
ನವದೆಹಲಿ(ಅ. 17): ಕೇವಲ 7,777 ರೂ ಡೌನ್'ಪೇಮೆಂಟ್'ನಲ್ಲಿ ಐಫೋನ್ 7 (32ಜಿಬಿ) ಸ್ಮಾರ್ಟ್'ಫೋನ್ ಪಡೆಯಿರಿ. ಇಂಥದ್ದೊಂದು ಆಫರ್'ನ್ನು ಏರ್'ಟೆಲ್ ಸಂಸ್ಥೆ ಪ್ರಕಟಿಸಿದೆ. ಮಿಕ್ಕ ಹಣವನ್ನು 2 ವರ್ಷಗಳವರೆಗೆ 2,499 ರೂ ಇಎಂಐ ಮೂಲಕ ಕಟ್ಟಬಹುದಾಗಿದೆ. ಈ ಎರಡು ವರ್ಷ ನಿಮಗೆ ಏರ್'ಟೆಲ್'ನ ಡೇಟಾ ಪ್ಯಾಕೇಜ್'ಗಳು ಸಿಗಲಿವೆ. ಈ 2,499 ರೂ ಇಎಂಐನಲ್ಲಿ ತಿಂಗಳಿಗೆ 30ಜಿಬಿ ಡೇಟಾ ಮತ್ತು ಅನ್'ಲಿಮಿಟೆಡ್ ಕರೆಗಳು ಲಭ್ಯವಿರಲಿದೆ. ನಿಮಗೆ ಏರ್'ಟೆಲ್'ನ ಪ್ಯಾಕೇಜ್'ಗಳು ಬೇಡವೆನಿಸಿದರೆ ಯಾವಾಗ ಬೇಕಾದರೂ ಇಎಂಐ ಸ್ಕೀಮ್'ನಿಂದ ಹೊರಬೀಳಬಹುದು. ಆದರೆ, ಬಾಕಿ ಉಳಿದಿರುವ ಹಣವನ್ನು 7 ದಿನಗಳೊಳಗೆ ತೀರಿಸಬೇಕು.
ಭಾರ್ತಿ ಏರ್'ಟೆಲ್ ಸಂಸ್ಥೆಯು ಈ ಐಫೋನ್ ಸ್ಕೀಮ್'ಗಾಗಿ ಆ್ಯಪಲ್, ಎಚ್'ಡಿಎಫ್'ಸಿ ಬ್ಯಾಂಕ್, ಕ್ಲಿಕ್ಸ್ ಕ್ಯಾಪಿಟಲ್, ಸೇನ್ಸ್ ಟೆಕ್ನಾಲಜೀಸ್, ಬ್ರೈಟ್'ಸ್ಟಾರ್ ಟೆಲಿಕಮ್ಯೂನಿಕೇಶನ್ಸ್ ಮತ್ತು ವುಲ್ಕಾನ್ ಎಕ್ಸ್'ಪ್ರೆಸ್ ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಂಡಿದೆ.
ನಿಮಗೆ ಬೇರೆ ಐಫೋನ್ ಮಾಡೆಲ್'ಗಳೂ ಈ ಸ್ಕೀಮ್'ನಲ್ಲಿ ಲಭ್ಯ. ಅದರ ಡೌನ್'ಪೇಮೆಂಟ್ ಮತ್ತು ಇಎಂಐಗಳು ಬೇರೆ ಬೇರೆ ಇರುತ್ತವೆ. ಏರ್'ಟೆಲ್'ನ ಸ್ಕೀಮ್ ಮುಖಾಂತರ ಐಫೋನ್ ಖರೀದಿಸಿದರೆ ಕನಿಷ್ಠ 7 ಸಾವಿರ ರೂ ಉಳಿತಾಯ ಮಾಡಬಹುದು ಎಂದು ತಜ್ಞರು ಹೇಳುತ್ತಾರೆ. ಐಫೋನ್ 7 ಸ್ಮಾರ್ಟ್'ಫೋನ್ ಸದ್ಯ ಮಾರುಕಟ್ಟೆಯಲ್ಲಿ 40 ಸಾವಿರ ರೂ ಆಸುಪಾಸಿಗೆ ಸಿಗುತ್ತದೆ. ಏರ್'ಟೆಲ್ ಆನ್'ಲೈನ್ ಸ್ಟೋರ್'ನಲ್ಲಿ ಈ ಸ್ಕೀಮ್ ಲಭ್ಯವಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.