉಷಾರಾಣಿ ಬಿಬಿಎಂಪಿ ಆಡಳಿತ ವಿಭಾಗದ ಸಹಾಯಕ ಆಯುಕ್ತೆ.

click me!