3 ವರ್ಷಕ್ಕೆ 13 ಸರ್ಕಾರಿ ನೌಕರಿ ಗಿಟ್ಟಿಸಿದ ರೇಣುಕಾ

By Suvarna News  |  First Published Apr 27, 2019, 8:51 AM IST

ಒಂದು ನೌಕರಿ ಪಡೆದುಕೊಳ್ಳೂವುದೇ ಕಷ್ಟಕರವಾದ ಈ ಸಮಯದಲ್ಲಿ ಯುವತಿಯೋರ್ವಳು 3 ವರ್ಷದಲ್ಲಿ 13 ಸರ್ಕಾರಿ ನೌಕರಿ ಗಿಟ್ಟಿಸಿದ ಯುವತಿಯ ಬಗ್ಗೆ ನೀವಿಲ್ಲಿ ತಿಳಿಯಬಹುದು


ಮುಗಳಖೋಡ : ಇಂದು ಒಂದು ಸರ್ಕಾರಿ ನೌಕರಿ ಗಿಟ್ಟಿಸಿಕೊಳ್ಳುವಷ್ಟರಲ್ಲಿ ಸಾಕಷ್ಟು ಮಂದಿ ಸುಸ್ತು ಹೊಡೆದಿರುತ್ತಾರೆ. ಹಲವರು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯುತ್ತಲೇ ಇರುತ್ತಾರೆ. 

ಇನ್ನು ಕೆಲವರು ಪರೀಕ್ಷೆಗಳನ್ನು ಬರೆದು ಬರೆದು ಸಾಕಾಗಿ ಸರ್ಕಾರಿ ನೌಕರಿಯ ಸಹವಾಸವೇ ಬೇಡವೆಂದು ಕೈ ಮುಗಿದು ಸುಮ್ಮನಾಗಿ ಬಿಡುತ್ತಾರೆ. ಆದರೆ, ಇಲ್ಲೊಬ್ಬಳು ಯುವತಿ ಕೇವಲ ಮೂರು ವರ್ಷಗಳಲ್ಲಿ 13 ಸರ್ಕಾರಿ ನೌಕರಿಗಳಿಗೆ ಆಯ್ಕೆಯಾಗಿದ್ದಾಳೆ.

Tap to resize

Latest Videos

undefined

ಡೆಸ್ಟ್ ಮೇಲೆ ಪಾಟಿ ಇಟ್ಟು ವರ್ಕ್ ಪ್ರೆಷರ್‌ಗೆ ಹೊಡೀರಿ ಗೋಲಿ!

 

ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಸವಸುದ್ದಿ ಗ್ರಾಮದ ಬಡ ರೈತ ಕುಟುಂಬದಲ್ಲಿ ಜನಿಸಿದ ರೇಣುಕಾ ಜೋಡಟ್ಟಿ (28) ಈ ಸಾಧಕಿ. ಪ್ರಸ್ತುತ ಬಾಗಲಕೋಟೆ ಜಿಲ್ಲೆಯ ತೇರದಾಳ ಅಲ್ಪಸಂಖ್ಯಾತ ಮೊರಾರ್ಜಿ ವಸತಿ ಶಾಲೆಯಲ್ಲಿ ಶಿಕ್ಷಕಿಯಾಗಿರುವ ರೇಣುಕಾ, ಕೆಎಎಸ್ ಪರೀಕ್ಷೆ ಬರೆದು ಉನ್ನತ ಹುದ್ದೆ ಅಲಂಕರಿಸುವ ಕನಸು ಹೊಂದಿದ್ದಾರೆ. ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿಯೇ ವಿದ್ಯಾಭ್ಯಾಸ ಮಾಡಿದ ರೇಣುಕಾ, ಧಾರವಾಡ ವಿವಿಯಿಂದ ದೂರಶಿಕ್ಷಣದಲ್ಲಿ ಬಿಎ ಮತ್ತು ಅರ್ಥಶಾಸ್ತ್ರದಲ್ಲಿ ಎಂಎ ಪದವಿ ಪಡೆದಿದ್ದಾರೆ. 10 ವರ್ಷಗಳ ಹಿಂದೆ ತಂದೆಯನ್ನು ಕಳೆದುಕೊಂಡ ರೇಣುಕಾಳ ಈ ಸಾಧನೆಗೆ ಬೆನ್ನಿಗೆ ನಿಂತದ್ದು ಆಕೆಯ ತಾಯಿ, ಅಣ್ಣ.

ಟ್ಯಾಲೆಂಟ್ ಸೆಳೆಯಲು ಕಂಪನಿಗಳ ಮಾರ್ಕೆಂಟಿಂಗ್ ತಂತ್ರ

ಅಬಕಾರಿ ಇಲಾಖೆಯಲ್ಲಿ ಮೊದಲ ಹುದ್ದೆ: ರೇಣುಕಾಗೆ ಮೊದಲ ಹುದ್ದೆ ಒದಗಿ ಬಂದಿದ್ದು ಅಬಕಾರಿ ಇಲಾಖೆಯಲ್ಲಿ ಗಾರ್ಡ್ ಆಗಿ. ಬಳಿಕ ಪೊಲೀಸ್ ಕಾನ್‌ಸ್ಟೇಬಲ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಮೇಲ್ವಿಚಾರಕಿ, ಮೊರಾರ್ಜಿ ಶಾಲೆ ಪ್ರಥಮ ದರ್ಜೆ ಗಣಕಯಂತ್ರ ಸಹಾಯಕಿ, ಮೊರಾರ್ಜಿ ವಸತಿ ಮ್ಯಾಟ್ರಿಕ್ ಪೂರ್ವಪ್ರಥಮ ದರ್ಜೆ ಗಣಕಯಂತ್ರ ಸಹಾಯಕಿ, ಮೊರಾರ್ಜಿ ವಸತಿಶಾಲೆಯ ಪಿಯು ಕಾಲೇಜು ಪ್ರಥಮ ದರ್ಜೆ ಗಣಕಯಂತ್ರ ಸಹಾಯಕಿ, ಮಹಾನಗರ ಪಾಲಿಕೆಯ ಪ್ರಥಮ ದರ್ಜೆ ಕಂದಾಯ ನಿರೀಕ್ಷಕಿ, ಸಾಂಖಿಕ ಇಲಾಖೆಯ ನಿರೀಕ್ಷಕಿ, ಅಲ್ಪಸಂಖ್ಯಾತರ ಇಲಾಖೆ ಕಚೇರಿ ಮೇಲ್ವಿಚಾರಕಿ, ನವೋದಯ ಶಾಲೆಯಲ್ಲಿ ಪ್ರಥಮ ದರ್ಜೆ ಗಣಕಯಂತ್ರ ಸಹಾಯಕಿ, ಮಹಾನಗರ ಪಾಲಿಕೆಯ ಕರ ವಸೂಲಿಗಾರ್ತಿ, ನವೋದಯ ಶಾಲೆಯಲ್ಲಿ ಶಿಕ್ಷಕಿ ಸೇರಿ 13 ಹುದ್ದೆಗಳಿಗೆ ಆಯ್ಕೆಯಾಗಿದ್ದಾರೆ.

ವರದಿ : ಶ್ರೀಮಂತ ಘಟನಟ್ಟಿ

click me!