
ನವದೆಹಲಿ[ಜು.31]: ದೇಶದಲ್ಲಿ ಒಟ್ಟು 5,344 ದೊಡ್ಡ ಜಲಾಶಯಗಳಿವೆ. ಅವುಗಳಲ್ಲಿ 293ಕ್ಕೂ ಹೆಚ್ಚು ಜಲಾಶಯಗಳು 100 ವರ್ಷಗಳಷ್ಟು ಹಳೆಯದ್ದಾಗಿವೆ. ದೇಶಾದ್ಯಂತ ಇರುವ ಜಲಾಶಯಗಳ ಮೇಲ್ವಿಚಾರಣೆಗಾಗಿ ರಾಷ್ಟ್ರೀಯ ಜಲಾಶಯ ಸುರಕ್ಷತೆ ಪ್ರಾಧಿಕಾರ ರಚಿಸುವ ಅಗತ್ಯವಿದೆ ಎಂದು ಕೇಂದ್ರ ಸರ್ಕಾರ ಸೋಮವಾರ ಲೋಕಸಭೆಗೆ ಮಾಹಿತಿ ನೀಡಿದೆ.
ಈ ಪ್ರಾಧಿಕಾರದಿಂದ ಡ್ಯಾಂಗಳ ಸಮರ್ಪಕ ಮೇಲ್ವಿಚಾರಣೆ, ನಿರ್ವಹಣೆ, ತಪಾಸಣೆ, ಸಮಸ್ಯೆ ಏರ್ಪಟ್ಟಲ್ಲಿ ಅವುಗಳ ನಿವಾರಣೆ ಹಾಗೂ ಅಂತಾರಾಜ್ಯ ವಿವಾದ ಬಗೆಹರಿಸಲು ಸುಲಭವಾಗಲಿದೆ ಎಂದು ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ತಿಳಿಸಿದ್ದಾರೆ.
ಇನ್ನು 1,041 ಜಲಾಶಯಗಳ ಪೈಕಿ ಶೇ.20ರಷ್ಟುಡ್ಯಾಂಗಳು 50ರಿಂದ 100 ವರ್ಷಗಳ ಒಳಗೆ ನಿರ್ಮಾಣವಾಗಿವೆ. ಶೇ.92ರಷ್ಟುಜಲಾಶಯಗಳು ಅಂತಾರಾಜ್ಯ ನದಿಗಳಿಗೆ ಸಂಬಂಧಿಸಿದ್ದು ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.