ಕಹಿ ನೆನಪು ಮಾಸುವ ಮುನ್ನವೇ ಬೆಂಗಳೂರಲ್ಲಿ ಕುಸಿದು ಬಿತ್ತು 25ವರ್ಷಗಳ ಹಳೆ ಕಟ್ಟಡ

By Suvarna Web DeskFirst Published Oct 17, 2017, 12:44 PM IST
Highlights

ಕಟ್ಟಡ ಕುಸಿದು 7 ಮಂದಿ ಮೃತರಾದ ಕಹಿ ನೆನಪು ಮಾಸುವ ಮುನ್ನವೇ ಬೆಂಗಳೂರಲ್ಲಿ ಮತ್ತೊಂದು ಕಟ್ಟಡ ಕುಸಿದಿದೆ. ಆದ್ರೆ ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಯಶವಂತಪುರದ ವಾರ್ಡ್ ನಂ-37 ರಲ್ಲಿ 25ವರ್ಷಗಳ ಹಳೆ ಕಟ್ಟಡ ಕುಸಿದು ಆತಂಕ ಸೃಷ್ಟಿಯಾಗಿತ್ತು. ಚಿಕ್ಕರಾಮಣ್ಣ ಎಂಬುವರಿಗೆ ಸೇರಿದ ಕಟ್ಟಡ ಕಳೆದ ಎರಡು ತಿಂಗಳಿಂದ ಸುರಿದ ಭಾರಿ ಮಳೆಗೆ ಶಿಥಿಲಗೊಂಡು ಕುಸಿದಿದೆ.

ಬೆಂಗಳೂರು(ಅ.17): ಕಟ್ಟಡ ಕುಸಿದು 7 ಮಂದಿ ಮೃತರಾದ ಕಹಿ ನೆನಪು ಮಾಸುವ ಮುನ್ನವೇ ಬೆಂಗಳೂರಲ್ಲಿ ಮತ್ತೊಂದು ಕಟ್ಟಡ ಕುಸಿದಿದೆ. ಆದ್ರೆ ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಯಶವಂತಪುರದ ವಾರ್ಡ್ ನಂ-37 ರಲ್ಲಿ 25ವರ್ಷಗಳ ಹಳೆ ಕಟ್ಟಡ ಕುಸಿದು ಆತಂಕ ಸೃಷ್ಟಿಯಾಗಿತ್ತು. ಚಿಕ್ಕರಾಮಣ್ಣ ಎಂಬುವರಿಗೆ ಸೇರಿದ ಕಟ್ಟಡ ಕಳೆದ ಎರಡು ತಿಂಗಳಿಂದ ಸುರಿದ ಭಾರಿ ಮಳೆಗೆ ಶಿಥಿಲಗೊಂಡು ಕುಸಿದಿದೆ.

ಹಳೆ ಕಟ್ಟಡದಲ್ಲಿ ಕೆಳಗಡೆ ಎರಡು ಅಂಗಡಿಗಳನ್ನ, ಮೇಲೆ ಒಂದು ಮನೆಯನ್ನ ಬಾಡಿಗೆಗೆ ನೀಡಲಾಗಿತ್ತು. ಸಹಜವಾಗಿ ದಿನಸಿ ಅಂಗಡಿಯಾಗಿದ್ದರಿಂದ ಇಲಿ-ಹೆಗ್ಗಣ ತಳಹದಿಯಲ್ಲಿ ಬಿಲಗಳನ್ನ ಮಾಡಿಕೊಂಡಿದ್ದವು. ಬಿಲಗಳಲ್ಲಿ ನೀರು ನುಗ್ಗಿ ತಳಹದಿ ಕುಸಿದ ಪರಿಣಾಮ ಬಿಲ್ಡಿಂಗ್ ಎರಡು ಅಡಿಗಳಷ್ಟು ವಾಲಿದೆ. ಮೇಲೆ ಬಾಡಿಗೆ ಮನೆಯಲ್ಲಿದ್ದ ಟಿವಿ, ಫ್ರಿಡ್ಜ್ ಹಾಗು ಗೃಹೋಪಯೋಗಿ ವಸ್ತುಗಳು ನಾಶವಾಗಿವೆ.

Latest Videos

ಘಟನೆ ಸಂಭವಿಸುತ್ತಿದ್ದಂತೆ ಸ್ಥಳಕ್ಕೆ ಸ್ಥಳೀಯ ಕಾರ್ಪೊರೇಟರ್ ಬಿ.ಕೆ.ವೆಂಕಟೇಶ್ ಮತ್ತು ಬಿಬಿಎಂಪಿ.ಎಇಇ ಉಮೇಶ್, ಯಶವಂತಪುರ ಪೊಲೀಸರು ಭೇಟಿ ನೀಡಿ ಪರಿಶೀಲಿನೆ ನಡೆಸಿದರು.

 

click me!